ಸುದ್ದಿವಿಜಯ, ಜಗಳೂರು: ಕಳೆದ 5 ವರ್ಷಗಳಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲೇ ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿದ್ದ ಜಗಳೂರು ತಾಲೂಕು ಈ ಬಾರಿ ಶೇ.70.1 ರಷ್ಟು ಫಲಿತಾಂಶದ ಮೂಲಕ 4ನೇ ಸ್ಥಾನಕ್ಕೆ ಕುಸಿದಿದೆ.
ಬರಪೀಡಿತ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ತಾಲೂಕಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅದರಲ್ಲೂ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕಳೆದ 5 ವರ್ಷಗಳಿಂದ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನವನ್ನು ಬಿಟ್ಟುಕೊಟ್ಟಿರಲಿಲ್ಲ. ಆದರೆ 2023-24ನೇ ಸಾಲಿನ ಫಲಿತಾಂಶದಲ್ಲಿ 4ನೇ ಸ್ಥಾನಕ್ಕೆ ಕುಸಿದಿದೆ.
ಪರೀಕ್ಷೆಗೆ ಕುಳಿತದಿದ್ದ ಪುರುಷ ವಿದ್ಯಾರ್ಥಿಗಳ ಸಂಖ್ಯೆ 1134ರಲ್ಲಿ 699 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಅದರಂತೆ 1187 ವಿದ್ಯಾರ್ಥಿನಿಯರಲ್ಲಿ 926 ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ. ಶೇ.70.1 ರಷ್ಟು ಫಲಿತಾಂಶ ಹೊರ ಬಂದಿದ್ದು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ನಿರಾಶೆ ಮೂಡಿಸಿದೆ.
ಟಾಪ್ ವಿದ್ಯಾರ್ಥಿಗಳು: ಪಟ್ಟಣದ ಎನ್‍ಎಂಕೆ ಶಾಲೆಯ ಜೆ.ಎನ್.ಸಿಂಚನಾ(614), ಎನ್‍ಆರ್ ಸಂಜನಾ (605) ಮತ್ತು ಎಚ್.ಬಿ.ದೀಪಿಕಾ (605) ಅಂಗಳನ್ನು ಗಳಿಸುವ ಮೂಲಕ ಶೇ.91ರಷ್ಟು ಫಲಿತಾಂಶ ಬಂದಿದೆ.
ಜೆಎಂ ಇಮಾಂ ಶಾಲೆ ಫಲಿತಾಂಶ:
ಪಟ್ಟಣದ ಜೆ.ಎಂ ಇಮಾಂ ಸ್ಮಾರಕ ಶಾಲೆಗೆ ಶೇ.93.47 ರಷ್ಟು ಫಲಿತಾಂಶ ಬಂದಿದ್ದು, ಎಂಜಿ ಸಿಂಚನಾ(611), ಮಹೇಶ್(608), ಕೆ.ಟಿ.ಅಮೃತಾ (600) ಪಡೆಯುವ ಮೂಲಕ ಪರೀಕ್ಷೆಗೆ ಕುಳಿತ 46 ವಿದ್ಯಾರ್ಥಿಗಳಲ್ಲಿ 16 ವಿದ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ,
21 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 5 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯೊಂದಿಗೆ 43 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.
RVS ಶಾಲೆ: ಸೌಮ್ಯಾ(596), ಹರ್ಷಿತಾ (590), ಮೊಹಮದ್ ಶೋಯಬ್(562) ಅಂಕಗಳಿಸಿದ್ದಾರೆ.
ನೂರಕ್ಕೆ ನೂರು, ಮೂರು ಶಾಲೆಗಳು:
ತಾಲೂಕಿನ ಮುಗ್ಗಿದರಾಗಿಹಳ್ಳಿಯ ಮೊರಾರ್ಜಿ ವಸತಿ ಶಾಲೆ, ಉದ್ದಗಟ್ಟದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಮತ್ತು ದಿದ್ದಿಗೆಯ ರೂರಲ್ ಪಬ್ಲಿಕ್ ಸ್ಕೂಲ್ ಶೇ.100ಕ್ಕೆ ನೂರು ಫಲಿತಾಂಶ ಬಂದಿದೆ.
ಕಡಿಮೆ ಅಂಕಗಳಿಸಿದ ಶಾಲೆಗಳು:
ದೇವಿಕೆರೆಯ ಸರಕಾರಿ ಶಾಲೆ (ಶೇ.18.18), ಉಜಿನಿ ಪ್ರೌಢಶಾಲೆ (ಶೇ29) ರಸ್ತೆ ಮಾಚಿಕೆರೆಯ ಶಾಲೆ(ಶೇ.37) ರಷ್ಟು ಕಡಿಮೆ ಫಲಿತಾಂಶ ಬಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಈ.ಹಾಲಮೂರ್ತಿ ಮಾಹಿತಿ ನೀಡಿದ್ದಾರೆ.
ಕಳೆದ 5 ವರ್ಷಗಳಿಂದಲೂ ತಾಲೂಕು ಪ್ರಥಮ ಸ್ಥಾನದಲ್ಲಿತ್ತು. ಆದರೆ ಈ ಬಾರಿ ಫಲಿತಾಂಶದಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿರುವುದು ಬೇಸರ ತಂದಿದೆ. ವಿದ್ಯಾರ್ಥಿಗಳಿಗಾಗಿ ಇನ್ನೂ ಎರಡು ಪರೀಕ್ಷೆಗಳನ್ನು ಶಿಕ್ಷಣ ಇಲಾಖೆ ಆಯೋಜನೆ ಮಾಡಿದೆ. ಫೇಲ್ ಆದ ವಿದ್ಯಾರ್ಥಿಗಳು ಎದೆ ಗುಂದದೇ ಪರೀಕ್ಷೆ ಬರೆದು ಉತ್ತೀರ್ಣರಾಗಿ ಎಂದು ಇಓ ಈ.ಹಾಲಮೂರ್ತಿ ಧೈರ್ಯ ತುಂಬಿದ್ದಾರೆ.