Suddivijayanews2/7/2024
ಸುದ್ದಿವಿಜಯ,ಜಗಳೂರು:ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ಮಹಿಳಾ,ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಸಾರ್ವಜನಿಕ ತಾಲ್ಲೂಕು ಆಸ್ಪತ್ರೆಯಲ್ಲಿ ಮಂಗಳವಾರ ಯುಡಿಐಡಿ ಕಾರ್ಡ್ ಶಿಬಿರದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ವಿಶೇಷ ಚೇತನ ಬಾಲಕಿ ಸ್ನೇಹರವರಿಂದ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ವಿಶ್ವನಾಥ್ ಮಾತನಾಡಿ,
ಪ್ರತಿ 3 ತಿಂಗಳಿಗೊಮ್ಮೆ ಯುಡಿಐಡಿ ಕಾರ್ಡ್ ಶಿಬಿರ ನಡೆಸಲಾಗುವುದು ಎಂದರು.
ವಿಕಲಚೇತನ ಅಭಿವೃದ್ಧಿ ಸಂಘದ ರಾಜ್ಯಾಧಕ್ಷರಾದ ಮಹಾಂತೇಶ್ ಬ್ರಹ್ಮ ಮಾತನಾಡಿ, ತಾಲೂಕಿನಲ್ಲಿ ವಿವಿಧ ರೀತಿಯ ಅಂಗವೈಕಲ್ಯತೆಯುಳ್ಳ 61 ವಿಕಲಚೇತನರು ಯುಡಿಐಡಿ ಕಾರ್ಡ್ ಶಿಬಿರದಲ್ಲಿ ಭಾಗವಹಿಸಿ ಗುರುತಿನ ಚೀಟಿಯ ಅನುಕೂಲತೆಯನ್ನು ಪಡೆದಿದ್ದಾರೆ.
ಮುಂದಿನ ದಿನಗಳಲ್ಲಿ ಇವರೆಲ್ಲರಿಗೂ ಸರಕಾರಿ ಯೋಜನೆಯನ್ನು ತಲುಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ವಿಕಲಚೇತನರ ಅಭಿವೃದ್ಧಿ ಸಂಘ ಮಾಡುತ್ತದೆ ಎಂದು ಭರವಸೆ ನೀಡಿದರು.
ನಮ್ಮ ಕರ್ನಾಟಕ ಸೇನೆಯ ಪದಾಧಿಕಾರಿಗಳ ಜೊತೆಗೂಡಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಎಂ.ಎಸ್.ನಜೀರ್ ಅಹಮದ್ ರವರು ಜ್ಯೂಸ್ ಮತ್ತು ನೀರಿನ ಬಾಟಲಿಗಳನ್ನು ವಿತರಣೆ ಮಾಡುವುದರ ಮೂಲಕ ವಿಶೇಷ ಚೇತನರಿಗೆ ಆಸರೆ ನೀಡಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ:ಷಣ್ಮುಖಪ್ಪ, ವಿಕಲಚೇತನರ ನೋಡೆಲ್ ತಾಲೂಕಿನ ಅಧಿಕಾರಿ ಟಿ.ಶಾಂತಮ್ಮ,
ಮಾಜಿ ಗ್ರಾಪಂ ಸದಸ್ಯರಾದ ಹೊನ್ನುರಪ್ಪ ಮರೇನಹಳ್ಳಿ, ನಮ್ಮ ಕರ್ನಾಟಕ ಸೇನೆಯ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷರಾದ ಸುಜಾತ,ರಾಜ್ಯ ಮಹಿಳಾ ಪದವೀಧರ ಘಟಕದ ಉಪಾಧ್ಯಕ್ಷರಾದ ಜಯರೆಡ್ಡಿ,
ದಾವಣಗೆರೆ ಜಿಲ್ಲಾಧ್ಯಕ್ಷರಾದ ಮಂಜುಳಾ ಭರಮಸಮುದ್ರ ಗ್ರಾಮ ಪಂ ಸದಸ್ಯ ಜೆ.ಟಿ.ಬಸವರಾಜ್ ಸೇರಿದಂತೆ ವಿವಿಧ ಗ್ರಾಮ ಪಂಚಾಯತಿಗಳ ಪುನರ್ವಸತಿ ಕಾರ್ಯಕರ್ತರು ಮತ್ತು ಇತರರು ಉಪಸ್ಥಿತರಿದ್ದರು.