ಜಗಳೂರು: ದಸರಾ ಹಬ್ಬಕ್ಕೆ ಪೌರಕಾರ್ಮಿಕರಿಗೆ ಶಾಸಕ ದೇವೇಂದ್ರಪ್ಪ ಹೊಸ ಬಟ್ಟೆ ವಿತರಣೆ

Suddivijaya
Suddivijaya October 22, 2023
Updated 2023/10/22 at 12:40 PM

ಸುದ್ದಿವಿಜಯ, ಜಗಳೂರು: ಪಟ್ಟಣದ ಸ್ವಚ್ಛತೆ ಕಾಪಾಡಲು ಶ್ರಮಿಸುತ್ತಿರುವ ಪೌರ ಕಾರ್ಮಿಕರು ಸಹ ಸೇನಾನಿಗಳಿದ್ದಂತೆ. ಅವರನ್ನು ಸುರಕ್ಷತೆಯಿಂದ ನೊಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದ ತಮ್ಮ ನಿವಾಸದಲ್ಲಿ ದಸರಾ ಹಬ್ಬದ ಹಿನ್ನೆಲೆ ಭಾನುವಾರ ಪ.ಪಂ ಪೌರಕಾರ್ಮಿಕರಿಗೆ ಹೊಸ ಬಟ್ಟೆಗಳನ್ನು ವಿತರಿಸಿ ಮಾತನಾಡಿದರು. ಪೌರಕಾರ್ಮಿಕರು ಕಡುಬಡವರಾಗಿದ್ದು, ಅವರಿಗೆ ಸರ್ಕಾರ ಮೂಲಭೂತ ಸೌಕರ್ಯದ ಜತೆ ವೇತನ ನೀಡುತ್ತಿದೆ.

ಆದರೂ ಎಲ್ಲರ ಕೊಳೆಯನ್ನು ತೆಗೆದು ಉತ್ತಮ ಪರಿಸರ ಕಾಪಾಡುತ್ತಿರುವ ಕಾರ್ಯವೈಖರಿ ಕಂಡು ಅವರಿಗೆ ಉಡುಗೊರೆ ನೀಡಿದ್ದೇನೆ ಎಂದರು.

 ಜಗಳೂರು ಪಟ್ಟಣದ ತಮ್ಮ ನಿವಾಸದಲ್ಲಿ ದಸರಾ ಹಬ್ಬದ ಹಿನ್ನೆಲೆ ಭಾನುವಾರ ಪ.ಪಂ ಪೌರ ಕಾರ್ಮಿಕರಿಗೆ ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಹೊಸ ಬಟ್ಟೆಗಳನ್ನು ವಿತರಿಸಿದರು.
  ಜಗಳೂರು ಪಟ್ಟಣದ ತಮ್ಮ ನಿವಾಸದಲ್ಲಿ ದಸರಾ ಹಬ್ಬದ ಹಿನ್ನೆಲೆ ಭಾನುವಾರ ಪ.ಪಂ ಪೌರ ಕಾರ್ಮಿಕರಿಗೆ ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಹೊಸ ಬಟ್ಟೆಗಳನ್ನು ವಿತರಿಸಿದರು.

ಪೌರ ಕಾರ್ಮಿಕರು ನಗರದ ಸ್ವಚ್ಛತೆ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಅಂಥವರ ಬಗ್ಗೆ ಸಾರ್ವಜನಿಕ ಸಂಘ ಸಂಸ್ಥೆಗಳು ಮತ್ತು ಸರ್ಕಾರ ಭವಿಷ್ಯ ಭದ್ರತೆ, ಆರೋಗ್ಯ ಸುಧಾರಣೆಗೆ ಆಲೋಚಿಸಬೇಕಿದೆ.

ಅವರು ಆರೋಗ್ಯವಾಗಿದ್ದರೆ ನಗರವೇ ಆರೋಗ್ಯವಾಗಿರುತ್ತದೆ. ಕೆಲಸದಲ್ಲಿ ಯಾವುದೇ ತಾರತಮ್ಯ ಇಲ್ಲದೆ ಒಗ್ಗಟ್ಟಾಗಿ ತಮ್ಮ ಕೆಲಸವನ್ನು ಮಾಡುತ್ತಾರೆ. ಪೌರಕಾರ್ಮಿಕರು ಇಲ್ಲದಿದ್ದರೆ ನಗರ ಸ್ವಚ್ಛತೆ ಬಗ್ಗೆ ಊಹಿಸಿಕೊಳ್ಳುವುದು ಅಸಾಧ್ಯ ಎಂದರು.

ಪೌರಕಾರ್ಮಿಕರು ತಮ್ಮ ಮಕ್ಕಳನ್ನು ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ ಉನ್ನತ ಹುದ್ದೆಗೆ ಬರಲು ನೀವುಗಳು ಶ್ರಮಿಸಬೇಕು. ಇಂತಹ ಕಾಯಕ ಮಾಡುವವರಿಗೆ ನಮ್ಮ ಕೈಲಾದಷ್ಟು ಸೇವೆಯನ್ನು ಮಾಡಬೇಕು ಎಂದು ತಿಳಿಸಿದರು.

ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಮಾತನಾಡಿ, ಪೌರ ಕಾರ್ಮಿಕರಿಗೆ ಪ್ರತಿ ವರ್ಷ ದಸರಾ ಹಬ್ಬದ ದಿನದಂದು 24.10 ರ ಯೋಜನೆ ಅಡಿಯಲ್ಲಿ ಶೂ ನೀಡಲಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ವರ್ಷದಲ್ಲಿ ಎರಡು ಬಾರಿ ಆರೋಗ್ಯ ತಪಾಸಣೆಯನ್ನು ಮಾಡಿಸಲಾಗುತ್ತದೆ.

ಇವರ ಮಕ್ಕಳಿಗೆ ವಿದ್ಯಾಭ್ಯಾಸದ ವೆಚ್ಚವನ್ನು ಒದಗಿಸಲಾಗುವುದು. ಮತ್ತು ಗೃಹ ಭಾಗ್ಯ ಯೋಜನೆ ಅಡಿ 7.50 ಲಕ್ಷ ಮನೆಯ ನಿರ್ಮಾಣಕ್ಕೆ ಸಹಾಯಧನ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಬಸವರಾಜಪ್ಪ, ಆರೋಗ್ಯ ನಿರೀಕ್ಷಕ ಕಿಫಾಯತ್, ಪ.ಪಂ ಸದಸ್ಯರಾದ ಮಹಮದ್ ಆಲಿ, ಬಿ.ಟಿ ರವಿ, ಕಾಂಗ್ರೆಸ್ ಮುಖಂಡರಾದ ಮಹಮ್ಮದ್ ಗೌಸ್, ಪಲ್ಲಾಗಟ್ಟೆ ಶೇಖರಪ್ಪ ಸೇರಿದಂತೆ ಪೌರಕಾರ್ಮಿಕರು ಇದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!