suddivijayanews05/07/2024
ಸುದ್ದಿವಿಜಯ, ಜಗಳೂರು: ತಾಲೂಕಿನ ಪ್ರಮುಖ ಯೋಜನೆಯಲ್ಲಿ ಒಂದಾದ 57 ಕೆರೆ ನೀರು ತುಂಬಿಸುವ ಯೋಜನೆಯಡಿ ಇಂದು ಜಗಳೂರು ಪಟ್ಟಣ ಸೇರಿದಂತೆ ಕ್ಷೇತ್ರದಲ್ಲಿ 30 ಕೆರೆಗಳಿಗೆ ನೀರು ಹರಿದು ಬಂದಿದ್ದು ಈ ಯೋಜನೆ ರುವಾರಿ ಮಾಜಿ ಶಾಸಕ ಎಚ್.ಪಿ.ರಾಜೇಶ್ ಶುಕ್ರವಾರ ತಮ್ಮ ಬೆಂಬಲಿಗರೊಂದಿಗೆ ಕೆರೆ ನೀರು ವೀಕ್ಷಿಸುವ ಮೂಲಕ ಸಂತಸ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ಎಚ್.ಪಿ.ರಾಜೇಶ್, 2018ರಲ್ಲಿ ಜಗಳೂರು ಪಟ್ಟಣದಲ್ಲಿ ನೆಡೆದ ತರಳುಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಶ್ರೀ ಮಠದ ಶ್ರಿ ಡಾ. ಶಿವಮೂರ್ತಿ ಶಿವಾಚಾರ್ಯರ ಆಶೀರ್ವಾದ ದಿಂದ ಅಂದಿನ ಮುಖ್ಯಮಂತ್ರಿ ಯಾಗಿದ್ದ ಸಿದ್ದರಾಮಯ್ಯ ಅವರು ತಮ್ಮ ಬಜೆಟ್ ನಲ್ಲಿ 250 ಕೋಟಿ ಅನುದಾನ ಮೀಸಲಿರಿಸಿ ಯೋಜನೆ ರೂಪಿಸಿದ್ದರು.
ಅದರಂತೆ ಅಂದಿನ ಶಾಸಕ ಎಚ್.ಪಿ.ರಾಜೇಶ್ ಅವಿರತ ಶ್ರಮ ಪಟ್ಟು ಈ ಯೋಜನೆ ಬಜೆಟ್ ನಲ್ಲಿ ಸೇರಿಸಿ ಅನುದಾನ ಮೀಸಲಿರಿಸಿದ್ದರು. ನಂತರ 2021 ರಿಂದ 2023 ವರೆಗೆ ಅಂದಿನ ಮುಖ್ಯಮಂತ್ರಿಗಳು ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪ ಮತ್ತು ಶಾಸಕರು ಆಗಿದ್ದ ಎಸ್.ವಿ.ರಾಮಚಂದ್ರ ಅವರು 650 ಕೋಟಿಗೆ ಅನುದಾನ ಹೆಚ್ಚಿಸಿ ಕಾಮಗಾರಿಗೆ ಕಾಮಗಾರಿಗೆ ವೇಗ ನೀಡಿದರು.
ಕಳೆದ ಮೂರು ವರ್ಷಗಳಿಂದ ಆಮೆಗತಿಯಲ್ಲಿ ನೆಡೆಯುತ್ತಿದ್ದ ಕಾಮಗಾರಿ ಹಲವು ಅಡೆತಡೆಗಳನ್ನ ಸರಿಪಡಿಸಿ ಕಾಮಗಾರಿ ಅಂತಿಮ ಗೊಳಿಸಿದ್ದಾರೆ.
ಇಂದು ಅಧಿಕೃತವಾಗಿ 30 ಕೆರೆಗಳಿಗೆ ನೀರು ಹರಿದು ಬರುತ್ತಿದೆ. ಕೆರೆಗಳಿಗೆ ಹರಿಸಲು ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ಉಡುಪಿ ಮೂಲಕ ಜಿ.ಶಂಕರ್ ಕಂಪನಿಯ ಅಧಿಕಾರಿಗಳು ಮತ್ತು ಕಾರ್ಮಿಕರು ಶ್ರಮ ವಹಿಸಿದ್ದಾರೆ.
ಮಹತ್ವದ ಯೋಜನೆ ಇಂದು ಫಲಿಸಿದ್ದು ಜಗಳೂರು ಕೆರೆಗೆ ನೀರು ಬಂದಿದೆ ಈ ಯೋಜನೆಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಬಿ.ಲೋಕೇಶ್, ಪಿ.ರೇವಣ್ಣ, ಹೊನ್ನೂರು ಸ್ವಾಮಿ, ತಿಪ್ಪೇಸ್ವಾಮಿ ಸೇರಿದಂತೆ ಹಲವರು ಕೆರೆಗೆ ಭೇಟಿ ನೀಡಿ ನೀರು ಹರಿಯುವುದನ್ನು ವೀಕ್ಷಿಸಿ ಸಂಭ್ರಮಿಸಿದರು.