suddivijayanews12/07/2024
ಸುದ್ದಿವಿಜಯ, ಜಗಳೂರು: ಎಲ್ಲಾ ವರ್ಗದ ವಿದ್ಯಾರ್ಥಿಗಳು ಓದುತ್ತಿರುವ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸಕಲ ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಾಸಕ ಬಿ.ದೇವೇಂದ್ರಪ್ಪ ಭರವಸೆ ನೀಡಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ 2023-24ನೇ ಸಾಲಿನ ಸಾಂಸ್ಕøತಿಕ, ಕ್ರೀಡಾ, ರಾಸೇಯೋ, ಯುವರೆಡ್ ಕ್ರಾಸ್, ರೋವರ್ಸ್ ಮತ್ತು ರೇಂಜರ್ ಸೇರಿದಂತೆ ವಿವಿಧ ಸಮಿತಿಗಳ ಸಮಾರೋಪ ಹಾಗೂ ತೃತೀಯ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಬದುಕಿಗೆ ವಿದ್ಯೆ ಸೇತುವೆಯಿದ್ದಂತೆ. ಪದವಿ ಮುಗಿಸಿ ಹೊರ ಹೋಗುವ ವಿದ್ಯಾರ್ಥಿಗಳು ತಮ್ಮ ಭವಿಷ್ಯ ಕಟ್ಟಿಕೊಳ್ಳಲು ಶ್ರಮಿಸಬೇಕು. ದೇವರು ಯಾರಿಗೂ ವರ ಮತ್ತು ಶಾಪವನ್ನು ಕೊಡುವುದಿಲ್ಲ. ಬದಲಿಗೆ ಅವಕಾಶ ಕಲ್ಪಿಸುತ್ತಾನೆ. ಅವಕಾಶ ಬಳಸಿಕೊಂಡು ಜೀವನದಲ್ಲಿ ಉನ್ನತ ಪಟ್ಟಕ್ಕೆ ತಲುಪಿ ಎಂದರು.
ಕಾಲೇಜು ಪಟ್ಟಣದಿಂದ ತುಸು ದೂರವಿದ್ದು ಕೆಎಸ್ಆರ್ ಟಿಸಿ ಬಸ್ವ್ಯವಸ್ಥೆ ಕಲ್ಪಿಸಲು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಶಾಲಾ ಕಾಂಪೌಂಡ್, ನೀರಿನ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಮುಖ್ಯ ಅತಿಥಿಗಳಾಗಿ ಚಿತ್ರದುರ್ಗದ ಎಸ್ಜೆಎಂ ಕಾನೂನು ಕಾಲೇಜು ಮುಖ್ಯಸ್ಥ ಡಾ.ಕೆ.ಎನ್.ವಿಶ್ವನಾಥ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಾಧಿಸುವ ಗುರಿ ಇರಬೇಕು.
ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಸಾಧನೆ ಮಾಡಲು ತಾಳೆ ಮತ್ತು ಶ್ರಮ ಅನಿರ್ವಾಯ. ಸರಕಾರಿ ಶಾಲಾ, ಕಾಲೇಜುಗಳು ಅಭಿವೃದ್ಧಿಯಾಗಬೇಕಾದರೆ ಜನ ಪ್ರತಿನಿಧಿಗಳ ಸಹಕಾರ ಅಗತ್ಯ. ಈ ಭಾಗದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪೋಷಕರು ಹೆಚ್ಚು ಒತ್ತು ನೀಡುತ್ತಿರುವುದು ಸೂಕ್ಷ್ಮವಾಗಿ ಗ್ರಹಿಸುತ್ತಿದ್ದೇನೆ.
ಜೀವನದಲ್ಲಿ ಕಷ್ಟ ಸುಖಗಳು ಬರುತ್ತವೆ ಹೋಗುತ್ತವೆ. ಸಿದ್ದೇಶ್ವರ ಶ್ರೀಗಳು ಹೇಳಿದಂತೆ ಇದ್ದದ್ದು ಇದ್ದಂಗೆ ಇರಲ್ಲ. ವಿದ್ಯಾರ್ಥಿಗಳಿಗೆ ಗುರಿ ಇರಬೇಕು, ಗುರುಗಳ ಸಹಾಯಬೇಕು. ಇಟ್ಟ ಗುರಿ ಸಾಧಿಸಲು ಶ್ರಮ ಬೇಕು. ಯೋಚನೆ, ವಿಧಾನಗಳ ಬದಲಾವಣೆ ಮಾಡಿಕೊಂಡು ಕಷ್ಟಗಳನ್ನು ಮೀರಿ ನಡೆಯಿರಿ ಎಂದರು.
ನಕಾರಸತ್ಮಕ ಚಿಂತನೆ ಬಿಡಿ, ಮೌಲ್ಯಗಳು ನಿಮ್ನ ದೇಹಕ್ಕೆ ವ್ಯಕ್ತಿತ್ವ ರೂಪಿಸುತ್ತದೆ. ಪದವಿ ನಂತರ ಮುಂದಿನ ಯೋಚನೆ ಬೇಡ. ಎಲ್ಲಾ ವಿದ್ಯೆಯಲ್ಲೂ ಕೌಶಲ್ಯ ಬೇಕು. ಸಕಾರಾತ್ಮಕವಾಗಿ ಯೋಚಿಸಿ
ಅಛಲವಾದ ನಂಬಿಕೆಯಿಟ್ಟು ದೃಢ ನಿರ್ಧಾರದಿಂದ ಮುನ್ನುಗ್ಗಿ ಎಂದು ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ, ಪ್ರಾಂಶುಪಾಲ ಡಾ.ಆರ್.ರಂಗಪ್ಪ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್, ಪಪಂ ಸದಸ್ಯ ರಮೇಶ್ರೆಡ್ಡಿ, ಉಪನುಯಾಸಕರಾದ ಡಾ.ರಾಜೇಶ್ವರಿ ಪೂಜಾರ್, ಸಲ್ಮಾತಾಜ್, ಚೈತ್ರ, ವಿದ್ಯಾಶ್ರೀ, ಸಿಡಿಸಿ ಸದಸ್ಯರಾದ ಲೋಕೇಶ್ ಎಂ. ಐಹೊಳೆ, ಟಿಎಚ್ಒ ಡಾ.ವಿಶ್ವನಾಥ್, ಕೆ.ಮಹೇಶ್ ಸೇರಿದಂತೆ ಅನೇಕರು ಇದ್ದರು.