suddivijayanews17/07/2024
ಸುದ್ದಿವಿಜಯ, ಜಗಳೂರು: ಹಿಂದೂ ಮತ್ತ ಮುಸ್ಲಂರ ಹಿಂದು ಮತ್ತು ಮುಸ್ಲಿಂರ ಭಾವೈಕ್ಯತೆ ಹಬ್ಬವಾದ ಮೊಹರಂ ಹಬ್ಬವನ್ನು ತಾಲೂಕಿನ ತಾಯಿಟೋಣಿಯಲ್ಲಿ ವಿಶೇಷವಾಗಿ ಆಚರಿಸುತ್ತಿರುವುದು ಸಂತಸದ ವಿಷಯ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಹೇಳಿದರು.
ತಾಲೂಕಿನ ತಾಯಿಟೋಣಿ ಗ್ರಾಮದಲ್ಲಿ ಬುಧವಾರ ಮೊಹರಂ ಹಬ್ಬದ ಹಿನ್ನೆಲೆ ಪೀರ್ ಅಲ್ಲಾ ಸ್ವಾಮಿ ದರ್ಶನ ಪಡೆದು ಮಾತನಾಡಿದರು.
ಮುಸ್ಲಿಂ ಸಮುದಾಯದಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿರುವ ಹಬ್ಬಗಳಲ್ಲಿ ಮೊಹರಂ ಕೂಡ ಒಂದಾಗಿದೆ. ಪ್ರವಾದಿ ಮೊಹಮ್ಮದ್ ಮೊಮ್ಮಗ ಹುಸೇನ್ ಇಬ್ನ ಅಲಿ ಅವರ ಮರಣವನ್ನು ಸ್ಮರಿಸುವ ದಿನವನ್ನ ಮೊಹರಂ ಎಂದು ಆಚರಣೆ ಮಾಡಲಾಗುತ್ತಿದೆ.
ಇದು ಸುಮಾರು ವರ್ಷಗಳಿಂದಲೂ ನಿರಂತರವಾಗಿ ನಡೆಯುತ್ತಾ ಬಂದಿದೆ. ಆದರೆ ಹಿಂದು, ಮುಸ್ಲಿಂ ಎಂಬ ಭೇದ ಭಾವವಿಲ್ಲದರೇ ಎಲ್ಲರು ಸಮಾನತೆಯಿಂದ ಪಾಲ್ಗೊಂಡು ಆಚರಿಸುತ್ತಿರುವುದು ಶ್ಲಾಘನಿಯ ಎಂದರು.
ಶಾಸಕನಾಗಿದ್ದಾಗ ತಾಯಿಟೋಣಿ ಗ್ರಾಮಕ್ಕೆ ಸಿ.ಸಿ.ರಸ್ತೆ, ವಸತಿ ಸೌಲಭ್ಯ, ಶುದ್ದ ನೀರು ಸೇರಿದಂತೆ ಹಲವು ಸೌಲಭ್ಯ ಕಲ್ಪಿಸಿದ್ದೇನೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ಹುಚ್ಚವನಹಳ್ಳಿ ಮಂಜುನಾಥ್,
ತಾ.ಪಂ.ಮಾಜಿ ಸದಸ್ಯರಾದ ಸೂರಲಿಂಗಪ್ಪ, ಕುಬೇಂದ್ರಪ್ಪ, ನಾಯಕ ಸಮಾಜದ ಮಾಜಿ ಕಾರ್ಯದರ್ಶಿ ಬಿ.ಲೋಕೇಶ್, ಬಿಜೆಪಿ ಮುಖಂಡರಾದ ಕಾನನಕಟ್ಟೆ ಕೆ.ಎಸ್.ಪ್ರಭು, ತಾಯಿಟೋಣಿ ಅರವಿಂದ್ ಪಾಟೇಲ್, ಮಹದೇವರೆಡ್ಡಿ, ಸಹದೇವರೆಡ್ಡಿ, ಬಾಬುರೆಡ್ಡಿ, ತಿಪ್ಪೇಸ್ವಾಮಿ, ಪಿ.ರೇವಣ್ಣ, ದಾಸಪ್ಪ, ಬಾಲರಾಜ್ ಶ್ರೀನಿವಾಸ್ ಸೇರಿದಂತೆ ಮತ್ತಿತರರಿದ್ದರು.