suddivijayanews19/07/2024
ಸುದ್ದಿವಿಜಯ, ಜಗಳೂರು: ತಾಲೂಕು ಕೃಷಿ ಇಲಾಖೆ ಎಡಿಎ ಆಗಿದ್ದ ಮಿಥುನ್ ಕಿಮಾವತ್ ಚಿತ್ರದುರ್ಗ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ವರ್ಗಾವಣೆಯಾದ ಹಿನ್ನೆಲೆ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾಗಿ ಎಚ್. ಶ್ವೇತಾ ವರ್ಗಾವಣೆಯಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ಎರಡು ವರ್ಷಗಳಿಂದ ರೈತ ಸ್ನೇಹಿ ಅಧಿಕಾರಿಯಾಗಿದ್ದ ಮಿಥುನ್ ಕಿಮಾವತ್ ಇತ್ತೀಚೆಗೆ ತಾಲೂಕು ಪಂಚಾಯಿತಿ ಪ್ರಭಾರ ಇಒ ಆಗಿ ಸಹ ಕಾರ್ಯನಿರ್ವಹಿಸಿದ್ದರು.
ಗುಣಮಟ್ಟದ ಬಿತ್ತನೆ ಬೀಜ ಮತ್ತು ರೈತರಿಗೆ NREG ಕಾಮಗಾರಿಗಳಿಗೆ ಅವಕಾಶ ನೀಡುವ ಮೂಲಕ ರೈತ ಪರವಾಗಿ ಕಾರ್ಯನಿರ್ವಹಿಸಿದ್ದರು.
ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ ನಿರ್ಮಾಣಕ್ಕೆ ಜಲಾನಯನ ಅಭಿವೃದ್ಧಿ ಇಲಾಖೆಯಿಂದ ಗೋದಾಮು ನಿರ್ಮಾಣಕ್ಕೆ ಸಹಾಯ ಧನ ಬಿಡುಗಡೆಗೊಳಿಸಿ ಅಭಿವೃದ್ಧಿಗೆ ಸಹಕಾರ ನೀಡಿದ್ದರು ಎಂದು ಎಫ್‍ಪಿಒ ಅಧ್ಯಕ್ಷ ಮೆದಗಿನಕೆರೆ ಮಂಜುನಾಥ್ ಸ್ಮರಿಸಿಕೊಂಡರು.
ಮಿಥುನ್ ಕಿಮಾವತ್ ವರ್ಗಾವಣೆ ಆದ ಹಿನ್ನೆಲೆ ಸಿಬ್ಬಂದಿ ಅವರನ್ನು ಶುಕ್ರವಾರ ಬೀಳ್ಕೊಟ್ಟರು. ಪ್ರಸ್ತುತ ಎಡಿಎ ಶ್ವೇತಾ ಅವರು ಚಿತ್ರದುರ್ಗ ಕೃಷಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಸಿದ್ದರು. ಕೊಪ್ಪಳದಲ್ಲಿ ಎಡಿಎ ಆಗಿ ಈಗ ಜಗಳೂರಿಗೆ ವರ್ಗಾವಣೆಯಾಗಿದ್ದಾರೆ.
ಬರಪೀಡಿತ ಜಗಳೂರು ತಾಲೂಕು ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಬೇಕಿದೆ. ಪ್ರಸ್ತುತ 57 ಕೆರೆಗಳಿಗೆ ತುಂಗಭದ್ರಾ ನದಿಯಿಂದ ಏತ ನೀರಾವರಿ ಯೋಜನೆ ಫಲಪ್ರದವಾಗಿದ್ದು, ವೈವಿಧ್ಯಮದ ಹವಾಗುಣವಿರುವ ಈ ಕ್ಷೇತ್ರದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿಯಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಎಡಿಎ ಶ್ವೇತಾ ಹೇಳಿದರು.