ಆಘಾತ ಸುದ್ದಿ- ಬಹುಭಾಷ ನಟಿ ಮೀನಾ ಪತಿ ನಿಧನ

Suddivijaya
Suddivijaya June 29, 2022
Updated 2022/06/29 at 12:27 AM

ಸುದ್ದಿವಿಜಯ,ಚೆನ್ನೈ:ಬಹುಭಾಷ ನಟಿ ಮೀನಾ ಪತಿ ವಿದ್ಯಾಸಾಗರ್‌ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅವರಿಗೆ ಅನಾರೋಗ್ಯ ಕಾಡಿತ್ತು. ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ಚೆನ್ನೈನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ 48 ವರ್ಷದ ವಿದ್ಯಾಸಾಗರ್‌ ನಿಧನರಾಗಿದ್ದಾರೆ.

ಕೊರೊನಾ ಕಾಲದಲ್ಲಿ ನಟಿ ಮೀನಾ ಅವರ ಇಡೀ ಕುಟುಂಬ ಸೋಂಕಿಗೆ ಒಳಗಾಗಿದ್ದರು. ವಿದ್ಯಾಸಾಗರ್‌ ಅವರಿಗೂ ಸೋಂಕು ತಗುಲಿತ್ತು. ಬಳಿಕ ಅವರ ಶ್ವಾಸಕೋಶ ಸಮಸ್ಯೆ ಇನ್ನಷ್ಟು ತೀವ್ರವಾಗಿತ್ತು.

2009ರಲ್ಲಿ ನಟಿ ಮೀನಾ ಅವರಿಗೆ ಬೆಂಗಳೂರು ಮೂಲದ ಸಾಫ್ಟ್‌ವೇರ್‌ ಎಂಜಿಯರ್‌ ಆಗಿದ್ದ ವಿದ್ಯಾಸಾಗರ್‌ ಜೊತೆ ವಿವಾಹವಾಗಿತ್ತು. ಈ ದಂಪತಿಗೆ ನೈನಿಕಾ ಎಂಬ ಪುತ್ರಿ ಇದ್ದಾರೆ. ಅವರ ಸಾವಿನಿಂದ ಚಿತ್ರರಂಗ ಕಣ್ಣೀರಿಟ್ಟಿದೆ. ಕನ್ನಡದಲ್ಲಿ ಅನೇಕ ಚಿತ್ರಗಳಲ್ಲಿ ಮೀನಾ ಅವರು ನಟಿಸಿ ಖ್ಯಾತಿಗಳಿಸಿದ್ದಾರೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!