ಸುದ್ದಿವಿಜಯ ಜಗಳೂರು:ತಾಲೂಕಿನಲ್ಲಿ ನಡೆಯುತ್ತಿರುವ ಮದ್ಯಮಾರಾಟ, ಮಟ್ಕಾ, ಜೂಜಾಟಕ್ಕೆ ಕಡಿವಾಣ ಹಾಕಲಾಗುವುದು ಎಂದು ಎಸ್ಪಿ ರಿಷ್ಯಂತ್ ಹೇಳಿದರು.
ಇಲ್ಲಿನ ಪೊಲೀಸ್‌ಠಾಣೆಗೆ ಬುಧವಾರ ಭೇಟಿ ನೀಡಿದ ವೇಳೆ ಸುದ್ದಿಗಾರರ ಜತೆ ಮಾತನಾಡಿ, ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿರುವುದು ಕಂಡು ಬಂದಿದೆ. ಇದರಿಂದಲೇ ಅನೇಕ ಗಲಾಟೆ, ಗದ್ದಲಕ್ಕೆ ಕಾರಣವಾಗಿದೆ, ಇಸ್ಪೀಟ್ ಜೂಜಾಟ, ಮಟ್ಕಾ ಬರೆಸುವುದು ಹೆಚ್ಚಾಗಿದೆ, ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಅಕ್ರಮಕ್ಕೆ ಬ್ರೇಕ್ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪೊಲೀಸ್ ಇಲಾಖೆಗೆ ಸಂಬAಧಿಸಿ ಹಳೆ ವಸತಿ ಗೃಹಗಳು, ಹೊಸ ವಸತಿ ಗೃಹಗಳು, ಪಿಎಸ್‌ಐ ವಸತಿ ಗೃಹಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಹಳೆ ಪೊಲೀಸ್ ವಸತಿ ಗೃಹಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ವಾಸ ಮಾಡಲು ಯೋಗ್ಯವಾಗಿಲ್ಲ, ಕಟ್ಟಡಗಳನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಿಯಾ ಯೋಜನೆ ತಯಾರಿಸಿ ಸರ್ಕಾರ ವರದಿ ಕಳಿಸಲು ಸೂಚನೆ ನೀಡಲಾಗಿದೆ, ಮುಂದಿನ ದಿನಗಳಲ್ಲಿ ವಸತಿಗೃಹಗಳಿಗೆ ಅಗತ್ಯವಾದ ಮೂಲಭೂತ ಸೌಕರ್ಯ ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
ತಾಲೂಕಿನಲ್ಲಿ ಬಹುತೇಕ ಕಡೆ ಅಳವಡಿಸಿರುವ ವಿಂಡ್ ಫ್ಯಾನ್ ಕಂಪನಿಗಳು ವಿದ್ಯುತ್‌ಗೆ ಸಂಬAಧಿಸಿ ವಸ್ತುಗಳು ಕಳವಾಗಿರುವ ಬಗ್ಗೆ ಅನೇಕ ದೂರುಗಳು ನೀಡಿದ್ದಾರೆ. ಕಳ್ಳತನವಾಗಿ ಮರ‍್ನಾಲ್ಕು ವರ್ಷಗಳಾದ ಮೇಲೆ ದೂರು ನೀಡುತ್ತಾರೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.
ಎತ್ತು ಮತ್ತು ಬೈಕ್‌ಗಳ ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ಬಗ್ಗೆ ತಂಡವೊAದನ್ನು ರಚಿಸಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.