ಸುದ್ದಿವಿಜಯ, ಬೆಂಗಳೂರು: ಕಲಾ ಪ್ರಕಾರಗಳಲ್ಲಿ ಒಂದಾಗಿರುವ ಚಿತ್ರಕಲೆ ಒಂದು ರೀತಿ ಸಾಗರವಿದ್ದಂತೆ. ಅದರ ವಿಸ್ತಾರ ಊಹೆಗೂ ನಿಲುಕದ್ದು. ವಿದ್ಯಾರ್ಥಿಗಳಲ್ಲಿರುವ ಕಲೆಗಳನ್ನು ಅನಾವರಣಗೊಳ್ಳಬೇಕಾದೆ ಚಿತ್ರ ಸಂತೆಗಳಿಂದ ಮಗುವಿನ ಕ್ರೀಯಾಶೀಲತೆಯನ್ನು ಜಗದಗಲ ವಿಸ್ತಾರಗೊಳ್ಳಲು ಸಾಧ್ಯ ಎಂದು ಯೂರೋ ಸ್ಕೂಲ್ ಪ್ರಾಂಶುಪಾಲರಾದ ಶ್ರುತಿ ಅರುಣ್ ಅಭಿಪ್ರಾಯ ಪಟ್ಟರು.
ಬೆಂಗಳೂರಿನ ವೈಟ್‍ಪೀಲ್ಡ್‍ನಲ್ಲಿರುವ ಯೂರೋ ಸ್ಕೂಲ್‍ನಲ್ಲಿ ಶನಿವಾರ ಆಯೋಜಿಸಿದ್ದ ‘ಬೊಂಬಾಟ್ ಸಂತೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಂದು ಚಿತ್ರಕಲೆ ಸಾವಿರ ಪದಗಳಿಗೆ ಸಮ. ಚಿತ್ರಕಲೆಯ ಪರಿಕಲ್ಪನೆ ಇತ್ತೀಚಿನದಲ್ಲ.
ಇದಕ್ಕೆ ಬರೋಬ್ಬರಿ 40 ಸಾವಿರ ವರ್ಷಗಳ ಇತಿಹಾಸವೇ ಇದೆ. ಪ್ರಾಚೀನ ಶಿಲಾಯುಗದಲ್ಲಿ ನೆಲೆಸಿದ್ದ ಮಾನವರು ಚಿತ್ರ ಬಿಡಿಸುವುದರಲ್ಲಿ ಪರಿಣತಿ ಸಾಧಿಸಿದ್ದರು. ಫ್ರಾನ್ಸ್‍ನಲ್ಲಿ ಪತ್ತೆಯಾಗಿರುವ ಚೌವೆಟ್ ಗುಹೆಗಳ ಗೋಡೆಗಳಲ್ಲಿ ಅಂದಿನ ಮಾನವರು ಬಿಡಿಸಿದ ಪ್ರಾಣಿಗಳ ಚಿತ್ರಗಳು ಸಾಕ್ಷಿಯಾಗಿವೆ.
ಪ್ರಾಚೀನ, ಮಧ್ಯ ಮತ್ತು ನವ ಶಿಲಾಯುಗದ ಜನರು ಗುಹೆಗಳಲ್ಲಿ ಚಿತ್ರ ಬಿಡಿಸುತ್ತಿದ್ದುದಕ್ಕೆ ದಾಖಲೆಗಳಿವೆ. ಭಾರತದಲ್ಲಿ ಮಧ್ಯಪ್ರದೇಶ ಭಿಂಬೆಡ್ಕ ಕಲ್ಲಿನ ಗುಹೆಗಳಲ್ಲಿ ಈ ಚಿತ್ರಗಳಿವೆ. ಕ್ರಿ.ಪೂ 5500ರ ಅವಧಿಗೆ ಸೇರಿದ್ದು, ಅಜಂತಾ ಗುಹೆಗಳಲ್ಲೂ ಇದೇ ರೀತಿಯ ಚಿತ್ರಕಲೆಗಳನ್ನು ಕಾಣಬಹುದು ಎಂದರು.
ಭೌಗೋಳಿಕವಾಗಿ, ಪ್ರಾಂತ್ಯ, ಧರ್ಮ, ಸಂಸ್ಕøತಿ ಐತಿಹಾಸಿಕ ಘಟನೆಗಳು ಚಿತ್ರಕಲೆಯ ಮೇಲೆ ಪ್ರಭಾವ ಬೀರುತ್ತವೆ. ಮಕ್ಕಳಲ್ಲಿರುವ ಕ್ರಿಯಾಶೀಲತೆಗೆ ಬೊಂಬಾಟ್ ಸಂತೆ ಸಂತೆ ವೇದಿಕೆಯಾಗಿದ್ದು, ವಿದ್ಯಾರ್ಥಿಗಳ ಕಲಾ ಕುಂಚದಲ್ಲಿ ಅನಾವರಣಗೊಂಡ ಚಿತ್ರಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ ಎಂದು ಅವರು ಬಣ್ಣಿಸಿದರು.
ತೈಲ ಚಿತ್ರಗಳ ಮಾರಾಟದಿಂದ ಬಂದ 60 ಸಾವಿರ ಹಣವನ್ನು ಭಾರತೀಯ ರೈಲ್ವೇ ಇಲಾಖೆ ನಡೆಸುತ್ತಿರುವ ಅನಾಥ ಮಕ್ಕಳ ಪ್ರಗತಿಗೆ ನೆರವಾಗಿದೆ. ಪೋಷಕರು ಸಹ 50 ಸಾವಿರ ಹಣವನ್ನು ಅನಾಥ ಮಕ್ಕಳ ಅಭಿವೃದ್ಧಿಗೆ ನೀಡಿರುವುದು ಶ್ಲಾಘನೀಯ ಎಂದರು.
ಬೊಂಬಾಟ್ ಸಂತೆಯಲ್ಲಿ ಯೂರೋ ಸ್ಕೂಲ್‍ನ 200 ವಿದ್ಯಾರ್ಥಿಗಳು ಭಾಗವಹಿಸಿ ಫೆನ್ಸಿಲ್ ಸ್ಕೆಚ್, ಫೋರೆಟ್ಸ್, ಸ್ಕ್ರೀನ್ ಪ್ರಿಂಟಿಂಗ್ ಸೇರಿದಂತೆ ವಿವಿಧ ತೈಲಚಿತ್ರಗಳನ್ನು ಅನಾವರಣಗೊಳಿಸಿದ್ದರು. ವಿಭಿನ್ನವಾದ ಪ್ರಕೃತಿ, ಸಮುದ್ರ, ವ್ಯಕ್ತಿ, ಗಿಡ, ಮರ ಬಳ್ಳಿ, ಸಮುದ್ರದ ಆಳದಲ್ಲಿರುವ ಮತ್ಸ್ಯಲೋಕ ಮತ್ತು ಪರಿಸರ ಜಾಗೃತಿ ಮೂಡಿಸುವ ತೈಲ ಚಿತ್ರಗಳು ಗಮನ ಸೆಳೆದವು.
ಮಕ್ಕಳ ಈ ತೈಲ ಚಿತ್ರಗಳನ್ನು ಪೋಷಕರು, ಸಾರ್ವಜನಿಕರು ಕೊಂಡುಕೊಂಡರು. ಮಾರಾಟವಾದ ಚಿತ್ರಗಳ ಹಣವನ್ನು ವೈಟ್‍ಫೀಲ್ಡ್ ರೈಲ್ವೇ ಇಲಾಖೆಯ ಅಧಿಕಾರಿಗಳ ಮೂಲಕ ಬಡ ಮಕ್ಕಳ ಅಭಿವೃದ್ಧಿಗೆ ನೀಡಲಾಯಿತು.
ವಿದ್ಯಾರ್ಥಿಗಳು ಮತ್ತು ಪೋಷಕರಿಗಾಗಿ ಶಾಲಾ ಆವರಣದಲ್ಲಿ ಶಿಕ್ಷಕರು ಸುಮದುರ ಗೀತೆಗಳನ್ನು ಹಾಡಿದರು. ಕಾರ್ಯಕ್ರಮ ಕಲಾ ವಿಭಾಗದ ಶಿಕ್ಷಕರಾದ ಬಿ.ಆರ್.ಜಯಲಕ್ಷ್ಮಿ, ಕೇಶವ, ಟಿ.ಎನ್. ಅನುಪಮಾ, ದೀಪಿಕಾ, ಉಪ ಪ್ರಾಂಶುಪಾಲರಾದ ಸೋನಲ್, ಕೃಷ್ಣ ಕಶ್ಯಪ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.