ಸುದ್ದಿ ವಿಜಯ (ವಿಶೇಷ) ಆಕೆಯ ಹೆಸರು ಸುನಿತಾ. ಬೆಂಗಳೂರಿನ ಬಸವೇಶ್ವರ ನಗರದ ನಿವಾಸಿ. ಶ್ರೀಮಂತಳ ಮಗಳು. ಎಂತಹ ಅದೌಉತ ಸುಂದರಿ ಅಂದರೆ ಅಶ್ವರ್ಯ ರೈ ಇದ್ದಾರಲ್ಲ ಅವಳಿಗಿಂತ ಹತ್ತೇ ಹತ್ತು ಮಾರ್ಕ್ಸು ಕಡಿಮೆ ಅಷ್ಟೆ.
ಇಂಥ ಸುನಿತಾಗೆ ಇದ್ದ ಕ್ರೇಜ್ ಅಂದ್ರೆ ಮಲ್ಲೇಶ್ವರದ ಮಾರುಟ್ಟೆಗೆ ಹೋಗಿ ಹಾಗೇ ಸುಮ್ನೆ ರೌಡಂಡ್ ಹೊಡೆಯೋದು. ಮನೆಗೆ ವಾಪಸ್ ಬರೋಕಿಂತ ಮುಂಚೆ ಜನತಾ ಹೋಟೆಲ್‌ಗೆ ನುಗ್ಗಿ ಮಸಾಲೆ ದೊಸೆ ಸವಿಯೋದು. ಆಮೇಲೆ ಆಶಾ ಸ್ವೀಟ್ಸ್‌ಗೆ ನುಗ್ಗಿ ರಸಗುಲ್ಲಾಕ್ಕೆ ಒಂದು ಗತಿ ಕಾಣಿಸುವುದು. ಆಮೇಲೆ ಸ್ಕೂಟಿ ಹತ್ಕಂಡ್ ಟ್ರಿ… ಟ್ರೀ… ಎಂದು ಹಾರ್ನ ಹೊಡೆದುಕೊಂಡು ರೋಂಯ್…
ಅಂಥ ಸೀದಾ ಬಸವೇಶ್ವರ ನಗರದ ಮನೆಗೆ ಬಂದು ಬಿಡೋದು! ಹೇಳಿ ಕೇಳಿ ಸುಂದ್ರಿ. ಹುಡುಗ್ರು ಸುಮ್ನೆ ಇರ್ತಾರೇನ್ರಿ.ಇಲ್ಲ ಸ್ವಾಮಿ. ಆ ಮಲ್ಲೇಶ್ವರದ ಅಷ್ಟೂ ಹುಡುಗರು ಇವಳ ಹಿಂದೆ ಹೀಂದೇನೇ ಸುತ್ತುತ್ತಾ ಕಾಳು ಹಾಕೋಕೆ ಟ್ರೈ ಮಾಡ್ತಿದ್ರು. ಇವ್ಳು ಸುಮ್ನೆ ಒಂದ್ಸಲ ಕಣ್ಣು ಹೊಡೆದು ಅಷ್ಟೂ ಹುಡುಗರನ್ನು ನಿವಾಳ್ಸಿ ಸ್ಕೂಟಿ ಹತ್ತಿಬಿಡ್ತಾ ಇದ್ಲು.
ಮೊದಲೇ ಹೇಳಿಕೇಳಿ ಮಲ್ಲೇಶ್ವರದ ಏರಿಯಾದ ಹುಡುಗರು ಸಾಫ್ಟ್‌ವೇರ್. ಸಾಫ್ಟ್‌ವೇರ್ ಎಂಜಿನಿಯರ್ ಸುಧೀರ ಒಂದು ದಿನ ಬೆಳಿಗ್ಗಿಂದ ಸಂಜೇತನ್ಕ ಅದೇ ರೋಡ್‌ನಲ್ಲಿಈ ಕಡೆಯಿಂದ ಆ ಕಡೆಗೆ ಅಡ್ಡಾಡುತ್ತಿದ್ದ. ಹೀಗಿರುವಾಗ ಅಂದು ಮಿಂಚಿಗೋ ಮಿಂಚಿಂಗು ಅನ್ನುವಂತೆ ಸಿಂಗಾರಿ ಸುನಿತಾ ಈ ಹೈದ ಕುಳಿತಿದ್ದ ಜನತಾ ಹೋಟೆಲಿನಲ್ಲಿಯೇ ಇವನ ಎದುರಿಗಿದ್ದ ಟೇಬಲ್‌ನಲ್ಲಿಯೇ ಮಸಾಲೆ ದೋಸೆ ತಿನ್ನುತ್ತಾ ಕುಳಿತಿದ್ದಳು.
ಅವಳನ್ನು ಕಂಡಕ್ಷಣ ಈ ಹುಡುಗನಿಗೆ ಆಸೆ ಶುರುವಾಯ್ತು. ಪ್ರೀತಿಯ ಕಿಕ್ ಏರಿತು. ಬದುಕು ಅಂತಾದ್ರೆ ಇವಳ ಜೊತೆಗೇನೆ ಬದುಕಬೇಕು ಅನ್ಸಿಸ್ತು ಅವನಿಗೆ. ನಾನಂತು ಈಗಿಂದೀಗ್ಲೆ ಪ್ರಪೋಸ್ ಮಾಡೇಬಿಡ್ತಿನಿ ಅವಳು ಒಪ್ಪಿಕೊಳ್ಳೋ ಹೆಂಗೆ ಮಾಡಪ್ಪಾ ದೇವರೇ ಅಂದುಕೊಂಡವನು ಕೂತಲ್ಲೇ ಒಮ್ಮೆ ಮಿಸುಕಾಡಿ, ಅವಳಿಗಷ್ಟೇ ಕೇಳಿಸುವ ದನಿಯಲ್ಲಿ ʼಲವ್ ಮಿ ಆರ್ ಹೇಟ್ ಮಿʼ ಅಂದೇಬಿಟ್ಟ.
ಸುನಿತಾ ಒಮ್ಮೆ ಕತ್ತೆತ್ತಿ ನೋಡಿದಳು. ಎದುರಿಗಿದ್ದವನು ಸುಂದರನಂತೆ ಕಂಡ. ಅವನ ಕಣ್ಣಲ್ಲಿ ಪ್ರಾಮಾಣಿಕತೆಯಿತ್ತು. ʼಪ್ರೀತ್ರೇʼ ಎಂಬ ವಿನಂತಿಯನ್ನು ಅಮ್ಮಾವ್ರ ಗಂಡನಾಗುವ ಪ್ಯಾದೆತನವಿತ್ತು. ಅದುವರೆಗೂ ಯಾರಿಗೂ ಒಲಿಯದಿದ್ದ ಈ ಸುಂದ್ರಿ ಅವತ್ತು ಆ ಮಸಾಲ್ ದೋಸೆಯೂ ಬೆರಗಾಗುವ ಥರಾ ನಡೆದುಕೊಂಡಳು. ಯೆಸ್, ಅವಳು ಸುಧೀರನನ್ನೇ ತಿನ್ನುವಂತೆ ನೋಡುತ್ತಾ ʼಕಿಸ್ ಮಿ ಆರ್ ಕೀಲ್ ಮಿʼ ಅಂದು ಬಿಟ್ಟಳು. ಮರುಕ್ಷಣವೇ ಅವರಿಬ್ಬರ ಲವ್ವು ಪಾಸಾಯಿತು.
ಆಮೇಲೂ ಒಂದು ವಾರ ಅದೇ ಜನತಾ ಹೋಟೆಲ್‌ನಲ್ಲಿ ಅವರಿಬ್ರೂ ಲಲ್ಲೇ ಹೊಡೆದ್ರೂ ಅದೇ ವೇಳೆಗೆ ಈ ಸುಧೀರ ಅವಳಿಗೊಂದು ಮೊಬೈಲ್ ಕೊಡಿಸಿದ. ಲೈಫ್‌ಟೈಂ ಕರೆನ್ಸಿ ಹಾಕಿಸಿದ. ಸಖತ್ ಖುಷಿಯದ ಈ ಬೆಡಗಿ ಅವನಿಗೊಂದು ಸಿಹಿ ಮುತ್ತನ್ನಿಟ್ಟಳು. ಸೀದಾ ಅವನನ್ನು ಮನೆಗೆ ಕರೆಯೊಯ್ದು ಎಲ್ಲರಿಗೂ ಪರಿಚಯ ಮಾಡಿಸಿದಳು. ಹೇಳಿ ಕೇಳಿ ಸಾಫ್ಟ್‌ವೇರ್ ಹುಡುಗ.
ಒಪ್ಪದೇ ಇರೋಕಾಗುತ್ತಾ? ಹುಡುಗಿ ಮನೇಳಿ ಒಪ್ಪಿದ್ರು. ಕೆಲವೇ ದಿನಗಳಲ್ಲಿ ಹುಡುಗನ ಮನೆಯವರೂ ಒಪ್ಪಿ ಎಂಗೇಜ್ ಮೆಂಟ್ ಕೂಡ ಮುಗಿಸಿದ್ರು. ಅವತ್ತಿಂದ ಶುರುವಾಯ್ತು ನೋಡಿ ಹಗಲು ರಾತ್ರಿ ಇಬ್ರೂ ಸುತ್ತಿದ್ದೇ ಸುತ್ತಿದ್ದು.
ಅಷ್ಟಾದ ಮೇಲೂ ಮೊಬೈಲ್‌ನಲ್ಲಿ ಇಬ್ರೂ ಟಾಕಿಂಗೋ ಟಾಕೀಂಗ್ ಎಷ್ಟು ಬಾರಿ ಇಡೀ ರಾತ್ರಿ ಮಾತಾಡ್ತಾನೇ ಇರ್ತಿದ್ರಂತೆ. ನಿಮ್ಹತ್ರ ಸೀಕ್ರೇಟ್ ಎಂಥಾದ್ದು ಸ್ವಾಮಿ? ಟಾಯ್ಲೆಟ್‌ಗೆ ಹೋದಾಗ ಕೂಡಾ ಇಬ್ರೂ ಮೊಬೈಲ್ ಹಿಡ್ಕೊಂಡೆ ಹೋಗ್ತಿದ್ರಂತೆ!
ಈ ಸುನಿತಳಿಗೆ ಮೊಬೈಲ್ ಹುಚ್ಚು ಅದೆಷ್ಟು ಹಿಡ್ಕೊಳ್ತು ಅಂದ್ರೆ, ಅದೊಮ್ಮೆ ಅವಳುತನ್ನ ಗೆಳತಿಯರು ಮತ್ತು ಅಪ್ಪ-ಅಮ್ಮನ ಜೊತೆ ಮಾತಾಡ್ತಾ ಇದ್ದಾಗ ತೀರಾ ಆಕಸ್ಮಿಕವಾಗಿ ಹೇಳಿಬಿಡ್ಲಂತೆ. ಈ ಮೊಬೈಲ್ ಬಂದ ಮೇಲೆ ನನ್ನ ಬದುಕೇ ಬದಲಾಗಿದೆ. ಬೈ ಛಾನ್ಸ್ ನಾನೇನಾದ್ರೂ ಸತ್ತುಹೋದ್ರೆ ಪ್ಲೀಸ್ ಈ ಮೊಬೈಲ್‌ನ ನ್ನ ಜತೇನೇ ಮಣ್ಣು ಮಾಡಿ. ಈ ಮೊಬೈಲ್ ಜತೆಗಿಲ್ಲ ಅಂದ್ರೆ ನನ್ನ ಆತ್ಮಕ್ಕೆ ಶಾಂತಿ ಸಿಗಲ್ಲ…
ಈ ಮಧ್ಯೆ ಅದ್ಯಾವ್ದೋ ಹತ್ತು ದಿನದ ಟ್ರೈನಿಂಗ್ ಅಂತ ಸುಧೀರ ಹೈದರಾಬಾದ್‌ಗೆ ಹೋದ. ಹೇಗಿದ್ರು ಮೊಬೈಲ್ ಇತ್ತಲ್ಲ. ಇಬ್ರೂ ಹಗಲು ರಾತ್ರಿ ಟಾಂಕಿಗೋ ಟಾಕಿಂಗ್.
ಅವರದು 24*7 ಛಾನೆಲ್ ಥರಾ. ಹೀಗಿರುವಾಗಲೇ ಅದೊಂದು ಸಂಜೆ ಸುನಿತಾ ಯಾರೊಂದಿಗೋ ಮಾತಾಡಿಕೊಂಡು ಜುಂಯ್ ಅಂತ ಬರ್ತಿದ್ದಾಗಲೇ ಅನಾಹುತ ನಡೆದು ಹೋಯ್ತು. ಸ್ಕೂಟಿ ಸ್ಕಿಟ್ ಆಗಿ ಸುಂದರಿ ಸುನಿತಾ ಸತ್ತು ಹೋದಳು.
ಬನಶಂಕರಿಯ ಸ್ಮಶಾನಕ್ಕೆ ಅವಳ ಶವ ಸಾಗಿಸುವಾಗ ಒಂದು ತಮಾಷೆ ನಡೀತು. ಎಲ್ಲ ಪೂಜೆಯ ನಂತರ ಶವಾನ ಎತ್ಕೊಳ್ಳೊಕೆ ಹೋದ್ರು ಜನ. ಅದು ಮೇಲೇಳಲೇ ಇಲ್ಲ. ಅರೆ ಇದೇನಪ್ಪಾ ವಿಚಿತ್ರ ಎಂದು ಎಲ್ಲರೂ ಬೆರಗಾದ್ರು. ʼಬಹುಷಾ ಈ ಹುಡುಗಿಯ ಯಾವುದೋ ಆಸೆ ಈಡೇರಿಲ್ಲ ಅನ್ಸುತ್ತೆ ಅಂತ ಮಾಡ್ತಾಡಿದ್ರುʼ.
ತಕ್ಷಣ ರಾಜಕಾರಣಿಯೊಬ್ಬರ ಮನೆಯ ಪೂಜೆಗೆಂದು ಬಂದಿದ್ದ ಕೇರಳದ ಮಾಂತ್ರಿಕನನ್ನು ಕರೆಸಿದ್ರು. ಆತ ದಡಬಡಿಸಿ ಬಂದವನೆ ಶವದ ಹಣೆಯ ಮೇಲೆ ಕೈ ಹಿಟ್ಟು. ಆತ್ಮದೊಂದಿಗೆ ಮಾತುಕತೆ ನಡೆಸಿ ʼಇದಕ್ಕೆ ಮೊಬೈಲ್ ಬೇಕಂತೆ. ಕೊಡ್ರಿ ಅಂದ!
ತಕ್ಷಣವೇ ಸುನಿತಾಳ ಹೆತ್ತವರಿಗೆ ಆಕೆ ಹಿಂದೊಮ್ಮೆ ಹೇಳಿದ್ದು ನೆನಪಾಯಿತು. ಓಹ್ ಇದು ಮಗಳ ಕಡೆಯ ಆಸೆ ಅಂದುಕೊಂಡ ಅವರು, ಸುನಿತಾ ಬಳಸುತ್ತಿದ್ದ ಮೊಬೈಲ್‌ನ್ನು ಶವದ ಹೊಟ್ಟೆಯ ಮೇಲೆ ಇಟ್ಟ ನಂತರ ಎತ್ತಿದರು ನೋಡಿ: ಎಲ್ಲವೂ ಹೂ ಎತ್ತಿದ್ದಷ್ಟು ಸಲೀಸಾಗಿ ಮುಗೀತು.
ಕಲ್ಲೂ ಕರಗುವಂತೆ ಅತ್ತ ಸುನಿತಾಳ ಬಂಧುಗಳು ಶವವನ್ನು ಮಣ್ಣು ಮಾಡಿ ಬಂದರು. ತೀರಾ ಸೆಂಟಿಮೆಂಟ್ ಎಂಬಂತಿದ್ದ ಸುಧೀರನಿಗೆ ಸುದ್ದಿ ಗೊತ್ತಾದ್ರೆ ಶಾಕ್ ಆಗ್ತಾನೆ ಅಂದುಕೊಂಡು ಅವರು ಈ ವಿಷಯ ತಿಳಿಸಲೇ ಇಲ್ಲ.
ಈ ಕಡೆ ಹೈದರಾಬಾದ್‌ಗೆ ಬಂದಿದ್ನಲ್ಲ ಸುಧೀರ? ಅವನ ಕೆಲಸ ಎಂಟೇ ದಿನಕ್ಕೆ ಮುಗಿತು. ತಕ್ಷಣವೇ ಸುನಿತಾಳ ಮನೆಗೆ ಫೋನ್ ಮಾಡಿದ. ಪೋನ್ ತಗೊಂಡಿದ್ದು ಸುನಿತಾಳ ತಾಯಿ. ಅಂಟಿ ನಾನು ಬೆಳಿಗ್ಗೆ ಬರ್ತಾ ಇದ್ದೀನಿ. ಸುನಿತಾಳಿಗೆ ಹೇಳಿಬಿಡಿ ಅವಳಿಗೆ ನಾನು ದಿಢೀರ್ ಅಂತ ಬಂದು ಶಾಕ್ ಕೊಡಬೇಕು ಅಂತಿದ್ದೀನಿ.
ಎಂದೆಲ್ಲಾ ಹೇಳಿದ. ಅವನಿಗೆ ಎರಡು ಮಾತು ಆಡಲು ಅವಕಾಶ ಕೊಡದ ಈಕೆ ಸುಧೀ ತಕ್ಷಣ ಮನೆಗೆ ಬಾ. ನಿಂಗೆ ಒಂದು ಮಹತ್ವದ ವಿಷಯಹೇಳೋದಿದೆ. ಎಂದು ಫೋನ್ ಕಟ್ ಮಾಡಿದರು.
ಇವನು ಬೆಳಿಗ್ಗೆ ಓಡೋಡಿ ಬಂದ. ಇವನ ಬರುವಿಕೆ ಕಂಡು ಬೆರಗಾದರು. ಬಿಕ್ಕಳಿಸಿ ಬಿಕ್ಕಳಿಸಿ ಹತ್ತರು. ತಡ ಮಾಡದೇ ವಿಷಯ ತಿಳಿಸಿದರು. ಅವನು ಒಮ್ಮೆ ಗಾಬರಿಗೊಂಡ. ಮರುಕ್ಷಣವೇ ನಕ್ಕು ಹಿಂಗೆಲ್ಲಾ ಆಟ ಆಡಿಸೋಕೆ ಬರಬೇಡಿ. ಮೊದ್ಲು ಅವಳನ್ನು ಕರೆಯಿರಿ ಎಂದ. ಇವರು ಮತ್ತೆ ವಿವರಿಸಿದರು.
ಅವನಿಗೆ ನಂಬಿಕೆ ಬರಲಿಲ್ಲ. ಕಡೆಗೆ ವಿಧಿಯಿಲ್ಲದೇ ಮರಣಪತ್ರ ತೋರಿಸಿದರು. ಆಗ ನಂಬಲಾಗದೇ ನಂಬಿದ ಸುಧೀರ ಗೊಳೋ ಎಂದು ಹತ್ತ. ನಿರ್ಧಾರದ ಧ್ವನಿಯಲ್ಲಿ ಹೇಳಿದ. ನೋ ನಾನು ಇದನ್ನೆಲ್ಲಾ ನಂಬಲಾರೆ. ಕಳೆದ ಒಂದು ವಾರದಿಂದಲೂ ಸುನಿತಾ ನಂಗೆ ಫೋನ್ ಮಾಡ್ತಾನೆ ಇದ್ದಾಳೆ.
ನಾನು ಅವಳಿಗೆ ಫೋನ್ ಮಾಡಿದ್ದೀನಿ. ನಿನ್ನೆ ರಾತ್ರಿ ಕೂಡ ಅವಳೊಂದಿಗೆ ಮಾತಾಡಿದೆ. ಬೇಕಿದ್ರೆ ಸಾಕ್ಷಿ ತೋರಿಸ್ತಿನಿ ಎಂದವನೇ ತನ್ನಮೊಬೈಲ್ ತೆಗೆದು ತೋರಿಸಿದ.
ಮನೆ ಮಂದಿಗೆಲ್ಲಾ ಆಶ್ಚರ್ಯ. ಸುಧೀರನ ಮೊಬೈಲ್ ರಿಂಗ್ ಆಯ್ತು. ಮೊಬೈಲ್ ಪರದೆಯ ಮೇಲೆ ಸುನಿತಾ ಕಾಲಿಂಗ್ ಎಂಬ ಅಕ್ಷರ ಮಾಲೆ! ಇದನ್ನು ಎಲ್ಲರಿಗೂ ತೋರಿಸಿದ.
ತಕ್ಷಣವೇ ತನ್ನ ಮೊಬೈಲ್ ಲೌಡ್ ಸ್ಪೀಕರ್ ಆನ್ ಮಾಡಿ ಸುನಿತಾಳೊಂದಿಗೆ ಮಾತನಾಡಿದ. ಹೌದಯ ಅದೇ ಅದೇ ಸುನಿತಾಳ ಧ್ವನಿ. ಅದೇ ಸ್ಪೀಡು ಅದೇ ಮಾದಕತೆ. ಅದೇ ಹಳೆಯ ತಾಜಾ ತಾಜಾ ಪ್ರೀತಿ.
ಆ ಮಾತುಗಳನೇ ಕೇಳತ್ತ ನಿಂತವರಿಗೆ ಬೆವರು ಬಂದಿತ್ತು. ಶಿವ ಶಿವಾ ಸತ್ತು ಹೋದವಳು ಮಾತಾಡುತ್ತಾಳೆ ಅಂದರೆ ಹೇಗೆ. ನಂಬಲು ಸಾಧ್ಯವಾಗಲಿಲ್ಲ. ಮತ್ತೆ ಕೇರಳದ ವಾಮಾಚಾರಿಯನ್ನೇ ಕರೆಸಿ ಏನಪ್ಪಾ ಇದೆಲ್ಲಾ… ಒಂದಿಷ್ಟು ಪರಿಹಾರ ಹೇಳು ಅಂದರು.
ಅವನು ಮತ್ತೆ ಆತ್ಮದ ಜೊತೆ ಸಂಭಾಷಣೆ ನಡೆಸಿ ಹೀಗೆ ಘೋಷಿಸಿದ. ಹೌದು ಆತ್ಮಕ್ಕೆ ಸಾವಿಲ್ಲ. ನಿಜವಾದ ಪ್ರೀತಿ ಎಂದೆಂದೂ ಸೋಲಲ್ಲಿ./ ಸಾಯಲ್ಲ. ಅದು ಅಮರ ಅಮರ ಅಮರ ಎಂದ. ಸುಧೀರ ಬದುಕಿರುವವರೆಗೂ ಸುನಿತಾಳ ಆತ್ಮ ಮಾತಾಡ್ತಾನೇ ಇರುತ್ತದೆ ಮೊಬೈಲ್ ಮೂಲಕ ಎಂದ ಅದು ಸತ್ಯವಾಯಿತು.
ಇದು ನಡೆದ ಕತೆ. ಮೊಬೈಲ್ ನೆಟ್‌ವರ್ಕ್ ಎಷ್ಟೊಂದು ಶಕ್ತಿಶಾಲಿ ಎಂದು ವಿವರಿಸಬೇಕಿಲ್ಲ. ಅದಕ್ಕೆ ಈ ಕತೆ ಒಂದು ನೆಪವಷ್ಟೇ. ವರಿಜಿನಾಲಿಟಿ ಇಷ್ಟೆ. ಏಪ್ರಿಲ್ ಫಸ್ಟ್‌ಗಾಗಿ ನಾನು ಬರೆದ ಕಲ್ಪನಾ ಕಥಾನಕ ಅಷ್ಟೆ.