ದಾವಣಗೆರೆ ನಗರದಲ್ಲಿ ಶೇ.10 ಮತ ಪ್ರಮಾಣ ಹೆಚ್ಚಳ, BlOಗಳಿಗೆ ಪ್ರೋತ್ಸಹ ಧನ ಗಿಫ್ಟ್?

Suddivijaya
Suddivijaya May 8, 2024
Updated 2024/05/08 at 2:41 PM

suddivijayanews8/5/2024

ಶಿವಲಿಂಗಪ್ಪ ಬಿ, ದೊಡ್ಡಬೊಮ್ಮನಹಳ್ಳಿ

ಜಗಜೀವನ್‍ರಾಮ್

ಸುದ್ದಿವಿಜಯ, ಜಗಳೂರು: ವಿಶೇಷ: ಮೇ.7 ರಂದು ಮಂಗಳವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ನಗರದಲ್ಲಿ ಶೇ.10 ರಷ್ಟು ಮತದಾನ ಹೆಚ್ಚಳವಾಗಿದೆ. ಈ ಹಿಂದೆ ಕಡಿಮೆ ಮತದಾನವಾದ ಬೂತ್‍ಗಳಲ್ಲಿ ಹಿಂದಿಗಿಂತ ಮತದಾನ ಪ್ರಮಾಣ ಹೆಚ್ಚಳವಾಗಿದ್ದು ಬಿಎಲ್‍ಒಗಳಿಗೆ ಪ್ರೋತ್ಸಹ ಧನ ಗಿಫ್ಟ್ ನೀಡಲು ಸ್ವೀಪ್ ಸಮಿತಿ ನಿರ್ಧಾರ ಮಾಡಿದೆ ಎನ್ನಲಾಗಿದೆ.

ಸಿಲಿಕಾನ್ ಸಿಟಿ ಬೆಂಗಳೂರು ಮಹಾನಗರದಲ್ಲಿ ಸೀಮಿತವಾಗಿದ್ದ ಮತಗಟ್ಟೆಗಳಲ್ಲಿ ಮತದಾನ ಹೆಚ್ಚಳ ಮಾಡಲು ಪ್ರೋತ್ಸಾಹ ಧನವನ್ನು ಬಿಎಲ್‍ಒಗಳಿಗೆ ನೀಡಲು ನಿರ್ಧಾರ ಮಾಡಲಾಗಿತ್ತು.ಆದರೆ ಈಗ ಎರಡನೇ ದರ್ಜೆಯ ಸಿಟಿಗಳಿಗೂ ವಿಸ್ತರಿಸಲಾಗಿದೆ. ಸ್ಮಾಟ್‍ಸಿಟಿ ಎಂದೇ ಖ್ಯಾತಿಯಾಗಿರುವ ದಾವಣಗೆರೆಯಲ್ಲಿ 2019ರಲ್ಲಿ ದಕ್ಷಿಣ ಕ್ಷೇತ್ರದಲ್ಲಿ ಶೇ.65.78 ರಷ್ಟು ಮತದಾನ ಆಗಿತ್ತು. ಉತ್ತರ ಕ್ಷೇತ್ರದಲ್ಲಿ ಶೇ.65.48 ಮತದಾನವಾಗಿತ್ತು. ‘

ಹೀಗಾಗಿ ಈ ಮತಗಟ್ಟೆಗಳಲ್ಲಿ ಮತದಾನ ಹೆಚ್ಚಿಸಲು ಬಿಎಲ್‍ಒಗಳು ಕಳೆದ ಕೆಲ ತಿಂಗಳಿನಿಂದ ಟೊಂಕಕಟ್ಟಿ ಕೆಲಸ ಮಾಡಿದ್ದಾರೆ. ರಾಜಕೀಯ ಪಕ್ಷಗಳ ಮುಖಂಡರ ರೀತಿಯಲ್ಲಿ ಮನೆ ಮನೆಗೆ ತೆರಳಿ ಮತದಾನ ಮಾಡಿ ಎಂದು ಮನವೊಲಿಸಿ ಮತದಾನ ಪ್ರಮಾಣ ಶೇ.10ರಷ್ಟು ಹೆಚ್ಚಿಸಿದ್ದು ಕಷ್ಟಕ್ಕೆ ಫಲ ಸಿಗುವ ನಿರೀಕ್ಷೆಯಲ್ಲಿದ್ದಾರೆ.

ಟಾರ್ಗೆಟ್ ನೀಡಿದ್ದ ಸ್ವೀಪ್ ಸಮಿತಿ:
135 ಮತಗಟ್ಟೆಗಳಲ್ಲಿ ಕಳೆದ ಬಾರಿಗಿಂತ ಮತದಾನ ಪ್ರಮಾಣವನ್ನು ಕನಿಷ್ಟ ಶೇ.10 ರಷ್ಟು ಹೆಚ್ಚಿಸಿದರೆ ಅವರಿಗೆ ಪ್ರೋತ್ಸಾಹಧನದ ಗೌರವ ಸಲ್ಲಿಸಲು ಸ್ವೀಪ್ ಸಮಿತಿ ಯೋಜನೆ ರೂಪಿಸಿಕೊಂಡಿತ್ತು.

ಬಿಎಲ್‍ಒಗಳು ಮತದಾನ ಪ್ರಮಾಣ ಹೆಚ್ಚಿಸುವ ಗುರಿಯನ್ನು ಮುಟ್ಟಲು ಹಲವು ದಿಕ್ಕುಗಳಲ್ಲಿ ಹೆಚ್ಚಿನ ಶ್ರಮ ಹಾಕುತ್ತಿದ್ದಾರೆ. ಈ ವರ್ಷ ಶೇ.10ರಷ್ಟು ಮತದಾನವಾಗಿದ್ದು ಬಿಎಲ್‍ಒಗಳು ಸಹಾಯಧನ ನಿರೀಕ್ಷೆಯಲ್ಲಿದ್ದಾರೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!