ಭರಮಸಾಗರ: ರೈತರ ಪಂಪ್‍ಸೆಟ್‍ಗೆ ಆಧಾರ್ ಜೋಡಣೆ ಖಂಡಿಸಿ ಪ್ರತಿಭಟನೆ

Suddivijaya
Suddivijaya July 19, 2024
Updated 2024/07/19 at 10:48 AM

suddivijayanews19/07/2024

ಸುದ್ದಿವಿಜಯ, ಭರಮಸಾಗರ: ರೈತರ ಮೋಟಾರ್ ಪಂಪ್‍ಗಳಿಗೆ ರಾಜ್ಯ ಸರಕಾರ ಆಧಾರ್ ಜೋಡಣೆ ಖಂಡಿಸಿ ಭರಮಸಾಗರ ಪಟ್ಟಣದಲ್ಲಿ ಶುಕ್ರವಾರ ರೈತ ನಾಯಕ ಪುಟ್ಟಣ್ಣ ಬಣದ ನೂರಾರು ರೈತರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸಾಮುದ್ರ ಗ್ರಾಮದ ಎಂ.ಎಸ್.ಪ್ರಭು ನೇತೃತ್ವದಲ್ಲಿ ಬೈಕ್ ರ್ಯಾಲಿ ನಡೆಸಿ ನಂತ ಬೆಸ್ಕಾಂ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಮಾಡಿ ಬೆಸ್ಕಾಂ ಎಇಇ ಜಯಣ್ಣ ಅವರಿಗೆ ಮನವಿ ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಪ್ರಭು, ರಾಜ್ಯ ಸರಕಾರ ಮತ್ತು ಬೆಸ್ಕಾಂ ಅಧಿಕಾರಿಗಳು ರೈತರ ಪಂಪ್‍ಸೆಟ್‍ಗಳಿಗೆ ಆಧಾರ್ ಜೋಡಣೆ ಮಾಡುವ ಮೂಲಕ ರೈತರಿಗೆ ಘೋರ ಅನ್ಯಾಯ ಮಾಡುತ್ತಿದೆ.

ಭರಮಸಾಗರ ಪಟ್ಟಣದ ಬೆಸ್ಕಾಂ ಕಚೇರಿಗೆ ರೈತರು ಮುತ್ತಿಗೆ ಹಾಕಿ ಪಂಪ್‍ಸೆಟ್‍ಗಳಿಗೆ ಆಧಾರ್ ಜೋಡಣೆ ಖಂಡಿಸಿ ಮನವಿ ಸಲ್ಲಿಸಿದರು.
ಭರಮಸಾಗರ ಪಟ್ಟಣದ ಬೆಸ್ಕಾಂ ಕಚೇರಿಗೆ ರೈತರು ಮುತ್ತಿಗೆ ಹಾಕಿ ಪಂಪ್‍ಸೆಟ್‍ಗಳಿಗೆ ಆಧಾರ್ ಜೋಡಣೆ ಖಂಡಿಸಿ ಮನವಿ ಸಲ್ಲಿಸಿದರು.

ಕಳೆದ ವರ್ಷ ತೀವ್ರ ಬರಗಾಲ ಅನುಭವಿಸಿ ರೈತರು ಆರ್ಥಿಕವಾಗಿ ಸಂಕಷ್ಟ ಅನುಭವಿಸಿದ್ದಾರೆ. ಪ್ರಸ್ತುತ ರಾಜ್ಯ ಸರಕಾರ ಗಾಯದ ಮೇಲೆ ಬರೆ ಎಂಬಂತೆ ಬರದಿಂದ ಬಸವಳಿದ ರೈತರಿಗೆ ಈಗ ಆಧಾರ್ ಜೋಡಣೆ ಮಾಡುವ ಮೂಲಕ ರೈತರ ಮೇಲೆ ಸವಾರಿ ಮಾಡುತ್ತಿರುವುದು ರೈತ ವಿರೋಧಿ ಸರಕಾರಕ್ಕೆ ಇದು ಉದಾಹರಣೆಯಾಗಿದೆ.

ರೈತರು ಬೆಳೆದ ಬೆಳೆಗಳಿಗೆ ಎಂಎಸ್‍ಪಿ ಕಾನೂನು ಜಾರಿಗೆ ತಂದು ನಿಗದಿತ ದರ ಮಾಡಿ ನಂತರ ಆಧಾರ್ ಜೋಡಣೆ ಅಥವಾ ಪಂಪ್‍ಸೆಟ್‍ಗಳಿಗೆ ಮೀಟರ್ ಅಳವಡಿಸಲಿ.ಸಂಕಷ್ಟದಲ್ಲಿರುವ ರೈತರಿಗೆ ರಾಜ್ಯ ಸರಕಾರ ರೈತರಿಗೆ ಕುತ್ತಿಗೆ ಹಿಸುಕುವ ಕಾರ್ಯ ಮಾಡುತ್ತಿರುವುದು ಸರಿಯಲ್ಲ. ಹಿಂದಿನ ಸರಕಾರಗಳು ಹೇಗೆ ರೈತರನ್ನು ನಡೆಸಿಕೊಳ್ಳುತ್ತಿದ್ದವೋ ಹಾಗೆ ನಡೆಸಿಕೊಳ್ಳಬೇಕು.

ಪಂಪ್‍ಸೆಟ್‍ಗಳಿಗೆ ಆಧಾರ್ ಜೋಡಣೆ ಮಾಡುವ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಎಂ.ಬಸವರಾಜ್, ಶಂಭುಲಿಂಗಪ್ಪ, ರವಿಕುಮಾರ್, ಎಂ.ಬಿ.ಶಿವರಾಜ್ ಪಾಟೀಲ್, ಎಸ್.ಎಸ್.ಶ್ರೀನಿವಾಸ್ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!