ಸುದ್ದಿವಿಜಯ,ಭರಮಸಾಗರ: ಶನಿವಾರದ ಬೆಳಗ್ಗೆ ಭರಮಸಾಗರ ಸಮೀಪದ ನಂದಿಹಳ್ಳಿ ಗ್ರಾಮದ ಸಮೀಪ ಭೀಕರ ಅಪಘಾತಕ್ಕೆ ಶಿಕ್ಷಕ ಪ್ರದೀಪ್ (40) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಶಾಲಾ ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಪ್ರೌಢಶಾಲಾ ಶಿಕ್ಷಕ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ಚಿತ್ರದುರ್ಗ ತಾಲೂಕಿನ ಬಹದ್ದೂರ್ ಘಟ್ಟ ಗ್ರಾಮದ ಕಲ್ಲಮ್ಮ ಪ್ರೌಢಶಾಲೆ ಶಿಕ್ಷಕ ಪ್ರದೀಪ್ (40) ಮೃತ ಪಟ್ಟ ಶಿಕ್ಷಕ.
ಶನಿವಾರದ ಶಾಲಾ ಕರ್ತವ್ಯಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ನಂದಿಹಳ್ಳಿ ಬಳಿ ಎದುರು ಬರುತ್ತಿದ್ದ ಶಾಲಾ ವಾಹನಕ್ಕೆ ಡಿಕ್ಕಿ ಆಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಡಿಕ್ಕಿಯ ರಭಸಕ್ಕೆ ಬೈಟ್ ಜಖಂಗೊಂಡಿದೆ. ಪ್ರದೀಪ್ ವಾಹನದ ಅಡಿಗೆ ಸಿಲುಕಿ ಪ್ರಾಣಬಿಟ್ಟಿದ್ದಾರೆ. ತಮ್ಮ ಶಿಕ್ಷಕ ವೃತ್ತಿಯ ಜೊತೆಗೆ ಮಾದರಿ ಕೃಷಿಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು.
ಸಿರಿಗೆರೆ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಮಾಜಿ ಆಡಳಿತಾಧಿಕಾರಿ ನಿಜಲಿಂಗಪ್ಪ ನವರ ಪ್ರತ್ರರಾಗಿದ್ದ ಪ್ರದೀಪ್ ಈ ಹಿಂದೆ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಬಿದರಕೆರೆ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ಎರಡು ವರ್ಷಗಳ ಹಿಂದೆ ಬಹದ್ದೂರ್ ಘಟ್ಟ ಪ್ರೌಢಶಾಲೆಗೆ ವರ್ಗಾವಣೆ ಆಗಿ ಬಂದಿದ್ದರು.
ಬಹದ್ದೂರ್ ಘಟ್ಟ ಗ್ರಾಮದ ಶಾಲಾ ಆಡಳಿತ ಮಂಡಳಿ, ಗುರುವೃಂದ , ಬಹದ್ದೂರ್ ಘಟ್ಟ ಗ್ರಾಮಸ್ಥರು, ವಿದ್ಯಾರ್ಥಿಗಳು ಸೇರಿದಂತೆ ಅವರ ಅಪಾರ ಸ್ನೇಹಿತರು ಶಿಕ್ಷಕರು ಪ್ರದೀಪ್ ಅಕಾಲಿಕ ಸಾವಿಗೆ ಕಂಬನಿ ಮೀಡಿದಿದ್ದಾರೆ.
ಭರಮಸಾಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.