ಸುದ್ದಿವಿಜಯ, ಭರಮಸಾಗರ: ಭಾರತೀಯ ಜನತಾ ಪಕ್ಷ ತಳಮಟ್ಟದಿಂದ ಸಂಘಟನೆ ಮಾಡಿಕೊಂಡು ಬಂದಿದೆ. 135 ಕೋಟಿ ಜನ ಸಂಖ್ಯೆಯಿದ್ದರೂ 100 ಕೋಟಿ ಜನರಿಗೆ ಮನೆ ಮನೆ ಪ್ರಧಾನ ಮಂತ್ರಿಗಳು ಪಡಿತರ ವಿತರಿಸುವ ಯೋಜನೆ ಬಹಳ ಯಶಸ್ವಿಯಿಂದ ನೆರವೇರಿಸಿದ್ದಾರೆ. ಬಿಜೆಪಿ ಜನರ ಕಲ್ಯಾಣಕ್ಕೆ ಬದ್ಧವಾಗಿದೆ ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಹೇಳಿದರು.
ಭಾನುವಾರ ಭರಮಸಾಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಮಂಡಲ್ ಕಾರ್ಯಕಾರಣಿ ಸಭೆಯನ್ನು ಪರಿಸರ ದಿನದ ಅಂಗವಾಗಿ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.ವಿಶ್ವಕ್ಕೆ ಅಂಟಿದ ಕೋವಿಡ್ ಮಹಾಮಾರಿಯನ್ನು ಬಹಳ ವ್ಯವಸ್ಥಿತವಾಗಿ ನಿರ್ವಹಿಸಿದರು. ಜಗತ್ತಿನ ಇತರೆ ದೇಶಗಳ ಜನರು ಸೋಂಕಿನಿಂದ ಭಯಮಟ್ಟಾಗ ಬಹುತ್ವವಿರುವ ನಮ್ಮದೇಶದಲ್ಲಿ ಸೋಂಕನ್ನು ನಿಯಂತ್ರಣಕ್ಕೆ ತಂದು ಎಲ್ಲರಿಗೂ ಕೋವಿಡ್ ಲಸಿಕೆ ಉಚಿತವಾಗಿ ನೀಡಿದ್ದು ಬಹಳ ದೊಡ್ಡ ಸಾಧನೆ ಎಂದು ಹೇಳಿದರು.
ಹೊಳಲ್ಕೆರೆ ಕ್ಷೇತ್ರದ 496 ಹಳ್ಳಿಗಳಿಗೂ 2500 ಕೋಟಿ ಅನುದಾನ ತಂದು ಮೂಲಕ ಸೌಕರ್ಯಗಳ ಅಭಿವೃದ್ಧಿ ಮಾಡಿದ್ದೇನೆ. ಮುಂಬರುವ ಚುನಾವಣೆ ಅಭಿವೃದ್ಧಿ ಆಧಾರಿತ ಚುನಾವಣೆಯಾಗಿರುತ್ತದೆ. ಇಲ್ಲಿನ ಜನರು ಏನೂ ಕೇಳದಿದ್ದರೂ ಅವರಿಗೆ ಏನು ಬೇಕು ಎಂಬುದನ್ನು ಗುರುತಿಸಿ ಎಲ್ಲ ವ್ಯವಸ್ಥೆ ಮಾಡುತ್ತಿದ್ದೇನೆ ಎಂದರು. ತರಳಬಾಳು ಶ್ರೀಗಳ ಆಶೀರ್ವಾದಿಂದ 43 ಕೆರೆಗಳಿಗೆ ನೀರು ಬಂದಿದ್ದು ಈ ಭಾಗದ ಜನರ ಬದುಕು ಬಂಗಾರವಾಗಲಿದೆ ಎಂದರು.ಮುಂದಿನ ಚುನಾವಣೆಯಲ್ಲಿ ನಿಮ್ಮ ಬೂತ್ನಲ್ಲಿ ವೋಟ್ ಕಡಿಮೆಯಾದರೆ ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಲಿದೆ. ಹೀಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಎಂದು ಕಿವಿ ಮಾತು ಹೇಳಿದರು.
ಈ ವೇಳೆ ಮಂಡಲ್ ಅಧ್ಯಕ್ಷ ಶೈಲೇಶ್ ಕುಮಾರ್, ಜಿಲ್ಲಾಧ್ಯಕ್ಷ ಮುರಳಿಧರ್, ಜಿ.ಟಿ.ಸುರೇಶ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಶರಣಪ್ಪ, ಬಿಜೆಪಿ ಮುಖಂಡರಾದ ಮಂಜುನಾಥ್, ವೀರೇಶ್ ಬಸವರಾಜ್, ಮೋಹನ್ ಸಿರಿಗೆರೆ, ಕಲ್ಲೇಶ.ಮಹಿಳಾ ಮೋರ್ಚಾ ಪದಾಧಿಕಾರಿಗಳು, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಸಂದೀಪ್ ಹೆಂಚಿನಮನೆ, ಶಿವಕುಮಾರ್, ರವಿಕುಮಾರ್, ಚಿದಾನಂದ, ಅಮಿತ್ ಹಾಜರಿದ್ದರು. ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಶಾಸಕ ಚಂದ್ರಪ್ಪ ಅವರು ಭಾನುವಾರ ಅರಳಕಟ್ಟೆಯಲ್ಲಿ 20 ಲಕ್ಷದ ಸಿಸಿ ರಸ್ತೆಗೆ ಗುದ್ದಲಿ ಪೂಜೆ, 10 ಲಕ್ಷ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟ ಉದ್ಘಾಟನೆ, 10 ಲಕ್ಷ ರೂ ವೆಚ್ಚದಲ್ಲಿ ಸಮುದಾಯಭವನಕ್ಕೆ ಪೂಜೆ, ಸುಲ್ತಾನಿ ಪುರ ಗ್ರಾಮದಲ್ಲಿ 15 ಲಕ್ಷದ ಸಿಸಿ ರಸ್ತೆ, ಬೇಡರ ಶಿವನಕೆರೆಯಲ್ಲಿ 10 ರೂ ವೆಚ್ಚದಲ್ಲಿ ಸಮುದಾಯ ಭನಕ್ಕೆ ಗುದ್ದಲಿ ಪೂಜೆ, 15 ರೂ ವೆಚ್ಚದಲ್ಲಿ ಸಿಸಿರಸ್ತೆ ಸೇರಿದಂತೆ ಒಟ್ಟಾರೆ 1 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಪೂಜೆ ನೆರವೇರಿಸಿದರು.