ಜೆಡಿಎಸ್ ಬಲಗೊಳಿಸುವುದೇ ನನ್ನ ಗುರಿ: ಎನ್.ವೆಂಕಟೇಶ್

Suddivijaya
Suddivijaya June 13, 2022
Updated 2022/06/13 at 4:48 PM

ಸುದ್ದಿ ವಿಜಯ,ಭರಮಸಾಗರ: ಕಾಂಗ್ರೆಸ್, ಬಿಜೆಪಿ ಪಕ್ಷಗಳು ಅಧಿಕಾರದ ದಾಹದಿಂದ ಜನರ ಹಿತ ಮರೆತಿದ್ದು ರಾಜ್ಯದ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಜನ ಮಾನಸದಲ್ಲಿ ಪ್ರಬಲವಾಗಿ ಬೇರೂರುತ್ತಿದೆ ಎಂದು ಹೊಳಲ್ಕೆರೆ ಕ್ಷೇತ್ರ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಎನ್.ವೆಂಕಟೇಶ್ ಹೇಳಿದರು.

ಸೋಮವಾರ ಹೊಳಲ್ಕೆರೆ ಕ್ಷೇತ್ರದ ಭರಮಸಾಗರ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸಿ ವಿವಿಧ ಸಮಾರಂಭಗಳಲ್ಲಿ ಭಾಗವಹಿದ ನಂತರ ಪ್ರವಾಸಿ ಮಂದಿರದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷಗಳಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ.

ಬಿಜೆಪಿ ಜನರ ಹಿತ ಮರೆತಿದೆ:

ಅಚ್ಚೇದಿನ ಎಂಬ ಮಾತು ಕೇವಲ ಭರವಸೆಯಾಗಿಯೇ ಉಳಿದಿದೆ. ರಾಜ್ಯದಲ್ಲಿ ಈ ಹಿಂದೆ ಜೆಡಿಎಸ್ ಪಕ್ಷ ಅಧಿಕಾರದಲ್ಲಿದ್ದಾಗ ರೈತರ ಸಾಲಮನ್ನ, ಜಲಸಂಪನ್ಮೂಲ ಅಭಿವೃದ್ಧಿಗೆ ಒತ್ತು ನೀಡಲಾಯಿತು. ಆದರೆ ನಂತರದ ದಿನಗಳಲ್ಲಿ ಅಕಾರಕ್ಕೆ ಬಂದ ಬಿಜೆಪಿ ಜನರ ಹಿತ ಮರೆತಿದೆ. ಉದ್ಯೋಗನಷ್ಟ, ರೈತರ ಹಿತ ಕಾಯದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಜನರು ಬೇಸತ್ತು ಹೋಗಿದ್ದಾರೆ.

ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಈಗಾಗಲೇ ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿಪ್ರಾದೇಶಿಕ ಪಕ್ಷಗಳ ಸರಕಾರಗಳು ಅಭಿವೃದ್ಧಿಯ ನಾಗಾಲೋಟದಲ್ಲಿವೆ ಹೀಗಾಗಿ ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷಕ್ಕೆ ಉತ್ತಮ ಭವಿಷ್ಯವಿದೆ. ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಪ್ರತಿಹಳ್ಳಿಗಳಿಗೆ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ವೆಂಕಟೇಶ್ ಮತದಾರರಿಗೆ ಭರವಸೆ ನೀಡಿದರು.

ಈ ವೇಳೆ ಜೆಡಿಎಸ್ ಮುಖಂಡರಾದ ಹೊನ್ನೂರಪ್ಪ, ವಕೀಲರಾದ ಮೂಲೆಮನೆ, ಜೆಡಿಎಸ್ ಯುವ ಘಟಕದ ಅಧ್ಯಕ್ಷರಾದ ಕೇಶವಮೂರ್ತಿ, ಹಾಲೇಶ್, ಗೋವಿಂದರಾಜ್ ಸೇರಿದಂತೆ ಅನೇಕರು ಇದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!