ಪುನರ್ ಮನನ ಕಾರ್ಯಕ್ರಮಗಳು ಅಧ್ಯಾಪಕರನ್ನು ಪುನಶ್ಚೇತನಗೊಳಿಸುವಲ್ಲಿ ಸಹಕರಿ: ಡಾ.ಆರ್.ಶಶಿಕಲಾ

Suddivijaya
Suddivijaya September 23, 2023
Updated 2023/09/23 at 11:29 AM

ಸುದ್ದಿವಿಜಯ, ಭರಮಸಾಗರ: ಪುನರ್ ಮನನ ಕಾರ್ಯಕ್ರಮಗಳು ಅಧ್ಯಾಪಕರನ್ನು ಪುನಶ್ಚೇತನಗೊಳಿಸುವಲ್ಲಿ ಸಹಕಾರಿಯಾಗಲಿದ್ದು ಕಲಿಕಾ ಹಂತಕ್ಕೆ ಪೂರಕವಾಗಲಿವೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯರಾದ ಡಾ. ಆರ್.ಶಶಿಕಲಾ ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಭರಮಸಾಗರದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರ ಒಂದು ದಿನದ  NEP ಪಠ್ಯಕ್ರಮದ ಕಾರ್ಯಗಾರವನ್ನು ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದಿಂದ ಆಯೋಜಿಸಲಾಗಿತ್ತು. ಈವೇಳೆ ಮಾತನಾಡಿದ ಅವರು, ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡುವುದರ ಮೂಲಕ ವಿದ್ಯಾರ್ಥಿಗಳನ್ನು ಭೌತಿಕವಾಗಿ ಸದೃಢಗೊಳಿಸುವುದು ಹೊಸ ಶಿಕ್ಷಣ ನೀತಿಯ ಆಶಯವಾಗಿದೆ.

ಪ್ರಸ್ತುತ ಸಾಲಿನಲ್ಲಿ ಹೆಚ್ಚಿನ ಚಟುವಟಿಕೆಗಳನ್ನು ಆಯೋಜಿಸುವುದರ ಮೂಲಕ ವಿದ್ಯಾರ್ಥಿಗಳನ್ನು ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಕಳುಹಿಸಿಕೊಡಬೇಕೆಂದು ಹೇಳಿದರು.ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ತಿಪ್ಪೇಸ್ವಾಮಿರವರು ದೈಹಿಕ ಶಿಕ್ಷಣದ ಪಠ್ಯಕ್ರಮದ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಮತ್ತೋರ್ವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶಂಕ್ರಪ್ಪ ಸಿ ರವರು ದೈಹಿಕ ಶಿಕ್ಷಣದ ಚಟುವಟಿಕೆಗಳ ಮೂಲಕ ಮೌಲ್ಯಮಾಪನ ಮಾಡುವ ಬಗ್ಗೆ ತಿಳಿಸಿದರು.

ಕಾರ್ಯಕ್ರಮದ ಪ್ರಸ್ತಾಪಿಕ ನುಡಿಗಳನ್ನು ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ವೀರೇಂದ್ರ ಕೆ ಎಂ ನುಡಿದರು. ಅಧ್ಯಾಪಕರಾದ ಕೆ.ಎಸ್.ಸೌಮ್ಯ, ಲೋಕೇಶ್ ನಾಯಕ್ ಮತ್ತು ಹಿರಿಯ ಅಧ್ಯಾಪಕರಾದ ಸತ್ಯನಾರಾಯಣ,

. ದಾವಣಗೆರೆ ವಿಶ್ವವಿದ್ಯಾಲಯದ ವಿವಿಧ ಕಾಲೇಜುಗಳ ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ಪ್ರಸನ್ನ ಕುಮಾರ್ ಡಿ, ಚಂದ್ರಶೇಖರಪ್ಪ, ಹರೀಶ್ ಪಿ.ಎಸ್, ಗಿರೀಶ್ ಎಂ.ಎಸ್ ಹಾಗೂ ವಿವಿಧ ಕಾಲೇಜುಗಳಿಂದ ಬಂದಿರುವ ಎಲ್ಲಾ ದೈಹಿಕ ಶಿಕ್ಷಣ ನಿರ್ದೇಶಕರುಗಳು, ಕಾಲೇಜಿನ ಭೋದಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಜರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!