ಇನ್ಮುಂದೆ 2000 ಮುಖ ಬೆಲೆ ನೋಟಿಗಿಲ್ಲ ಮಾನ್ಯತೆ, ದೇಶದಾದ್ಯಂತ ಬ್ಯಾನ್ ಆಯ್ತು ಪಿಂಕ್ ನೋಟ್!

Suddivijaya
Suddivijaya May 19, 2023
Updated 2023/05/19 at 2:49 PM

ಸುದ್ದಿವಿಜಯ, ನವದೆಹಲಿ: ಇನ್ಮುಂದೆ ದೇಶದಲ್ಲಿ ಎರಡು ಸಾವಿರ ಮುಖಬೆಲೆಯ ನೋಟುಗಳಿಗೆ ಮಾನ್ಯತೆಯಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟಪಡಿದೆ.

2 ಸಾವಿರ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಶುಕ್ರವಾರ ಘೋಷಣೆ ಮಾಡಿದೆ.

2 ಸಾವಿರ ಮಖಬೆಲೆಯ ನೋಟು ವಿತರಣೆ ನಿಲ್ಲಿಸಲು ಬ್ಯಾಂಕುಗಳಿಗೆ ಸೂಚನೆ ನೀಡಿದೆ.

ಸದ್ಯ ಚಲಾವಣೆಯಲ್ಲಿರುವ ನೋಟುಗಳನ್ನು ಸೆಪ್ಟೆಂಬರ್ 30ರ ಒಳಗಾಗಿ ಬ್ಯಾಂಕ್‍ಗಳಲ್ಲಿ ಠೇವಣಿ ಇಡುವಂತೆ ಅಥವಾ ಬೇರೆ ಮುಖಬೆಲೆಯ ನೋಟುಗಳೊಂದಿಗೆ ವಿನಿಮಯ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ.

ಮೇ.23 ರಿಂದ ನೋಟುಗಳನ್ನು ಬದಲಿಸಿಕೊಳ್ಳಬಹುದಾಗಿದೆ. 2 ಸಾವಿರ ಮುಖಬೆಲೆಯ ನೋಟುಗಳನ್ನು ಆರ್‍ಬಿಐ 2016 ರ ನವೆಂಬರ್‍ನಲ್ಲಿ ಚಲಾವಣೆಗೆ ತಂದಿತ್ತು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!