ಸುದ್ದಿವಿಜಯ, ಬೆಂಗಳೂರು: ರಾಜಕೀಯ ಜಂಜಾಟದಲ್ಲಿ ಸದಾ ಬ್ಯೂಸಿ ಆಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್ಯಡಿಯೂರಪ್ಪ ಯೂರೋಪ್ ದೇಶಕ್ಕೆ ವಿಮಾನ ಏರಿ ಪ್ರವಾಸ ಹೊರಟಿದ್ದಾರೆ. ರಾಜಕೀಯವನ್ನೇ ಉಸಿರಾಗಿಸಿಕೊಂಡಿರುವ ಬಿಎಸ್ವೈ ಸ್ವಲ್ಪ ರಿಲ್ಯಾಕ್ಸ್ಗಾಗಿ ಯೂರೋಪ್ನ ವಿವಿಧ ದೇಶಗಳಿಗೆ ತೆರಳಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅಷ್ಟೇ ಅಲ್ಲ ತಮ್ಮ ಕುಟುಂಬದ ಸದಸ್ಯರು ಸಹ ಅವರ ಜತೆ ಯುರೋಪ್ ಪ್ರವಾಸಕ್ಕೆ ತೆರಳಿದ್ದಾರೆ.
ಬಿಎಸ್ವೈಗೆ ವಿಜಯೇಂದ್ರಂದ ಪ್ರವಾಸ!
ಮೊದಲಿಗೆ ಬ್ರಿಟನ್ ಭೇಟಿ ನೀಡಲಿರುವ ಅವರು, ಆ ಬಳಿಕ ಯುರೋಪಿನ ಇತರ ದೇಶಗಳಿಗೂ ಹೋಗಲಿದ್ದಾರೆ. ಬಿ.ವೈ.ವಿಜಯೇಂದ್ರ ಮತ್ತು ಕುಟುಂಬದ ಇತರ ಸದಸ್ಯರೂ ಬಿ.ಎಸ್.ವೈ ಜತೆಗಿದ್ದಾರೆ. ರಾಘವೇಂದ್ರ ಅವರು ಪ್ರವಾಸಕ್ಕೆ ಹೋಗಿಲ್ಲ ಎಂದು ಮೂಲಗಳು ಹೇಳಿವೆ. ಒಟ್ಟು 10 ದಿನಗಳ ಪ್ರವಾಸ ಇದಾಗಿದ್ದು ರಾಜಕೀಯ ಜಂಜಾಟಗಳಿಗೆ ಅಲ್ಪ ವಿರಾಮ ಹಾಕಿ ಎಂಜಾಯ್ ಮಾಡಲಿಕ್ಕೆ ಹೊರಟಿದ್ದಾರೆ.