ಸುದ್ದಿವಿಜಯ,ಚನ್ನಗಿರಿ: ತಾಲೂಕಿನ ಹಿರೇಮಳಲ್ಲಿ ಸಮೀಪದ ಭದ್ರಾನಾಲೆಯಲ್ಲಿ ವಿದ್ಯುತ್ ಸ್ಪರ್ಶಿಸಿ ಯುವಕನೋರ್ವ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.
ತಾಲೂಕಿನ ಮಾವಿನಕಟ್ಟೆ ಗ್ರಾಮ ನಿವಾಸಿ ಅಭಿಷೇಕ್(28) ಮೃತ ದುರ್ದೈವಿ.
ಹಿರೇಮಳಲ್ಲಿ ಗ್ರಾಮ ದಲ್ಲಿ ಭದ್ರಾ ನಾಲೆಯ ಸುರಂಗ ಹಾದುಹೋಗಿದ್ದು, ಸದ್ಯ ನಾಲೆಯಲ್ಲಿ ನೀರು ಇರಲಿಲ್ಲ. ಅದ್ದರಿಂದ ಮೃತ ಅಭಿಷೇಕ್ ಸುರಂಗ ನೋಡಲು ಹೋಗಿದ್ದಾಗ ಈ ವೇಳೆ ನಾಲೆಯಿಂದ ನೀರನ್ನು ಮೇಲೆತ್ತಲು ಇಡಲಾಗಿದ್ದ ಮೋಟಾರ್ ನಿಂದ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಕುರಿತು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.