ಅಡಕೆ ಕಳ್ಳತನದ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು

Suddivijaya
Suddivijaya September 15, 2023
Updated 2023/09/15 at 3:23 PM

ಸುದ್ದಿವಿಜಯ, ಚನ್ನಗಿರಿ: ಆನೆ ಕದ್ದರು ಕಳ್ಳ, ಅಡಕೆ ಕದ್ದರು ಕಳ್ಳ ಎಂಬ ಗಾದೆ ಇದೆ. ಆದರೆ ಅಡಕೆ ಕದ್ದ ಕಳ್ಳರನ್ನು ಬಂಧಿಸುವಲ್ಲಿ ಚನ್ನಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ.

ತಾಲೂಕಿನ ಸಂತೆಬೆನ್ನೂರು ಠಾಣೆಯ ವ್ಯಾಪ್ತಿಯ ಹೊಸೂರು ಗ್ರಾಮದಲ್ಲಿ ಗೋದಾಮಿನಲ್ಲಿ ಶೇಕರಿಸಿಟ್ಟಿದ್ದ ರೈತನಿಗೆ ಸೇರಿದ್ದ 15 ಕ್ವಿಂಟಲ್ ಅಡಿಕೆ ಕಳ್ಳತನವಾಗಿದ್ದು, ಪೊಲೀಸರ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಆರೋಪಿಯನ್ನು ಶಿವಮೊಗ್ಗ ಜಿಲ್ಲೆಯ ಶೆಟ್ಟಿಹಳ್ಳಿ ಗ್ರಾಮದ ಚಾಲಕ ವೃತ್ತಿ ಮಾಡುತ್ತಿದ್ದ ಎಸ್.ಎಚ್.ಕಾರ್ತಿಕ್ (26)ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚನ್ನಗಿರಿ ಉಪಅಧೀಕ್ಷಕರಾದ ಡಾ.ಕೆ.ಎಂ.ಸಂತೋಷ್ ಮಾರ್ಗದರ್ಶನದಲ್ಲಿ ಸಿಪಿಐ ಲಿಂಗನಗೌಡ ನೆಗಳೂರು ನೇತೃತ್ವದಲ್ಲಿ ಸಂತೆಬೆನ್ನೂರು ಪಿಎಸ್‍ಐ ರೂಪಾ ತೆಂಬದ್, ಸಿಬ್ಬಂದಿಗಳಾದ ಸತೀಶ್, ರುದ್ರೇಶ್, ಶಂಕರಗೌಡ, ಆಂಜನೇಯ, ರಾಘವೇಂದ್ರ, ಪರಶುರಾಮ, ಪ್ರವೀಣಗೌಡ,

ರವಿಕುಮಾರ್ ಒಳಗೊಂಡ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಆರೋಪಿಯಿಂದ 2 ಲಕ್ಷ ನಗದು ಮತ್ತು ಆರು ಕ್ವಿಂಟಲ್ ಅಡಕೆ, ಸಾಗಾಣಗೆ ಬಳಸಿದ್ದ ವಾಹನ ಸೇರಿ ಒಟ್ಟು 4 ಲಕ್ಷ ರೂ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೊಪಿಯನ್ನು ಬಂಧಿಸಿದ ಪೊಲೀಸರ ಕಾರ್ಯಕ್ಕೆ ಎಸ್‍ಪಿ ಉಮಾ ಪ್ರಶಾಂತ್, ಎಎಸ್‍ಪಿಆರ್.ಬಿ.ಬಸರಗಿ ಪ್ರಶಂಸಿಸಿದ್ದಾರೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!