ಚನ್ನಗಿರಿ: ತಂತ್ರಜ್ಞಾನ ಆಧಾರಿತ ಬೇಸಾಯ ಆರ್ಥಿಕ ಅಭಿವೃದ್ಧಿಗೆ ವರದಾನ

Suddivijaya
Suddivijaya March 3, 2023
Updated 2023/03/03 at 1:57 PM

ಸುದ್ದಿವಿಜಯ, ಚನ್ನಗಿರಿ: ಭಾರತದಲ್ಲಿ ಕೃಷಿ ಜಿಡಿಪಿ ಮಹೋನ್ನತ ಹಂತದಲ್ಲಿದ್ದು ತಂತ್ರಜ್ಞಾನ ಆಧಾರಿತ ಬೇಸಾಯ ರೈತರ ಬಾಳಿಗೆ ವರದಾನವಾಗಲಿದೆ ಎಂದು ಟಿಕೆವಿಕೆ ಮುಖ್ಯಸ್ಥರಾದ ಡಾ. ಟಿ.ಎನ್. ದೇವರಾಜ್ ಅಭಿಪ್ರಾಯ ಪಟ್ಟರು.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,  ವಿಸ್ತರಣಾ ನಿರ್ದೇಶನಾಲಯ, ಶಿವಮೊಗ್ಗ, ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ದಾವಣಗೆರೆ,

ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಉಡುಪಿ ಹಾಗೂ ಹಿರೇಕೊಗಲೂರು ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ (FPO)ಇವರ ಸಂಯುಕ್ತ ಆಶ್ರಯದಲ್ಲಿ ಭಾರತ ಸರ್ಕಾರದ  ಯೋಜನೆ ಅಡಿಯಲ್ಲಿ ಕೃಷಿ ಡ್ರೋನ್ ತಂತ್ರಜ್ಞಾನದ ಪರಿಚಯದ ಕಾರ್ಯಕ್ರಮವನ್ನು ಶುಕ್ರವಾರ ಚನ್ನಗಿರಿ ತಾಲೂಕಿನ ವೆಂಕಟೇಶ್ವರ ಕ್ಯಾಂಪಿನಲ್ಲಿ ನೆರವೇರಿಸಲಾಯಿತು.

ಈ ವೇಳೆ ಮಾತನಾಡಿದ ಅವರು, ಕೃಷಿಯಲ್ಲಿ ವಿನೂತನ ತಾಂತ್ರಿಕತೆಗಳನ್ನು  ರೈತರಿಗೆ ಪರಿಚಯಿಸಿ ಅದರ ಸದುಪಯೋಗವನ್ನು ಭತ್ತದ ಬೆಳೆಗಾರರು ಪಡೆದುಕೊಳ್ಳಬೇಕು.

ಜನಸಂಖ್ಯೆ ಅಭಿವೃದ್ಧಿ ಆದಂತೆ ತಂತ್ರಜ್ಞಾನ ವೃದ್ದಿಸಿಕೊಂಡು ಹೆಚ್ಚು ಉತ್ಪಾದನೆ ಮಾಡಬೇಕಾದ ಅನಿವಾರ್ಯತೆ ಇದೆ.

ಹೀಗಾಗಿ ಡ್ರೋಣ್ ಆಧಾರಿತ ಔಷಧೋಪಚಾರ ಮತ್ತು ತಂತ್ರಜ್ಞಾನ ಬಳಕೆ ಅಗತ್ಯ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಉಡುಪಿ ಕೃಷಿ ವಿಜ್ಞಾನ ಕೇಂದ್ರದ ಬೇಸಾಯಶಾಸ್ತ್ರಜ್ಞ ಡಾ.ಎನ್. ನವೀನ್  ಮಾತನಾಡಿ, ಪ್ರಸ್ತುತ ಕೃಷಿಯಲ್ಲಿ ಅತ್ಯಮೂಲ್ಯವಾದ ಸಂಪತ್ತು, ಕೃಷಿ ಕಾರ್ಮಿಕರು ಇವರ ಅನುಪ ಸ್ಥಿತಿಯಲ್ಲೂ ಕೂಡ ಕೃಷಿಯನ್ನು.

ಮುಂದುವರಿಸಲು ಡ್ರೋನ್ ತಂತ್ರಜ್ಞಾನವು ನಿಖರವಾಗಿ ವೈಜ್ಞಾನಿಕವಾಗಿ ಬೆಳೆ  ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ತಿಳಿಸಿದರು.

ಕೆವಿಕೆ ಬೇಸಾಯ ತಜ್ಞ ಬಿ.ಓ. ಮಲ್ಲಿಕಾರ್ಜುನ ಮಾತನಾಡಿ, ಭತ್ತದ ಬೆಳೆಯು 30 ರಿಂದ 40 ದಿವಸದ ಹಂತದಲ್ಲಿದ್ದಾಗ ನ್ಯಾನೋ ಯೂರಿಯ ದ್ರಾವಣವನ್ನು ಡ್ರೋನ್ ಮುಖಾಂತರ ಸಿಂಪರಣೆ ಮಾಡುವುದರಿಂದ ರಸ ಗೊಬ್ಬರದ ಕಾರ್ಯ ಕ್ಷಮತೆ ಹೆಚ್ಚಿಸಿ ಬೆಳೆ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದರು.

ಎಫ್ ಪಿಓ ಅಧ್ಯಕ್ಷ ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವೆಂಕಟೇಶ್ವರ ಕ್ಯಾಂಪಿನ ರೈತ ಬಾಂಧವರು ಪಡೆದುಕೊಂಡರು. ಒಟ್ಟು 100 ಎಕರೆ ಭತ್ತದ ಬೆಳೆಯಲ್ಲಿ  ನ್ಯಾನೋ ಯೂರಿಯಾ ದ್ರಾವಣವನ್ನು ಎರಡು ಡ್ರೋನ್ ಮುಖಾಂತರ ಸಿಂಪಡಣೆ ಕೈಗೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ ಒಟ್ಟು 90 ಜನರು ಭಾಗವಹಿಸಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!