ಸುದ್ದಿವಿಜಯ, ಚಿತ್ರದುರ್ಗ: ವಸತಿ ಶಿಕ್ಷಣ ಸಂಸ್ಥೆಗಳಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕು ಎಂದು ಒತ್ತಾಯಿಸಿ ಸೋಮವಾರ ಕರ್ನಾಟಕ ರಾಜ್ಯ ಕ್ರೈಸ್ ವಸತಿ ಶಾಲೆಗಳು ಹೊರಗುತ್ತಿಗೆ ರಾಜ್ಯ ಡಿ-ಗ್ರೂಪ್ ನೌಕರರ ಸಂಘದಿಂದ ಚಿತ್ರದುರ್ಗದಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಅವರಿಗೆ ಮನವಿ ಸಲ್ಲಿಸಿದರು.
ವಸತಿ ಶಿಕ್ಷಣ ಸಂಸ್ಥೆಗಳಡಿಯಲ್ಲಿ ಬರುವ ಇಂದಿರಾಗಾಂಧಿ, ಮುರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಡಾ.ಬಿ.ಆರ್ ಅಂಬೇಡ್ಕರ್, ಅಟಲ್ ಬಿಹಾರ್ ವಾಜಪೇಯಿ ವಸತಿ ಶಾಲೆ ಸೇರಿದಂತೆ ಎಲ್ಲಾ ವಸತಿ ಶಾಲೆಗಳು ಸರ್ಕಾರದಿಂದ ಮಂಜೂರಾಗಿದ್ದು,
ಈಗಾಗಲೇ ಸುಮಾರು ವರ್ಷಗಳಿಂದಲೂ ಹೊರಗುತ್ತಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರನ್ನು ಖಾಲಿ ಇರುವ ಡಿ-ಗ್ರೂಪ್ ಹುದ್ದೆಗಳಲ್ಲಿ ಮುಖ್ಯ ಅಡುಗೆಯವರಾಗಿ, ಸಹಾಯಕರು, ಕಾವಲುಗಾರ, ಜವಾನ, ಸ್ವಚ್ಛತಾ ಸಿಬ್ಬಂದಿಗಳನ್ನಾಗಿ ನೇಮಕ ಮಾಡಿಕೊಂಡು ಖಾಯಂಗೊಳಿಸಬೇಕು ಎಂದು ಮನವಿ ಮಾಡಿದರು.
ಸಂಘದ ರಾಜ್ಯ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಈ ಸಂಸ್ಥೆಗಳಲ್ಲಿ 15ರಿಂದ 20 ವರ್ಷಗಳಿಂದ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ಸಂಬಂಧವಾಗಿ ರಾಜ್ಯ, ಜಿಲ್ಲಾ, ತಾಲೂಕು ಮಟ್ಟದಿಂದಲೂ ಹೋರಾಟ, ಪ್ರತಿಭಟನೆಯ ಮೂಲಕ ಸರ್ಕಾರದ ಗಮನಕ್ಕೆ ತರಲಾಗಿತ್ತು.
ಆದರೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಹೊಸದಾಗಿ ಬಂದಿರುವ ಕಾಂಗ್ರೆಸ್ ಸರ್ಕಾರ ಕೂಡ ಬಡವರು, ದೀನ, ದಲಿತರು, ನೊಂದವರ ಪರವಾಗಿ ಇದೆ ಎಂಬ ನಂಬಿಕೆಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದೇವೆ.
ಸಿ.ಎಂ ಸಿದ್ದರಾಮಯ್ಯನವರು, ಸಚಿವರುಗಳು ಗಮನಹರಿಸಿ ನಮಗೆ ನ್ಯಾಯ ಒದಗಿಸಬೇಕು ಎಂದು ಹೋರಾಟನಿರತ ನೌಕಕರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಡಿ-ಗ್ರೂಪ್ ನೌಕರರ ಸಂಘದ ಮಹಾಂತೇಶ್, ನೀಲಮ್ಮ, ಬಿ.ಎಚ್ ಮಂಜುನಾಥ್, ಲೋಹಿತಾಶ್ವ, ಕರಿಯಪ್ಪ, ಶ್ರೀಧರ್, ರಂಗಸ್ವಾಮಿ, ಶಿವಕುಮಾರ್, ಮೂರ್ತಪ್ಪ, ಮಾಕರ್ಂಡಯ್ಯ, ಕಮಲಮ್ಮ ಸೇರಿದಂತೆ ಮತ್ತಿತರಿದ್ದರು.