ಸುದ್ದಿ ಮುಖ್ಯಾಂಶಗಳು:
ರಾಜಸ್ಥಾನದಲ್ಲಿ ಪೈಶಾಚಿಕ ಕೃತ್ಯ ಆಘಾತ
ಹತ್ಯೆಕೋರರಿಗೆ ಗಲ್ಲು ಶಿಕ್ಷೆ ವಿಧಿಸಬೇಕು
ಬಿಜೆಪಿ ದ್ವೇಷದ ನಡೆಗೆ ದೇಶದಲ್ಲಿ ಧರ್ಮಾಂಧರ ಸಂಖ್ಯೆ ಹೆಚ್ಚಳ
ದ್ವೇಷದ ಮಾತು, ಸಾಮಾಜಿಕ ಜಾಲತಾಣಕ್ಕೆ ಕಡಿವಾಣ ಹಾಕದಿದ್ದರೆ ದೇಶಕ್ಕೆ ಗಂಡಾಂತರ
ಕಾಂಗ್ರೆಸ್ ಮುಖಂಡ ಬಿ.ಸೋಮಶೇಖರ್ ಆತಂಕ
ಸುದ್ದಿವಿಜಯ,ಹಿರಿಯೂರು: ರಾಜಸ್ಥಾನದ ಉದಯಪುರದ ಮಾಲ್ ದಾಸ್ ಬೀದಿ ಪ್ರದೇಶದಲ್ಲಿ ವ್ಯಕ್ತಿಯೊಬ್ಬನನ್ನು ಇಬ್ಬರು ದುಷ್ಕರ್ಮಿಗಳು ಹತ್ಯೆ ಮಾಡಿರುವುದು ಆಘಾತದ ವಿಷಯ ಎಂದು ಕಾಂಗ್ರೆಸ್ ಮುಖಂಡ ಬಿ.ಸೋಮಶೇಖರ್ ಆತಂಕ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಾಮಾಜಿಕ ಜಾಲತಾಣದಲ್ಲಿ ಧರ್ಮವೊಂದರ ವಿರುದ್ಧದ ಹೇಳಿಕೆ ಸಮರ್ಥಿಸಿದ ವ್ಯಕ್ತಿಯನ್ನು ಹಾಡಹಗಲೇ ಹತ್ಯೆ ಮಾಡಿರುವುದು ದುರಂತ ಎಂದಿದ್ದಾರೆ.
ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ನಾಯಕಿ ಹಾಗೂ ಈ ಹೇಳಿಕೆಗಳನ್ನು ಸಮರ್ಥಿಸಿಕೊಂಡ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಳ್ಳಲು ಕಾನೂನು ಇದೆ. ಆದರೆ, ಕೊಲೆಗಡುಕರು ದೇಶದ ಕಾನೂನು, ಸಂವಿಧಾನದ ಕುರಿತು ನಂಬಿಕೆ, ಗೌರವ ಇಲ್ಲದೆ, ಮೃಗೀಗಳ ರೀತಿ ವರ್ತಿಸಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿರುವುದು ಖಂಡನೀಯ ಎಂದಿದ್ದಾರೆ.
ಇಂತಹ ಕೊಲೆಗಡುಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಈ ದುರ್ಘಟನೆ ಹಿಂದೆ ಇರುವವರನ್ನು ಬಂಧಿಸಬೇಕು. ಇವರೆಲ್ಲರು ನೇಣು ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ಪೊಲೀಸರು ನ್ಯಾಯಾಲಯಕ್ಕೆ ಶೀಘ್ರ ತನಿಖಾ ವರದಿ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ಪೊಲೀಸರಿಗೆ ಸರ್ಕಾರ ಸ್ವತಂತ್ರ ನೀಡಬೇಕು ಎಂದು ಆಗ್ರಹಿಸಿದ್ದಾರೆ.ಧರ್ಮ, ಜಾತಿಗಳ ಮಧ್ಯೆ ಕಲಹ, ಹಲ್ಲೆ, ಹತ್ಯೆ, ಧಾರ್ಮಿಕ ಕೇಂದ್ರಗಳ ಮೇಕೆ ದಾಳಿ ನಡೆಸುವುದು ದೇಶದ ಏಕತೆ, ಜಾತ್ಯತೀತತೆಗೆ ಕಂಟಕ ಎಂದು ಎಚ್ಚರಿಸಿದ್ದಾರೆ.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಧರ್ಮ, ಜಾತಿಗಳ ಮಧ್ಯೆ ಕಂದಕ ಹೆಚ್ಚಾಗುತ್ತಿದೆ. ಪರಿಣಾಮ ಎಲ್ಲ ಧರ್ಮದಲ್ಲೂ ಧರ್ಮಾಂಧರ ಸಂಖ್ಯೆ ಹೆಚ್ಚಾಗುತ್ತಿದ್ದು, ತಮ್ಮ ತಮ್ಮ ಧರ್ಮ, ದೇವರ ಹೆಸರಲ್ಲಿ ಕಾನೂನನ್ನೆ ಕೈಗೆತ್ತುಕೊಂಡು, ಹಲ್ಲೆ, ಕೊಲೆ ಯತ್ನ, ಹತ್ಯೆ ಪ್ರಕರಣಗಳು ಎಲ್ಲೆಡೆ ಆಗುತ್ತಿವೆ.ಇದಕ್ಕೆ ಕಡಿವಾಣ ಹಾಕಬೇಕಾದ ಬಿಜೆಪಿ ಸರ್ಕಾರ ಬೆಂಕಿಗೆ ತುಪ್ಪು ಸುರಿಯುವ ಕೆಲಸ ಮಾಡುತ್ತಿದೆ ಎಂದು ದೂರಿದ್ದಾರೆ.
ದೇಶದ ಜ್ವಲಂತ ಸಮಸ್ಯೆಗಳನ್ನು ಮರೆಮಾಚಲು ಹಿಜಾಬ್, ಲಾಲ್ ಕಟ್ ವಿವಾದ, ಧಾರ್ಮಿಕ ಕಟ್ಟಡಗಳನ್ನು ಕೆಡುವುತ್ತೆವೆ ಎಂಬ ಧರ್ಮಾಂಧರ ಮಾತುಗಳಿಗೆ ಪ್ರೋತ್ಸಾಹವಾಗಿ ಬಿಜೆಪಿ ನಿಲ್ಲುತ್ತಿದೆ ಎಂದು ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಧರ್ಮ, ಜಾತಿಗಳ ವಿರದ್ಧ ವಿಷ ಕಕ್ಕುವವರ ಸಂಖ್ಯೆ ಹೆಚ್ಚಾಗುತ್ತಿದೆ. ರಾಜಕೀಯ ಅಧಿಕಾರಕ್ಕಾಗಿ ಧರ್ಮವೊಂದನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡುವ ಬಿಜೆಪಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ದೇಶದ ಏಕತೆ, ದೇಶಭಕ್ತಿಗೆ ಧಕ್ಕೆ ತರಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಧರ್ಮ ಜಾತಿಗಳ ವಿರುದ್ಧ ದ್ವೆಷದ ಮಾತುಗಳಿಗೆ ಕಡಿವಾಣ ಹಾಕಬೇಕು. ಸಾಮಾಜಿಕ ಜಾಲತಾಣದಲ್ಲಿ ಜಾತಿ, ಧರ್ಮಗಳನ್ನು ಅಪಹಾಸ್ಯ, ಟೀಕಿಸುವ ಪ್ರಕರಣಗಳಿಗೆ ತಡೆ ಹಾಕಲು ಕಾನೂನು ರೂಪಿಸಬೇಕು.ಅನಗತ್ಯ ವಿವಾದಗಳನ್ನು ವೈಭವಿಕರಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಸೋಮಶೇಖರ್ ಆಗ್ರಹಿಸಿದ್ದಾರೆ.
ದೇಶದಲ್ಲಿ ಕೋಮು ಗಲಭೆಗಾಗಿ ಹಾತೋರೆಯುವ ಕೆಟ್ಡ ಮನಸ್ಥಿತಿಯಿಂದ ಬಿಜೆಪಿ ಹೊರಬರಬೇಕು. ರಾಜಸ್ಥಾನದಲ್ಲಿ ನಡೆದ ಕೊಲೆಗಡುಕರ ಅಟ್ಟಾಹಾಸ ದೇಶದ ಯಾವುದೇ ಮೂಲೆಯಲ್ಲೂ ಯಾವ ಧರ್ಮ, ಜಾತಿಯವರ ಮೇಲೆ ಹಲ್ಲೆ, ಕೊಲೆ ನಡೆಯದಂತೆ ಕಠಿಣ ಕ್ರಮಕೈಗೊಳ್ಳಬೇಕು.ಇಲ್ಲದಿದ್ದರೆ ದೇಶಕ್ಕೆ ದೊಡ್ಡ ಗಂಡಾಂತರ ಎದುರುಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.