ಸುದ್ದಿವಿಜಯ,ಜಗಳೂರು: ತಾಲೂಕಿನ ಅಣಬೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕವಿತಾ ರೇಣುಕೇಶ್ ಅವರಿಗೆ ಇಲ್ಲಿನ ಆದಿ ಜಾಂಬವ ವಿದ್ಯಾರ್ಥಿ ನಿಲಯದಲ್ಲಿ ಶುಕ್ರವಾರ ಮಾದಿಗ ಸಮಾಜದಿಂದ ಸನ್ಮಾನಿಸಲಾಯಿತು.
ಹಿರಿಯ ಮುಖಂಡ ಜಿ.ಎಚ್ ಶಂಭುಲಿಂಗಪ್ಪ ಮಾತನಾಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಸರ್ಕಾರ ತುಂಬ ಅಧಿಕಾರ ಕೊಟ್ಟಿದೆ. ಆಡಳಿತವಾಧಿಯಲ್ಲಿ ಯಾವುದೇ ಹಣವನ್ನು ದುರುಪಯೋಪಡಿಸಿಕೊಳ್ಳಬಾರದು, ಅನವಶ್ಯಕವಾಗಿ ಚೆಕ್‌ಗಳಿಗೆ ಯೋಚಿಸಿ ಸಹಿ ಮಾಡಬೇಕು ಎಂದರು.
ಆದಿ ಜಾಂಬವ ವಿದ್ಯಾರ್ಥಿ ನಿಲಯದ ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ, ಶತಮಾನಗಳಿಂದಲೂ ಮಾದಿಗ ಸಮಾಜ ತುಳಿತಕ್ಕೊಳಪಟ್ಟಿದೆ. ಡಾ.ಬಿ. ಆರ್ ಅಂಬೇಡ್ಕರ್ ಶೋಷಣೆಯ ನಡುವೆಯೂ ಉನ್ನತ ಶಿಕ್ಷಣ ಪಡೆದು ದೇಶಕ್ಕ ಭಾರತ ಸಂವಿಧಾನ ಬರೆದುಕೊಟ್ಟ ಮಹಾನ್ ನಾಯಕರ ದಾರಿಯಲ್ಲಿ ನಡೆಯಬೇಕು, ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಅನ್ಯಾಯದ ವಿರುದ್ಧ ಹೋರಾಟ ನಡೆಸುವಂತಹ ಮನೋಭಾವ ಬೆಳೆಸಬೇಕು ಎಂದರು.
ನಿವೃತ್ತ ಅಧಿಕಾರಿ ಸತ್ಯಪ್ಪ ಮಾತನಾಡಿ, ಆಯ್ಕಯಾದ ಅಧ್ಯಕ್ಷರು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಹಳ್ಳಿಗಳಿಗೂ ಹೋಗಿ ಮೊದಲ ಆದ್ಯತೆ ಮಕ್ಕಳಿಗೆ ಶಿಕ್ಷಣಕ್ಕೆ ಕೊಡಬೇಕು,ನೈರ್ಮಲ್ಯ ಹಾಗೂ ಕುಡಿಯುವ ನೀರಿಗೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಕೃಷ್ಣಮೂರ್ತಿ, ನಿವೃತ್ತ ಅಧಿಕಾರಿ ಪಾಪಯ್ಯ, ಮುಖಂಡರಾದ ಹಟ್ಟಿ ತಿಪ್ಪೇಸ್ವಾಮಿ, ಗ್ಯಾಸ್ ಓಬಣ್ಣ, ವೆಂಕಟೇಶ್, ಮಂಜುನಾಥ್, ರಾಜಶೇಖರ್, ಸತೀಶ್ ಮಾಚಿಕೆರೆ, ಕೆಂಚಮ್ಮ, ರೇಣುಕೇಶ್ ರಾಜನಹಟ್ಟಿ ಚಂದ್ರಪ್ಪ ಸೇರಿದಂತೆ ಮತ್ತಿತರಿದ್ದರು