Suddivijaya/kannadanews/27/4/2023
ಸುದ್ದಿವಿಜಯ, ದಾವಣಗೆರೆ : ನಾವು ಬೆಳೆಯುತ್ತಿದ್ದೇವೆ ಅಂದ್ರೆ, ನಮ್ಮ ಬೆಳವಣಿಗೆ ನೋಡಿ ತುಳಿಯೋರೇ ಜಾಸ್ತಿ….ಇಂತಹವರ ನಡುವೆ ವೈದ್ಯರೊಬ್ಬರು ಎಲೆ ಮರೆ ಕಾಯಿಯಂತೆ ಕೆಲಸ ಮಾಡಿ ಈಗ ಹೊರ ಜಗತ್ತಿಗೆ ಪಾದಾರ್ಪಣೆ ಮಾಡಿದ್ದಾರೆ.
ಇದು…ಬೇರೆ ಯಾರೋದ್ದೋ ಕಥೆಯಿಲ್ಲ…ನಮ್ಮ ಜತೆಯೇ ಇದ್ದು, ನಮ್ಮಗಳ ಕಷ್ಟ, ಕಾರ್ಪಣ್ಯ ಕೇಳುವ ಜತೆ ರೋಗಿಗಳಿಗೆ ದೇವರಾಗಿ ಕೆಲಸ ಮಾಡುತ್ತಿರುವ ವೈದ್ಯ ಡಾ.ರವಿ.
ಡಾ.ರವಿ ಮೂಲತಃ ಜಗಳೂರಿನವರಾಗಿದ್ದು, ಇಲ್ಲಿನ ಮಾಜಿ ಶಾಸಕ ಗುರುಸಿದ್ಧನಗೌಡರವರ ಹಿರಿಯ ಪುತ್ರ…ತಂದೆಯಂತೆ ಡಾ.ರವಿ ಕೂಡ ಸಮಾಜ ಸೇವಕರು..ಎಲ್ಲದಕ್ಕೂ ಹೊರತಾಗಿ ಪ್ರಾಣಿ ಪ್ರಿಯರಾಗಿದ್ದು, ಈ ಭಾಗದಲ್ಲಿನ ಕೊಂಡು ಕುರಿ ಉಳಿವಿಗೆ ಹೋರಾಡುತ್ತಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ರೋಗಿಗಳ ಪಾಲಿನ ಆರಾಧ್ಯ ದೈವ.
ಇಂತಹ ವ್ಯಕ್ತಿ ಈಗ ಇನ್ನಷ್ಟು ಸಮಾಜ ಸೇವೆ ಮಾಡಲು ಹೊರಟಿದ್ದು, ಇದೇ ಏ.28 ಕ್ಕೆ ಪ್ರೀತಿ-ಆರೈಕೆ ಫೌಂಡೇಶನ್ ಎಂಬ ಕೂಸನ್ನು ಸಮಾಜಕ್ಕಾಗಿ ಹೊರತರುತ್ತಿದ್ದಾರೆ. ಈ ಕೂಸು ಯಾವ ಜಾತಿ, ಮತ, ಪಂಥ, ಸಮುದಾಯದ ಪರ ಕೆಲಸ ಮಾಡೋದಿಲ್ಲ…ಬದಲಾಗಿ ಶೋಷಿತರ, ದಮನಿತರ, ಕಾಲ್ತುತಳಿತಕ್ಕೆ ಒಳಗಾದ ಕಷ್ಟದಲ್ಲಿರುವ ಜನರ ಸೇವೆ ಮಾಡಲಿದೆ.
ಈಗಾಗಲೇ ಸಾಕಷ್ಟು ಫೌಂಡೇಶನ್ ಇದ್ದರೂ, ಎಲ್ಲರಂತಲ್ಲ ಈ ಪ್ರೀತಿ- ಆರೈಕೆ ಫೌಂಡೇಶನ್ ಇದೊಂದು ತತ್ವ-ಸಿದ್ದಾಂತಗಳನ್ನೋಳಗೊಂಡು, ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡುತ್ತದೆ…ಸಮಾಜ ಸೇವೆಗಾಗಿ ಹುಟ್ಟಿರುವ ಪ್ರೀತಿ-ಆರೈಕೆ ಫೌಂಡೇಶನ್ ಜನರ ಸೇವೆಗೆ ಮೊದಲ ಆದ್ಯತೆ ನೀಡಿದೆ…ಜನರಿಂದ, ಜನರಿಗಾಗಿ ಜನರಿಗೋಸ್ಕರ ಇರುವ ಈ ಫೌಂಡೇಶನ್ ತನ್ನ ಕೈಲಾದಷ್ಟು ಕೆಲಸ ಮಾಡಲಿದೆ.
ಡಾ.ರವಿ ಮೊದಲಿನಿಂದಲೂ ಸಮಾಜಸೇವೆಯಿಂದ ಬಂದವರಾಗಿದ್ದು, ಇವರ ಈ ಕಾರ್ಯಕ್ಕೆ ಪತ್ನಿ ಪ್ರೀತಿ ಕೈ ಜೋಡಿಸಿದ್ದರು. ನಾನು ಕೂಡ ಜನರ ನಡುವೆ ಇರಬೇಕು, ಅವರ ಕಷ್ಟ ಕಾರ್ಪಣ್ಯ ಕೇಳಬೇಕೆಂದು ಪತ್ನಿ ಪಾಲಿಕೆ ಚುನಾವಣೆಗೆ ನಿಂತರು..ಆದರೆ ಕಡಿಮೆ ಮತದ ಅಂತರದಲ್ಲಿ ಸೋತರು..ಆದರೂ ಪತ್ನಿ ಪ್ರೀತಿ ಸುಮ್ಮನೆ ಇರೋ ಹೆಣ್ಣುಮಗಳು ಅಲ್ಲ…ಏನಾದ್ರೂ ಸಾಧನೆ ಮಾಡಬೇಕೆಂದು, ತನ್ನ ಸುತ್ತಮುತ್ತ ಇರುವವರ ಕಷ್ಟ ಕೇಳುತ್ತಿದ್ದರು.
ಗಂಡನಿಗೆ ಹೆಗಲಾಗಿ ಮಾವನಿಗೆ ಮಗಳಾಗಿ ಮನೆಗೆ ಮಹಾಲಕ್ಷ್ಮೀಯಾಗಿ ಸಮಾಜಕ್ಕೆ ದೇವತೆಯಾಗಿ ಇದ್ದರು..ಅಷ್ಟೋರೊಳಗೆ ಹುಬ್ಬಳ್ಳಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದೈವಾಧೀನರಾದರು..
ಅಲ್ಲೂ ಕೂಡ ಡಾ.ರವಿ.ಸುಮ್ಮನೆ ಇರಲಿಲ್ಲ…ತನ್ನ ಪತ್ನಿ ಕಳೆದುಕೊಂಡ ನೋವಿದ್ದರೂ, ಸ್ಥಳಕ್ಕೆ ಹೋಗಿ ರಸ್ತೆ ಕಾಮಗಾರಿ ನಡೆಯಬೇಕೆಂದು ಪಟ್ಟು ಹಿಡಿದು ಪ್ರತಿಭಟನೆ ಮಾಡಿದರು.
ನನ್ನ ಹೆಂಡತಿ ಸಾವಿನಂತೆ, ಬೇರೆಯವರ ಸಾವು ಆಗಬಾರದು ಎಂಬ ದೂರದೃಷ್ಟಿ ಡಾ.ರವಿಯರದ್ದಾಗಿತ್ತು…ಅದಕ್ಕಾಗಿ ಇಲ್ಲಿಂದ ಜನರನ್ನು ಕರೆದುಕೊಂಡು, ಸ್ಥಳೀಯರನ್ನು ಸೇರಿಸಿ ಇಡೀ ಕರುನಾಡೇ ತನ್ನತ್ತ ತಿರುಗುವಂತೆ ಪ್ರತಿಭಟಿಸಿದ್ದರು.
ಅವರ ಈ ಕಾಳಜಿಯಿಂದ ಇಂದು ಹುಬ್ಬಳ್ಳಿಯಲ್ಲಿ ಎಷ್ಟೋ ಜೀವಗಳು ಉಳಿದಿವೆ…ಇಂತಹ ಕೆಲಸ ಮಾಡೋದು ಪ್ರೀತಿ-ಆರೈಕೆ ಫೌಂಡೇಶನ್ ಉದ್ದೇಶ..
ಪತ್ನಿ ಕಳೆದುಕೊಂಡರೂ ಡಾ.ರವಿ
ಎದೆಗುಂದಲಿಲ್ಲ…ಕೊರೊನಾ ಕಾಲದಲ್ಲಿ ತನ್ನ ಜೀವ ಒತ್ತೆಯಿಟ್ಟು ರೋಗಿಗಳ ಸೇವೆ ಕೈಗೊಂಡರು..ಇವರ ಜತೆಗೆ ಡಾ.ಹಾಲಸ್ವಾಮಿ ಕೈ ಜೋಡಿಸಿದರು..ರಾಮನ ಭಂಟ ಆಂಜನೇಯ ಇದ್ದ ಹಾಗೆ…
ಡಾ.ರವಿ ಕೆಲಸ ಕಾರ್ಯಗಳಿಗೆ ಡಾ.ಹಾಲಸ್ವಾಮಿ ಬೆನ್ನಲುಬಾಗಿ ಕೊರೊನಾ ಕಾಲದಲ್ಲಿ ಸೇವೆ ಮಾಡಿದ್ರೂ, ಎಷ್ಟೋ ಅಮೂಲ್ಯ ಜೀವಗಳನ್ನು ಉಳಿಸುವ ಮೂಲಕ ಎಲ್ಲರ ಬಾಯಲ್ಲಿ ಸೈ ಎನಿಸಿಕೊಂಡ್ರು. ಈ ರೀತಿಯಲ್ಲಿ ಪ್ರೀತಿ- ಫೌಂಡೇಶನ್ ಜನರನ್ನು ತನ್ನ ಎದೆಗೂಡಿನಲ್ಲಿ ಇಟ್ಟುಕೊಂಡು ಸಂಸ್ಥೆ ಕೆಲಸ ಮಾಡುತ್ತದೆ…
ಎರಡನೇ ಹಂತದ ಕೊರೊನಾ ಕಾಲದಲ್ಲಿ ಇಡೀ ದಾವಣಗೆರೆಯಲ್ಲಿನ ಆಸ್ಪತ್ರೆ ತುಂಬಿತ್ತು…ಕಡಿಮೆ ಸಂಖ್ಯೆ ವೈದ್ಯರು…ಇತರೆ ಜಿಲ್ಲೆಗಳಿಂದ ಇಲ್ಲಿನ ಆಸ್ಪತ್ರೆಗಳಿಗೆ ರೋಗಿಗಳು ದಾಖಲಾಗಿದ್ದರು.ಈ ನಡುವೆ ಆ್ಯಕ್ಸಿಜನ್ ಕೊರತೆ, ಸಿಬ್ಬಂದಿಗಳಿಗೆ ಕೊರೊನಾ ಅಟ್ಯಾಕ್, ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಿತ್ತು.
ರೋಗಿಗಳನ್ನು ಮುಟ್ಟೋಕೆ ವೈದ್ಯರಿಗೆ ಭಯ…ಹೀಗಿದ್ದಾಗ ಎಲ್ಲ ಕಡೆ ಆ್ಯಕ್ಸಿಜನ್ ಅಭಾವ…ಆಗ ರಾಜನಂತೆ ಧಾವಿಸಿದ್ದೇ ಡಾ.ರವಿ…ಹೆಚ್ಚು ಹಣ ಕೊಟ್ಟು ಆ್ಯಕ್ಸಿಜನ್ ಸ್ಟಾಕ್ ಮಾಡಿ ಉಚಿತವಾಗಿ ನೀಡಿದ್ದು ಈ ಮಹಾನ್ ನಾಯಕ…ಆಗ ಹಣ ಮುಖ್ಯವಾಗಿರಲಿಲ್ಲ. ಜೀವ ಮುಖ್ಯವಾಗಿತ್ತು…ಭಯದ ನಡುವೆಯೂ ಜನರ ಜೀವಕ್ಕಾಗಿ ಡಾ.ರವಿ.ಹೋರಾಟ ಮಾಡಿದ್ರು..
ಇದು ಡಾ.ರವಿ ಅವರ ಸಮಾಜ ಸೇವೆಯ ಒಂದು ಸ್ಯಾಂಪಲ್ ಅಷ್ಟೇ….ಕಣ್ಣಿಗೆ ಕಾಣದಂತೆ ಮಾಡಿದ್ದು ಬಹಳಷ್ಟಿದೆ…ಅದನ್ನು ನೀವೆ ಮುಂದೆ ನೋಡ್ತೀರಾ…ಒಟ್ಟಾರೆ ಒಂಟಿಯಾಗಿರುವ ಡಾ.ರವಿ. ತನ್ನ ನೋವನ್ನು ಮರೆಯಲು ಬೆಳಗ್ಗೆಯಿಂದ ರಾತ್ರಿಯವರೆಗೂ ರೋಗಿಗಳ ಜತೆ ಕಾಲ ಕಳೆಯುತ್ತಿದ್ದಾರೆ.
ಹಾಗಾದ್ರೆ ಇಷ್ಟೇಲ್ಲ ಕತೆ ಹೇಳಿದ್ದು ಯಾಕೆ ಅಂತ ನೀವೆಲ್ಲ ಅಂದು ಕೊಂಡಿರಬಹುದು….ಇದಕ್ಕೂ ಕಾರಣವಿದೆ…..ಏ.28 ಕ್ಕೆ ಅವರ ಕನಸಿನ ಕೂಸು ಹೊರಬರುತ್ತಿದೆ..ಅದುವೇ ಪ್ರೀತಿ – ಫೌಂಡೇಶನ್…ನೀವು ಬನ್ನಿ…ನಮ್ಮ ಜತೆ ಕೈ ಜೋಡಿಸಿ…ಶಕ್ತಿ ತುಂಬಿ ಎನ್ನುತ್ತಾರೆ ಡಾ.ರವಿ.
.ಹಾಗಾದ್ರೆ ನೀವು ಅವರಿಗೆ ವಿಶ್ ಮಾಡಿ, 98455 74143, 9826915042.