ದಾವಣಗೆರೆ: ಬ್ಯಾಂಕರುಗಳ ವತಿಯಿಂದ ಸ್ವಚ್ಛತಾ ಕಾರ್ಯ

Suddivijaya
Suddivijaya October 1, 2023
Updated 2023/10/01 at 1:20 PM

ಸುದ್ದಿವಿಜಯ, ದಾವಣಗೆರೆ : ಜಿಲ್ಲೆಯ ಸಾರ್ವಜನಿಕ ಶಾಲೆ ಆವರಣ, ಆನಗೋಡಿನ ಸಾರ್ವಜನಿಕ ಸ್ಥಳ, ದಾವಣಗೆರೆಯ ಡಿಸಿಎಂ ಬಡಾವಣೆ ಪಾರ್ಕ್ , ಸಂಗೊಳ್ಳಿ ರಾಯಣ್ಣನ ವೃತ್ತದಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಹಾಗೂ ಜಿಲ್ಲಾ ಮಟ್ಟದ ಬ್ಯಾಂಕ್‍ರುಗಳ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಭಾನುವಾರ ನಡೆಯಿತು.

ಜಿಲ್ಲೆಯ ಐದು ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಒಂದು ತಾಸಿನ ಶ್ರಮದಾನದ ಮೂಲಕ ಆಚರಿಸಲಾಯಿತು. ಗಾಂಧಿ ಜಯಂತಿ ನಿಮಿತ್ತ ಕೇಂದ್ರ ಸರಕಾರವು ಹಮ್ಮಿಕೊಂಡಿದ್ದ ಸ್ವಚ್ಛತೆಯೇ ಸೇವೆ ಅಡಿಯಲ್ಲಿ ಎರಡು ಹಳ್ಳಿ ಮತ್ತು ಮೂರೂ ಪಟ್ಟಣದ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಮಾಡುವ ಮೂಲಕ ಬ್ಯಾಂಕರುಗಳು ತಮ್ಮ ಕಾಳಜಿ ಮೆರೆದರು.

ದಾವಣಗೆರೆ ಜಿಲ್ಲೆಯ ಸಾರ್ವಜನಿಕ ಶಾಲೆ ಆವರಣ, ಆನಗೋಡಿನ ಸಾರ್ವಜನಿಕ ಸ್ಥಳ, ದಾವಣಗೆರೆಯ ಡಿಸಿಎಂ ಬಡಾವಣೆ ಪಾರ್ಕ್ , ಸಂಗೊಳ್ಳಿ ರಾಯಣ್ಣನ ವೃತ್ತದಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಹಾಗೂ ಜಿಲ್ಲಾ ಮಟ್ಟದ ಬ್ಯಾಂಕ್‍ರುಗಳ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಭಾನುವಾರ ನಡೆಯಿತು.
ದಾವಣಗೆರೆ ಜಿಲ್ಲೆಯ ಸಾರ್ವಜನಿಕ ಶಾಲೆ ಆವರಣ, ಆನಗೋಡಿನ ಸಾರ್ವಜನಿಕ ಸ್ಥಳ, ದಾವಣಗೆರೆಯ ಡಿಸಿಎಂ ಬಡಾವಣೆ ಪಾರ್ಕ್ , ಸಂಗೊಳ್ಳಿ ರಾಯಣ್ಣನ ವೃತ್ತದಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಹಾಗೂ ಜಿಲ್ಲಾ ಮಟ್ಟದ ಬ್ಯಾಂಕ್‍ರುಗಳ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಭಾನುವಾರ ನಡೆಯಿತು.

ಬ್ಯಾಂಕರುಗಳ ಈ ಕಾರ್ಯಕ್ಕೆ, ಸಾರ್ವಜನಿಕರು, ಹಿರಿಯ ನಾಗರಿಕರು , ನಗರಸಭೆಯ ಸಿಬ್ಬಂದಿಗಳು ಸಹ ಕೈಜೋಡಿಸಿದ್ದು ವಿಶೇಷವಾಗಿತ್ತು. ಒಟ್ಟು ಐದು ತಂಡಗಳನ್ನು ರಚಿಸಿ ಮಾಯಕೊಂಡ ಸಾರ್ವಜನಿಕ ಶಾಲೆ ಆವರಣ, ಆನಗೋಡಿನ ಸಾರ್ವಜನಿಕ ಸ್ಥಳ, ದಾವಣಗೆರೆಯ ಡಿಸಿಎಂ ಬಡಾವಣೆಯ ಪಾರ್ಕ್ , ಸಂಗೊಳ್ಳಿ ರಾಯಣ್ಣನ ವೃತ್ತ , ವಿದ್ಯಾನಗರದ ಸಾರ್ವಜನಿಕ ಸ್ಥಳಗಳನ್ನು ಆಯ್ದುಕೊಂಡು ಸ್ವಚ್ಛಗೊಳಿಸಲಾಯಿತು.

ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಜಿ.ಸಿ.ಪ್ರಕಾಶ್ ಹಾಗೂ ನಬಾರ್ಡ್ ವ್ಯಸ್ಥಾಪಕ ರಶ್ಮಿ ,ರೇಖಾರ ಮಾರ್ಗದರ್ಶನದಲ್ಲಿ ಈ ಅಭಿಯಾನ ನಡೆಯಿತು. ಈ ಅಭಿಯಾನದಲ್ಲಿ ಜಿಲ್ಲೆಯ ಪ್ರಮುಖ ಬ್ಯಾಂಕುಗಳಾದ ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕರ್ನಾಟಕ ಗ್ರಾಮೀಣ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಡಿಸಿಸಿ ಬ್ಯಾಂಕ್, ಎಚ್‍ಡಿಎಫ್‍ಸಿ ಸೇರಿದಂತೆ ಎಲ್ಲ ಬ್ಯಾಂಕುಗಳ ಸಹಕಾರದೊಂದಿಗೆ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲಾಯಿತು. ನಗರ ಸಭೆಯ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಜಗದೀಶ್ ಮತ್ತು ತಂಡದವರು ತ್ಯಾಜ್ಯ ವಿಲೇವಾರಿಗೆ ಸಹಕರಿಸಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!