ದಾಖಲೆಯಿಲ್ಲದ 39 ಲಕ್ಷ ಮೌಲ್ಯದ ಬೆಳ್ಳಿ ವಸ್ತುಗಳು ವಶ ಎಲ್ಲಿ ಗೊತ್ತಾ?

Suddivijaya
Suddivijaya April 7, 2023
Updated 2023/04/07 at 12:55 PM

ಸುದ್ದಿವಿಜಯ, ದಾವಣಗೆರೆ: ಚುನಾವಣೆ ಹತ್ತಿರವಾಗುತ್ತಿದ್ದಂತೆ ಅಕ್ರಮಗಳ ಸಂಖ್ಯೆ ಹೆಚ್ಚುತ್ತಿದೆ. ದಾವಣಗೆರೆ ಜಿಲ್ಲೆಯ ಮಾಯಕೊಂಡ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೆಬ್ಬಾಳು ಟೋಲ್ ಗೇಟ್‍ನಲ್ಲಿರುವ ಚಕ್ ಪೋಸ್ಟ್ ನಲ್ಲಿ 39 ಲಕ್ಷ ಮೌಲ್ಯದ ಬೆಳ್ಳಿ ವಸ್ತುಗಳನ್ನು ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ಕಾರಿನ ಡಿಕ್ಕಿಯಲ್ಲಿ 5 ರಟ್ಟಿನ ಬಾಕ್ಸಿನಲ್ಲಿ ಇದ್ದು ಯಾವುದೇ ದಾಖಲೆಗಳಿಲ್ಲದ 66.786 ಕೆಜಿ ತೂಕದ ಅಂದಾಜು ರೂ 3900000/- ಮೌಲ್ಯದ ಬೆಳ್ಳಿ ಆಭರಣಗಳನ್ನು ಸೀಜ್ ಮಾಡಲಾಗಿದೆ.

ಆಭರಣಗಳನ್ನು ಮುಂದಿನ ಕ್ರಮಕ್ಕಾಗಿ ದಾವಣಗೆರೆಯ ಗ್ರಾಮಾಂತರ ಪೊಲೀಸ್ ಠಾಣೆಗೆ ಒಪ್ಪಿಸಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಎಸ್‍ಎಸ್‍ಟಿ ತಂಡದಿಂದ ದೂರು ದಾಖಲಿಸಲಾಗಿದೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!