ಸುದ್ದಿವಿಜಯ, ದಾವಣಗೆರೆ: ಪತ್ನಿಯ ಭಾವಚಿತ್ರಗಳಿಗೆ ಅಶ್ಲೀಲ ಚಿತ್ರಗಳನ್ನು ಜೋಡಿಸಿ ಮಾನಹಾನಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾಯಕೊಂಡದ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರ ಪತಿ ನಿತಿನ್ ಸುಪ್ಪಲ್ ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕೆ.ಎಸ್.ಬಸವಂತಪ್ಪ ಮೀಡಿಯಾ ಎಂಬ ವ್ಯಾಟ್ಸ್ ಅಪ್ ಗ್ರೂಪ್‍ನಿಂದ ಪೊಟೊಗಳನ್ನು ಹರಿಯಬಿಟ್ಟಿದ್ದು, ಭಾವಚಿತ್ರಗಳ ನೈಜತೆಯನ್ನು ಪತ್ತೆ ಮಾಡಬೇಕು. ಹರಿಯ ಬಿಟ್ಟಿರುವ ಮೊಬೈಲ್ ಸಂಖ್ಯೆಗಳ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.
ಈ ಮೀಡಿಯಾ ಗ್ರೂಪ್ ನನ್ನದಲ್ಲ. ನನಗೆ ತೇಜೋವಧೆ ಮಾಡುವ ಉದ್ದೇಶದಿಂದ ಯಾರೋ ನನ್ನ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾರೆ. ನಮ್ಮ ಅವರ ನಡುವೆ ದ್ವೇಷ ಬೆಳೆಸಲು ಯಾರೋ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ. ದೂರು ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಕೆ.ಎಸ್. ಬಸವಂತಪ್ಪ ಸ್ಪಷ್ಟನೆ ನೀಡಿದ್ದಾರೆ.