ಸುದ್ದಿವಿಜಯ, ದಾವಣಗೆರೆ : ಕೈ-ಕೈ ಹಿಡಿದು ಒಟ್ಟಿಗೆ ಸಪ್ತಪದಿ ತುಳಿದ ಪತಿ-ಪತ್ನಿ ಒಟ್ಟೂಗೂಡಿ ಮಣ್ಣಾಗಿದ್ದುಘಿ, ನೆರೆದವರ ಅಕ್ಷಿಪಟಲದಲ್ಲಿ ಹನಿಯಾಗಿ ನೀರು ಧರೆಗೆ ಉರುಳಿದಿದೆ.
ತಾಲೂಕಿನ ಕಬ್ಬೂರು ಗ್ರಾಮದಲ್ಲಿ ಇಂತಹ ಹೃದಯ ಮಿಡಿಯುವ ಘಟನೆ ನಡೆದಿದ್ದು, ಮದುವೆ ವೇಳೆ ಒಬ್ಬರನ್ನೊಬ್ಬರು ನೋಡಿದ ಮುಖಗಳು, ಮರಣಾನಂತರ ಕಣ್ಣುಮುಚ್ಚಿ ಒಟ್ಟಾಗಿ ಸ್ವರ್ಗ ಸೇರಿವೆ. ಅದರಲ್ಲೂ ಗಂಡನ ಮರಣಾನಂತರ, ವೈಕುಂಠ ಸಮಾರಾಧನೆ ಕಾರ್ಡ್ ಮಾಡಿಸಿದ ಪತ್ನಿಯೂ ಕೂಡ ಮೃತರಾಗಿರುವುದು ಕರುಳು ಹಿಂಡುತ್ತಿದೆ.
ಕೂಲಂಬಿ ನಾಗರಾಜಪ್ಪ ಕಬ್ಬೂರು (68) ಕೂಲಂಬಿ ಶಕುಂತಲಮ್ಮ ಕಬ್ಬೂರು (65) ಮೃತ ಜೋಡಿ. ಇವರಿಬ್ಬರು ವಿವಾಹ ಜೀವನಕ್ಕೆ ಕಾಲಿಟ್ಟು 43 ವರ್ಷಗಳಾಗಿದ್ದು, ಒಬ್ಬರಿನ್ನೊಬ್ಬರು ಬಿಟ್ಟಿರಲಿಲ್ಲ. ಒಕ್ಕುಲತನದ ಮಾಡುವ ಈ ಕುಟುಂಬಕ್ಕೆ ಶಂಕುತಲಮ್ಮವೇ ಮನೆ ನಡೆಸುವುದರ ಜತೆಗೆ ಗಂಡನ ಆಗುಹೋಗುಗಳನ್ನು ನೋಡಿಕೊಳ್ಳುತ್ತಿದ್ದರು. ವಿಜಯಕುಮಾರ್, ಆಶಾ, ಬಸಮ್ಮ ಎಂಬ ಮೂವರು ಮಕ್ಕಳು ಈ ದಂಪತಿಗಿದ್ದು, ಮನೆಗೆ ಎರಡು ಕಣ್ಣಾಗಿದ್ದ ವೃದ್ಧ ಜೀವಿಗಳು ಈಗ ಪರಲೋಕಕ್ಕೆ ಸೇರಿರುವುದು ಇದ್ದವರನ್ನು ಚಿಂತಿಗೀಡು ಮಾಡಿದೆ.
ಕೂಲಂಬಿ ನಾಗರಾಜ್ ಗುರುವಾರ ರಾತ್ರಿ ಅನಾರೋಗ್ಯದಿಂದ ಮೃತವಾಗುತ್ತಾರೆ, ನಂತರ ಪತ್ನಿ ಶಂಕುತಲಮ್ಮ ಪತಿ ನಾಗರಾಜ್ ವೈಕುಂಠ ಸಮಾರಾಧನೆ ಮಾಡಲು ಕಾರ್ಡ್ ಮಾಡಿಸಿದ್ದಾರೆ. ಇದಾದ ಬಳಿಕ ಪತಿ ನೋವಿನಲ್ಲಿದ್ದ ಶಕುಂತಮ್ಮ ಶುಕ್ರವಾರ ಬೆಳಗ್ಗೆ ಮೃತರಾಗುತ್ತಾರೆ. ಇವೆರಡು ಘಟನೆಗಳನ್ನು ನೋಡಿದ ಕುಟುಂಬ, ಈಗ ಕಣ್ಣೀರಿನಲ್ಲಿ ಕೈ ತೊಳೆಯಬೇಕಾಗಿದೆ.
ಮೇ.26ಕ್ಕಿತ್ತು ಪತಿ ಕೈಲಾಸ ಸಮಾರಾಧಾನೆ :
ಮೃತ ಶಕುಂತಲಮ್ಮ ತನ್ನ ಪತಿ ಆತ್ಮಕ್ಕೆ ಶಾಂತಿ ಸಿಗಬೇಕೆಂದು ಮೇ.26ಕ್ಕೆ ಕೈಲಾಸ ಸಮಾರಾಧನೆ ಇಟ್ಟುಕೊಂಡಿದ್ದರು. ಅದನ್ನು ಸಂಬಂಧಿಗಳ ಮೂಲಕ ಎಲ್ಲರಿಗೂ ಹಂಚಿದ್ದರು. ಸಂಬಂಧಿಕರು ಸಹ ಮೇ.26ಕ್ಕೆ ಸ್ವಗೃಹ ಕಬ್ಬೂರಿಗೆ ಕೈಲಾಸ ಸಮಾರಾಧನೆಗೆ ಬರಲು ಸಜ್ಜಾಗಿದ್ದರು. ಅಷ್ಟೊರೊಳಗೆ ಪತ್ನಿ ಶಕುಂತಲಮ್ಮರಿಗೆ ಅನಾರೋಗ್ಯ ಸಂಭವಿಸಿ ದೈವಾದೀನರಾದರು.
ದುಃಖದ ಕಟ್ಟೆ ಒಡೆಯಿತು :
ದಾವಣಗೆರೆ ತಾಲೂಕಿನ ನಾಗರಾಜಪ್ಪರ ಊರು ಕಬ್ಬೂರಾಗಿದ್ದು, ಪತ್ನಿ ಶಕುಂತಲ ಇದೇ ತಾಲೂಕಿನ ಹುಣಸೇಕಟ್ಟೆ ಗ್ರಾಮದವರಾಗಿದ್ದು, ಮೃತರನ್ನು ನೋಡಲು ಈ ಎರಡು ಊರಿನಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.
ಮನೆಯಲ್ಲಿ ಇಡೀ ಕುಟುಂಬ ಶೋಕದಿಂದ ಇದ್ದರೇ, ಸಂಬಂಧಿಕರು, ಹತ್ತಿರದವರು ಇವಿರಬ್ಬರನ್ನು ನೋಡಿ ದುಃಖಿಸಿದರು. ಅಲ್ಲದೇ ಇವರಿಬ್ಬರಿಗೆ ಹಾರ ಹಾಕುವ ವೇಳೆ ಕಣ್ಣಿಂಚಿನಲ್ಲಿ ನೀರು ತಾನಾಗಿ ಉದುರಿತ್ತು. ಅದರಲ್ಲೂ ಇವರಿಬ್ಬರು ಸಾವಿನಲ್ಲಿ ಒಂದಾದರು, ಇಂತಹ ಸಾವು ಯಾರಿಗೂ ಬರೋದಿಲ್ಲ. ಸ್ವರ್ಗದಲ್ಲಿ ಇಬ್ಬರೂ ಒಂದಾಗಲಿ ಎಂದು ಮಾತನಾಡಿಕೊಂಡರು. ಈ ಎರಡು ಸಾವಿನಿಂದ ಇಡೀ ಊರು ಕೆಲ ಕಾಲ ಸ್ಥಬ್ದಗೊಂಡಿತ್ತುಘಿ. ಮೃತರನ್ನು ನೋಡಿದವರು ಶವಸಂಸ್ಕಾರದಲ್ಲಿ ಭಾಗವಹಿಸಿ ನಮಸ್ಕರಿಸಿದರು.
ಒಟ್ಟಾರೆ ಜೊತೆಗಿದ್ದ ದಂಪತಿಗಳು ಸಾವಿನಲ್ಲಿ ಒಂದಾಗಿದ್ದು, ಇವರಿಬ್ಬರ ಕೈಲಾಸ ಸಮಾರಾಧನೆಯನ್ನು ಮಕ್ಕಳು ಮಾಡಬೇಕಿರುವುದು ದುಃಖದ ಸಂಗತಿ.