ಸುದ್ದಿವಿಜಯ, ದಾವಣಗೆರೆ: ನಾಳೆ ಸೋಮವಾರ ನಗರದ ‘ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಎಜುಕೇಷನ್ ಎಕ್ಸ್ ಪೋ’ ಸಾಮಾಜಿಕ, ಮಕ್ಕಳ ಭವಿಷ್ಯದ ವೃತ್ತಿ ಬದುಕನ್ನು ಬೆಳಗುವ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕಾರ್ಯಕ್ರಮಕ್ಕೆ ಗದಗ-ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ, ಮತ್ತು ಮೈಸೂರಿನ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಆರ್.ಎ. ಆರ್.ಎ.ಚೇತನ್‍ರಾಮ್ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಸಾಮಥ್ರ್ಯ ವಿದ್ದರೂ ಮಾರ್ಗದರ್ಶನ ಹಾಗೂ ಆರ್ಥಿಕ ಸವಲತ್ತಿನ ಕೊರತೆಯಿಂದ ಅವಕಾಶ ವಂಚಿತರಾಗುತ್ತಿರುವ ಮಕ್ಕಳ ಹತಾಶೆ, ನಿರಾಸೆ, ಮನೋರೋಗ ಉಲ್ಬಣ, ಪೋಷಕರ ಬಡತನ, ಅಜ್ಞಾನ, ತಿಳುವಳಿಕೆ ಕೊರತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ದಾವಣಗೆರೆ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ದಕ್ಷಿಣ ವಲಯದ ಎಲ್ಲ ಅನುದಾನಿತ, ಅನುದಾನ ರಹಿತ, ಸರಕಾರಿ ಪ್ರೌಢಶಾಲೆಗಳ ಶಿಕ್ಷಕರ ಸಂಘ ಮತ್ತು ಮುಖ್ಯ ಶಿಕ್ಷಕರ ಸಂಘದ ಸಹೋಗದಲ್ಲಿ ಕಾರ್ಯಾಗಾರ ಆಯೋಜನೆ ಮಾಡಲಾಗಿದೆ. ಬೆಳಿಗ್ಗೆ 10.30 ರಿಂದ 5 ಗಂಟೆಯವರೆಗೆ ನಡೆಯಲಿದ್ದು ವೃತ್ತಿ ಬದುಕನ್ನು ಬೆಳಗುವ ವಿಶಿಷ್ಠ ಕಾರ್ಯಕ್ರಮ ಇದಾಗಿದೆ.
ಈ ಶೈಕ್ಷಣಿಕ ಮೇಳದಲ್ಲಿ ಎಸ್‍ಎಸ್‍ಎಲ್‍ಸಿ ನಂತರ ಮುಂದೆ ಏನು?ಹೇಗೆ? ಎಂಬಂತಹ ಲಕ್ಷಾಂತರ ಮಕ್ಕಳ, ಪೋಷಕರ ಗೊಂದಲ, ತಳಮಳಗಳಿಗೆ ನುರಿತ ತಜ್ಞರು ಮಾರ್ಗದರ್ಶನ ನೀಡಲಿದ್ದಾರೆ.
ವೃತ್ತಿ, ಉದ್ಯೋಗ, ಮಾರ್ಗದರ್ಶನದ ಕಾಯಾಗಾರದಲ್ಲಿ ಪದವಿ ಶಿಕ್ಷಣದ ಸ್ವರೂಪ, ಲಭ್ಯ ಕೋರ್ಸ್‍ಗಳ ವಿಧಗಳು, ಪಿಯುಸಿ ಹೊರತಾಗಿ ಇರುವ ವೃತ್ತಿ ಕೌಶಲ ಶಿಕ್ಷಣ- ತರಬೇತಿಗಳು, ಅವುಗಳಿಗೆ ಸಂಬಧಿಸಿದ ಶುಲ್ಕಗಳು, ಉಚಿತ ಹಾಸ್ಟೆಲ್ ಸೌಲಭ್ಯಗಳು, ಎಸ್‍ಎಸ್‍ಎಲ್‍ಸಿ ನಂತರ ತರಬೇತಿ ಪಡೆದು ಮಾಡಬಹುದಾದ ಉದ್ಯೋಗಳು, ಉದ್ಯೋಗಗಳಲ್ಲಿ ತೊಡಗಲು ಪ್ರೇರಣೆಯನ್ನು ಪಡೆಯ ಬಹುದಾಗಿದೆ.
ಈ ಎಜುಕೇಷನ್ ಎಕ್ಸ್‍ಪೋಗೆ ಜಗಳೂರು ತಾಲೂಕಿನಿಂದ ಹೊರಡುವ ಆಸಕ್ತರು ಎನ್‍ಎಂಕೆ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎನ್.ಎಂ. ಲೋಕೇಶ್ ಅವರನ್ನು ಸಂಪರ್ಕಿಸಿ- 8431373942