ಸುದ್ದಿವಿಜಯ,ದಾವಣಗೆರೆ: ಜಿಲ್ಲಾಡಳಿತದಿಂದ ಮತ ಎಣಿಕೆಗಾಗಿ ಎಲ್ಲ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.
ಮತ ಎಣಿಕೆ ನಡೆಯುವ ದಾವಣಗೆರೆ ವಿವಿಯಲ್ಲಿಂದು ಎಣಿಕೆ ಪೂರ್ವ ಸಿದ್ದತೆ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಅವರು, ದಾವಣಗೆರೆ ವಿವಿಯಲ್ಲಿ 7 ಕ್ಷೇತ್ರಗಳ ಪೈಕಿ ನಾಲೆಡ್ಜ್ ಬ್ಲಾಕ್‌ನಲ್ಲಿ 3 ಕ್ಷೇತ್ರ, ಉತ್ತರ, ಮಾಯಕೊಂಡ, ಜಗಳೂರು ಕ್ಷೇತ್ರದ ಎಣಿಕೆ, ಸೋಷಿಯಲ್ ಬ್ಲಾಕ್‌ನಲ್ಲಿ ಚನ್ನಗಿರಿ, ಹೊನ್ನಾಳಿ ಸೈನ್ಲ್ ಬ್ಲಾಕ್‌ನಲ್ಲಿ ದಕ್ಷಿಣ, ಹರಿಹರ ಕ್ಷೇತ್ರದ ಎಣಿಕೆ ನಡೆಯಲಿದೆ ಎಂದರು.
ಪ್ರತಿ ಕೊಠಡಿಯಲ್ಲಿ 14 ಟೇಬಲ್, ಅಷ್ಟೇ ಸೂಪರ್ ವೈಸರ್, ಅಸಿಸ್ಟೆಂಟ್, ಮೈಕ್ರೋ ಅಬ್ಸವರ‍್ಸ್, ಪಿಬಿ ಮತ ಎಣಿಕೆ ಪ್ರತ್ಯೇಕಾ ಚನ್ನಗಿರಿ, ಹೊನ್ನಾಳಿ, ದಕ್ಷಿಣ, ಹರಿಹರದಲ್ಲಿ ಅಂಚೆ ಮತಗಳ ಎಣಿಕೆಗಾಗಿ ಪ್ರತ್ಯೇಕ ಟೇಬಲ್, ಸರ್ವೀಸ್ ಓರ‍್ಸ್ (ಇಟಿಬಿಬಿಎಸ್) ಮತ ಎಣಿಕೆಗೆ ಪ್ರತ್ಯೇಕ ಟೇಬಲ್ ಅಳವಡಿಸಲಾಗಿದೆ.
ಕಳೆದ 10ರ ರಾತ್ರಿಯಿಂದಲೇ ಭದ್ರತೆಯನ್ನು ಮಾಡಲಾಗಿದೆ. ಕೇಂದ್ರ ಸಶಸ್ತ್ರ ಮೀಸಲು ಪಡೆ, 24×7 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ನಾಗರೀಕ ಪೊಲೀಸ್ ಪಡೆ, ಸಶಸ್ತ್ರ ಮೀಸಲು ಪಡೆ ಕಣ್ಗಾವಲು ಇದೆ ಎಂದರು.
ನಮ್ಮೆಲ್ಲಾ ಸಿಬ್ಬಂದಿ 650 ಸಿಬ್ಬಂದಿಗೆ ಗುರುತಿನ ಚೀಟಿ ನೀಡಲಾಗಿದೆ. ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ, ಅಭ್ಯರ್ಥಿ, ಏಜೆಂಟರಿಗೆ ತಿಂಡಿ ವ್ಯವಸ್ಥೆ ಮಾಡಲಾಗಿದೆ.
ಬೆಳಿಗ್ಗೆ 8ಕ್ಕೆ ಪೋಸ್ಟಲ್ ಬ್ಯಾಲೆಟ್ ಎಣಿಕೆ ಆರಂಭ, 8.30ಕ್ಕೆ ಇವಿಎಂ ಬ್ಯಾಲೆಟ್ ಮತ ಎಣಿಕೆ ಶುರುವಾಗಲಿದೆ. 9360 ಅಂಚೆ ಮತ ತಲುಪಿವೆ.
ಪಿಬಡ್ಲ್ಯುಡಿ, ಹಿರಿಯ ನಾಗರೀಕರು, ಅಸೆನ್ಷಿಯಲ್ ಸರ್ವೀಸ್, ಹೊರ ಜಿಲ್ಲೆಯಲಿ ಕೆಲಸ ಮಾಡುವವರು ಹೀಗೆ ಎಲ್ಲರನ್ನೂ ಸೇರಿ, 9,360 ನಿನ್ನೆವರೆಗೆ ಅಂಚೆ ಮತ ಬಂದಿವೆ ಎಂದರು.
ಜಗಳೂರು 19 ಸುತ್ತು ಹರಿಹರ 17, ಉತ್ತರ 18,ದಕ್ಷಿಣ 16, ಮಾಯಕೊಂಡ 18,ಚನ್ನಗಿರಿ 19,ಹೊನ್ನಾಳಿ ಕ್ಷೇತ್ರದ ಮತಗಳು 18 ಸುತ್ತಿನಲ್ಲಿ ನಡೆಯಲಿವೆ. ಹಿಂದಿನ ಮತಗಳ ಎಣಿಕೆಯಂತೆ ಮಧ್ಯಾಹ್ನ 1.30ರವರೆಗೆ ಎಣಿಕೆ ನಡೆಯಲಿದೆ.
ನಂತರ ವೋರ್ಸ್ ಸ್ಲಿಪ್ ನೋಡಬೇಕು. ಹೊನ್ನಾಳಿ ಮತ್ತು ಉತ್ತರದಲ್ಲಿ ಅಂಚೆ ಮತ ಹೆಚ್ಚಾಗಿದ್ದು, ಹಾಗಾಗಿ ಪೂರ್ಣ ಫಲಿತಾಂಶ ಮಧ್ಯಾಹ್ನ 3 ಅಥವಾ 4ರ ವೇಳೆಗೆ ಘೋಷಣೆಯಾಗುವ ಸಾಧ್ಯತೆ ಇದೆ ಎಂದರು.
ಎಸ್ಪಿ ಡಾ.ಅರುಣ್ ಮಾತನಾಡಿ, ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. ಕೌಟಿಂಗ್ ಸೆಂಟರ್‌ನಲ್ಲಿ ಅಭ್ಯರ್ಥಿ, ಏಜೆಂಟರ್, ಮೀಡಿಯಾ ಹೀಗೆ ಎಲ್ಲರಿಗೂ ಪ್ರತ್ಯೇಕ ವ್ಯವಸ್ಥೆ ಇದೆ.
ಬಂದೋಬಸ್ತ್ ಗಾಗಿ ಕೆಎಸ್‌ಆರ್‌ಪಿ, ಸಿವಿಲ್ ಪೊಲೀಸ್ ಸಿಬ್ಬಂದಿ ಗಸ್ತು ವ್ಯವಸ್ಥೆ ಮಾಡಲಾಗಿದೆ. 144ನೇ ಸೆಕ್ಷನ್ ಈಗಾಗಲೇ ಜಾರಿಯಲ್ಲಿದ್ದು,
ಯಾವುದೇ ಮೆರವಣಿಗೆ, ಪ್ರತಿಭಟನೆಗೆ ಅವಕಾಶವಿಲ್ಲ. ಸುಮಾರು 300 ಜನ ಪೊಲೀಸ್ ಸಿಬ್ಬಂದಿಗಳನ್ನು ಎಣಿಕೆ ಕೇಂದ್ರಗಳ ಸುತ್ತ ನಿಯೋಜಿಸಲಾಗಿದೆ.
ಮತ ಎಣಿಕೆ ಕೇಂದ್ರಕ್ಕೆ ಬರುವ ಸಿಬ್ಬಂದಿ, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಬೇರೆ ವ್ಯವಸ್ಥೆ ಇದೆ. ಹೊರಗೆ ಮೈಕ್ ಅರೆಂಜ್ ಮಾಡಿದ್ದು, ಸ್ಪೀಕರ್ ಮೂಲಕ ಫಲತಾಂಶ ಕೇಳಬಹುದು ಎಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ಪಿ ಬಸರಗಿ, ಡಿವೈಎಸ್‌ಪಿ ಕನ್ನಿಕಾ ಸಕ್ರಿವಾಲ್ ಇತರರು ಉಪಸ್ಥಿತರಿದ್ದರು.