ಸುದ್ದಿವಿಜಯ,ದಾವಣಗೆರೆ: ಹಿಂದೂ ಧರ್ಮದಲ್ಲಿ ಗಂಗಾಜಲಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದ್ದು, ಗಂಗಾಜಲವನ್ನು ಅತ್ಯಂತ ಪವಿತ್ರ ಮತ್ತು ಪೂಜ್ಯವೆಂದು ಪರಿಗಣಿಸಲಾಗಿದೆ.
ಆದ್ದರಿಂದ, ಹಿಂದೂ ಧರ್ಮದ ಪ್ರತಿಯೊಂದು ಶುಭ ಕಾರ್ಯ, ಪೂಜೆ, ಯಾಗ, ಹವನ, ಮರಣ ಮತ್ತು ಮೋಕ್ಷ, ಕೊನೆಯ ಕ್ಷಣದಲ್ಲಿ ಗಂಗಾಜಲವನ್ನು ನೀಡಲಾಗುತ್ತದೆ.
ಗಂಗಾಜಲವನ್ನು ಗಂಗಾ ನದಿಯ ನೀರು ಎಂದು ಕರೆಯಲಾಗುತ್ತದೆ ಮತ್ತು ಈ ನೀರು ಶುದ್ಧ ಮತ್ತು ರೋಗಾಣು ಮುಕ್ತವಾಗಿರುತ್ತದೆ.
ಗಂಗಾಜಲವು ಪವಿತ್ರವಾದ ಜಲವಾಗಿದೆ, ಆದ್ದರಿಂದ ಇದನ್ನು ಹೆಚ್ಚಿನ ಮನೆಗಳಲ್ಲಿ ಇಡಲಾಗುತ್ತದೆ ಆದರೆ ಕೆಲವೊಮ್ಮೆ ಈ ನೀರು ಮನೆಯಲ್ಲಿ ಲಭ್ಯವಿರುವುದಿಲ್ಲ.
ಇನ್ಮುಂದೆ ಆ ಚಿಂತೆ ಇರೋದಿಲ್ಲ, ಹಾಗಾದ್ರೆ ಗಂಗಾ ಜಲ ನೀರು ಎಲ್ಲಿ ಸಿಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.ಹಾಗಾದ್ರೆ ಅದು ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ…
ಅಂಚೆ ಕಚೇರಿಗಳಲ್ಲಿ ಗಂಗಾಜಲ ಮಾರಾಟ ಮಾಡಲಾಗುತ್ತಿದ್ದು, ಜನರು ಪೋಸ್ಟ್ ಆಫೀಸ್ಗೆ ಬಂದು ಗಂಗಾ ಜಾಲ ಪಡೆಯಬಹುದಾಗಿದೆ ಎಂದು ಅಂಚೆ ಅಧೀಕ್ಷಕ ಚಂದ್ರಶೇಖರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಪವಿತ್ರ ನದಿ ಗಂಗಾ ಜಲವನ್ನು ಅಂಚೆ ಕಚೇರಿಗಳ ಮೂಲಕ ಮಾರಾಟ ಮಾಡಲು ಸರ್ಕಾರ ಅನುಮತಿ ನೀಡಿದ್ದು, ಉತ್ತರ ಪ್ರದೇಶದಲ್ಲಿ ಪ್ಯಾಕಿಂಗ್ ಆಗುವ ಈ ಜಲವನ್ನು ಎಲ್ಲ ಅಂಚೆ ಕಚೇರಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದರು.
ಪ್ರತಿ ಬಾಟಲಿ ಗಂಗಾ ಜಲಕ್ಕೆ 30. ರೂ ದರ ನಿಗದಿಪಡಿಸಲಾಗಿದ್ದು ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಈ ಜಲ ದೊರೆಯಲಿದೆ.
ಎಷ್ಟೇ ಬೇಡಿಕೆ ಬಂದರೂ ಪೂರೈಕೆ ಮಾಡಲಾಗುವುದು ಎಂದು ಚಂದ್ರಶೇಖರ್ ತಿಳಿಸಿದರು.
ಗಂಗಾ ಸ್ನಾನ, ತುಂಗಾ ಪಾನ ಎಂಬ ಮಾತಿನಂತೆ ಧಾರ್ಮಿಕ ಕಾರ್ಯಕ್ರಮಗಳಿಗೆ ಗಂಗಾ ನದಿಯ ನೀರನ್ನು ಬಳಸುವ ಸಂತೃಪ್ತ ಭಾವನೆ ಜನರಿಗೆ ಬರುತ್ತದೆ.ಮೂವತ್ತು ರೂಪಾಯಿಗೆ ಅರ್ಧ ಲೀಟರ್ ಗಂಗಾ ನೀರು ಲಭಿಸಲಿದೆ ಎಂದು ಹೇಳಿದರು.