ಭೌತಿಕ ಚಿನ್ನ ಕಡಿಮೆ ಮಾಡಲು ಸಾರ್ವಭೌಮ ಚಿನ್ನದ ಬಾಂಡ್, ಕೇಂದ್ರ ಸರಕಾರದಿಂದ ಈಗ ಸುವರ್ಣ ಅವಕಾಶ!

Suddivijaya
Suddivijaya June 20, 2023
Updated 2023/06/20 at 2:46 PM

ಸುದ್ದಿವಿಜಯ, ದಾವಣಗೆರೆ : ಚಿನ್ನ ಖರೀದಿ ಮಾಡೋರಿಗೆ ಕೇಂದ್ರ ಸರಕಾರ ಈಗ ಸುವರ್ಣ ಅವಕಾಶವಿದ್ದು, ಚಿನ್ನದಷ್ಟೇ ಬೆಲೆ ಬಾಳುವ ಬಾಂಡ್‍ನ್ನು ನೀಡಲು ಮುಂದಾಗಿದೆ. ಇದರಿಂದ ಕಡಿಮೆ ಹಣಕ್ಕೆ ಚಿನ್ನ ಸಿಗಲಿದೆ.
ಕಳ್ಳಕಾರರು, ಸೇರಿದಂತೆ ಇತರರ ಕಡೆಯಿಂದ ಸುರಕ್ಷಿತ ರೀತಿಯಲ್ಲಿ ಹಣ ಹೂಡಿಕೆ ಮಾಡಲು ಈ ಯೋಜನೆ ಸಹಕಾರಿಯಾಗಿದ್ದು, ಸಾರ್ವಭೌಮ ಚಿನ್ನದ ಬಾಂಡ್ ಯೋಜನೆ
ಉತ್ತಮ ಆಯ್ಕೆಯಾಗಿದೆ. ಚಿನ್ನದ ನಗದೀಕರಣಕ್ಕಾಗಿ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಚಿನ್ನದ ಖರೀದಿಗೆ ಬದಲಿ ಸೌಲಭ್ಯ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದ್ದು, ದಾವಣಗೆರೆ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ಜೂ.19ರಿಂದ ಜೂ.23ರವರೆಗೆ ನಡೆಯಲಿದೆ.

ಆರ್‍ಬಿಐ ಕೇಂದ್ರ ಸರಕಾರದ ಪರವಾಗಿ ಗೋಲ್ಡ್ ಬಾಂಡ್‍ಗಳನ್ನು ವಿತರಿಸುತ್ತದೆ. ಭೌತಿಕವಾಗಿ ಚಿನ್ನದ ಬೇಡಿಕೆ ಕಡಿಮೆ ಮಾಡಲು ಕೇಂದ್ರ ಸರಕಾರ ಈ ಯೋಜನೆ ಜಾರಿಗೆ ತಂದಿದೆ.
ಇದರಿಂದಾಗಿ ಭಾರತದಲ್ಲಿ ಚಿನ್ನದ ಆಮದುಗಳ ಮೇಲೆ ನಿಯಂತ್ರಣ ತರಬಹುದು ಎಂಬುದು ಕೇಂದ್ರ ಉದ್ದೇಶ.

ಈ ಬಾಂಡ್‍ಗಳು ಭೌತಿಕ ಚಿನ್ನದಷ್ಟೇ ಪ್ರಯೋಜನ ನೀಡುತ್ತದೆ. ಗೋಲ್ಡ್ ಬಾಂಡ್ ಮೌಲ್ಯವು ಚಿನ್ನದ ದರಕ್ಕೆ ಅನುಗುಣವಾಗಿ ಹೆಚ್ಚಾಗುತ್ತದೆ. ಹೂಡಿಕೆದಾರರು ಈ ಬಾಂಡ್‍ಗಳನ್ನು ನಗದು ರೂಪದಲ್ಲಿ ಪಡೆದುಕೊಳ್ಳಬಹುದು.

ಈ ಯೋಜನೆಯಡಿ ಒಬ್ಬ ವ್ಯಕ್ತಿ ಒಂದು ವರ್ಷದಲ್ಲಿ ಕನಿಷ್ಠ 1 ಗ್ರಾಂ. ನಿಂದ 4 ಕೆಜಿಯವರೆಗೆ ಚಿನ್ನವನ್ನು ಹೂಡಿಕೆ ಮಾಡಬಹುದು. ಗೋಲ್ಡ್ ಬಾಂಡ್ ಯೋಜನೆಯು ಡಿಮ್ಯಾಟ್ ಮತ್ತು ಪೇಪರ್ ರೂಪದಲ್ಲಿ ಲಭ್ಯವಿದೆ. ಬಾಂಡ್‍ಗಳನ್ನು ಸ್ಟಾಕ್ ಎಕ್ಸ್‍ಚೇಂಜ್ ಮೂಲಕವೂ ವ್ಯಾಪಾರ ಮಾಡಬಹುದು.

ಇದರಲ್ಲಿ ಪ್ರತಿ ಬಾಂಡ್ ಒಂದು ಗ್ರಾಂ ಚಿನ್ನಕ್ಕೆ ಸಮಾನವಾದ ಮೌಲ್ಯವನ್ನು ಪ್ರತಿನಿಧಿಸುತ್ತದೆ. ಭೌತಿಕ ಚಿನ್ನದ ಬದಲು ಈ ಚಿನ್ನದ ಬಾಂಡ್ ಮೇಲೆ ಹಣ ಹೂಡಿಕೆ ಮಾಡಿದರೆ ಮುಂದಿನ ದಿನಗಳಲ್ಲಿ ಅಂದಿನ ದರದಷ್ಟೇ ಚಿನ್ನದ ವೌಲ್ಯದ ಹಣವನ್ನು ಕೇಂದ್ರ ನೀಡುತ್ತದೆ. ಈ ಗೋಲ್ಡ್ ಬಾಂಡ್ ಯೋಜನೆಯಡಿ ನಿಮ್ಮ ಹೂಡಿಕೆಯ ಮೊತ್ತಕ್ಕೆ ವಾರ್ಷಿಕ ಶೇ.2.5 ಬಡ್ಡಿ ನೀಡಲಾಗುತ್ತದೆ. ಬಡ್ಡಿಯನ್ನು 6 ತಿಂಗಳಿಗೆ ಒಮ್ಮೆ ಪಾವತಿಸಲಾಗುತ್ತದೆ.

ಮುಕ್ತಾಯ ಅವಧಿ 8 ವರ್ಷಗಳಾಗಿದೆ. ಆದರೆ 5 ವರ್ಷಗಳ ನಂತರ ಮುಂದಿನ ಬಡ್ಡಿ ಪಾವತಿ ದಿನಾಂಕದಂದು ನೀವು ಈ ಯೋಜನೆಯಿಂದ ನಿರ್ಗಮಿಸಬಹುದು. ಸಾವರಿನ್ ಗೋಲ್ಡ್ ಬಾಂಡ್‍ನಲ್ಲಿ ಹೂಡಿಕೆದಾರರು ಕನಿಷ್ಠ 1 ಗ್ರಾಂ ಚಿನ್ನವನ್ನು ಹೂಡಿಕೆ ಮಾಡಬೇಕಾಗುತ್ತದೆ.

ಆಸಕ್ತದಾರರು ಹೂಡಿಕೆ ಮಾಡಲು ಬಯಸಿದರೆ ಡಿಜಿಟಲ್ ಚಂದಾದಾರಿಕೆಯ ಮೇಲೆ ರಿಸರ್ವ್ ಬ್ಯಾಂಕ್ ಪ್ರತಿ ಗ್ರಾಂಗೆ 50 ರೂ.ಗಳ ರಿಯಾಯಿತಿಯನ್ನು ನೀಡುತ್ತಿದೆ. ಇಲ್ಲಿ ಪ್ರತಿ ಗ್ರಾಂಗೆ 5926 ರೂ. ದರದಲ್ಲಿ ಆನ್‍ಲೈನ್‍ನಲ್ಲಿ ಚಿನ್ನವನ್ನು ಖರೀದಿಸಬಹುದು.

ವೈಯಕ್ತಿಕವಾಗಿ ಅಥವಾ ಹಿಂದು ಅವಿಭಕ್ತ ಕುಟುಂಬಗಳು ವಾರ್ಷಿಕ ಗರಿಷ್ಠ 4 ಕೆಜಿ ಮೌಲ್ಯದ ಗೋಲ್ಡ್ ಬಾಂಡ್ ಖರೀದಿಸಬಹುದು. ಇನ್ನು ಟ್ರಸ್ಟ್‍ಗಳು, ಇದಕ್ಕೆ ಸರಿಸಮಾನವಾದ ಸಂಸ್ಥೆಗಳು ಒಂದು ವಿತ್ತೀಯ ವರ್ಷದಲ್ಲಿ ಗರಿಷ್ಠ 20 ಕೆಜಿ ಮೌಲ್ಯದ ಎಸ್ಜಿಬಿ ಖರೀದಿಸಬಹುದು. ಒಬ್ಬ ವ್ಯಕ್ತಿ ಕನಿಷ್ಠ 1 ಬಾಂಡ್ ಕೊಳ್ಳಬೇಕು.

ಇದು 8 ವರ್ಷದ ಆನಂತರ ಕೈಗೆ ಸಿಗುತ್ತದೆ. ಬಯಸಿದರೆ ಈ ಯೋಜನೆಯನ್ನು 5 ವರ್ಷಕ್ಕೇ ಮುಗಿಸಿಕೊಳ್ಳಬಹುದು. ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಚಿನ್ನದ ಬಾಂಡ್‍ಗಳ ಘಟಕಗಳನ್ನು ಖರೀದಿಸಿ ಮತ್ತು ಅದರ ಮೌಲ್ಯಕ್ಕೆ ಸಮನಾದ ಮೊತ್ತವನ್ನು ನಿಮ್ಮ ಡಿಮ್ಯಾಟ್ ಖಾತೆಗೆ ಲಿಂಕ್ ಮಾಡಲಾದ ಖಾತೆಯಿಂದ ಕಡಿತಗೊಳಿಸಲಾಗುತ್ತದೆ.

ದಾವಣಗೆರೆ ಎಲ್ಲ ಅಂಚೆ ಕಚೇರಿ, ವಲಯ ಕಚೇರಿಗಳಲ್ಲಿ ಇದರ ಪ್ರಯೋಜನ ಪಡೆಯಬಹುದು. ವ್ಯಕ್ತಿಗತವಾಗಿ, ಟ್ರಸ್ಟ್‍ಗಳು, ಸಾಮಾಜಿಕ ಸಂಘಟನೆಗಳು, ಅವಿಭಕ್ತ ಹಿಂದು ಕುಟುಂಬಗಳು, ವಿಶ್ವವಿದ್ಯಾಲಯಗಳಿಗೆ ಕೊಳ್ಳುವ ಅವಕಾಶವಿದೆ.

ಭಾರತೀಯ ಷೇರುಪೇಟೆ ಹಾಗೂ ಶುದ್ಧ ಚಿನ್ನದ ಆಭರಣ ವರ್ತಕರು (ಜುವೆಲರ್ಸ್ ಅಸೋಸಿಯೇಶನ್ ಲಿಮಿಟೆಡ್) ನಿಗದಿಪಡಿಸಿದ ಬೆಲೆಯ ಪ್ರಕಾರ ಬಾಂಡ್‍ಳನ್ನು ವಿತರಿಸಲಾಗುವುದು. ಚಿನಿವಾರ ಪೇಟೆ ಕಾರ್ಯಾಚರಣೆ ಮಾಡುತ್ತಿರುವ (ರಜಾದಿನಗಳನ್ನು ಬಿಟ್ಟು) ಕೊನೆಯ ಮೂರು ದಿನಗಳ ಸರಾಸರಿ ಬೆಲೆಯನ್ನು ನಿಗದಿ ಮಾಡಲಾಗುವುದು.

ಇನ್ನು ಚಿನ್ನದ ಬಾಂಡ್‍ಗೆ ಹೂಡಿಕೆ ಮಾಡಿರುವ ಹಣಕ್ಕೆ ವಾರ್ಷಿಕ ಶೇ.2.5ರಷ್ಟು ಬಡ್ಡಿ ದರ ನೀಡಲಾಗುತ್ತದೆ. ಚಿನ್ನದ ಬಾಂಡ್ ಕೊಳ್ಳಲು ಆಸಕ್ತಿ ಇರುವರು ಪಾನ್ ಕಾರ್ಡ್, ವಿಳಾಸ ದಾಖಲೆ, ಪಾಸ್‍ಬುಕ್ ಮೊದಲ ಪುಟದ ಪ್ರತಿ ತೆಗೆದುಕೊಂಡು ಅಂಚೆ ಕಚೇರಿಗೆ ಸಲ್ಲಿಸಬೇಕು.

Share this Article
Leave a comment

Leave a Reply

Your email address will not be published. Required fields are marked *

error: Content is protected !!