ಸುದ್ದಿವಿಜಯ, ದಾವಣಗೆರೆ: ತಾಲೂಕಿನ ಹೆಮ್ಮನಬೇತೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ನಿ.ಸಂಘದ ಅಧ್ಯಕ್ಷರಾಗಿ ಎ.ಬಿ.ನಾಗರಾಜಪ್ಪ, ಉಪಾಧ್ಯಕ್ಷರಾಗಿ ಜೆ.ಎಸ್. ನಾಗೇಂದ್ರ ಪ್ರಸಾದ್ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಸುರೇಂದ್ರ ಶುಕ್ರವಾರ ಘೊಷಣೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ನಿ. ಸಂಘದ ಸದಸ್ಯರ ಸಹಕಾರದಿಂದ ನಾನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಕ್ಕೆ ನಾನು ಅಭಾರಿ.
ಎಲ್ಲಾ ಸದಸ್ಯರುಗಳ ಸಹಕಾರ, ಸಿಇಓ ಸಹಕಾರದೊಂದಿಗೆ ರೈತರಿಗೆ ಸಿಗಬೇಕಾದ ಸೌಲಭ್ಯಗಳು ಪ್ರಮಾಣಿಕವಾಗಿ ನೀಡುವ ಕೆಲಸ ಮಾಡುತ್ತೇನೆ ಎಂದರು.ಹೆಮ್ಮನಬೇತೂರು, ಕಿತ್ತೂರು ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರುಗಳು, ಸದಸ್ಯರುಗಳು ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ನಿ. ಸಂಘದ ಸಿಇಓ ಕರಿಬಸಪ್ಪ, ಉಪಾಧ್ಯಕ್ಷ ನಾಗೇಂದ್ರ ಪ್ರಸಾದ್, ಸದಸ್ಯರಾದ ಎಸ್.ರುದ್ರೇಶ್, ಎಸ್.ಎನ್.ಕಲ್ಲೇಶ್, ಬಿ.ಎಸ್.ರೇವಣಸಿದ್ದಯ್ಯ, ಜಿ.ಆರ್.ಸಿದ್ದೇಶ್, ಅಂಜಿನಪ್ಪ, ಬಿ.ಎಂ.ಚಂದ್ರಶೇಖರಯ್ಯ,
ಗಿರಿಜಮ್ಮ, ಆರ್.ಕೆ.ಗಾಯಿತ್ರಿ, ವೈ.ಆರ್.ಅಣ್ಣಯ್ಯ, ನಾಗಪ್ಪ ಹಾಗೂ ಸಿಬ್ಬಂಧಿ ವರ್ಗದವರು ರೋಧವಾಗಿ ಆಯ್ಕೆ ಅವಿರೋಧವಾಗಿ ಆಯ್ಕೆಯಾದರು.