ಸುದ್ದಿವಿಜಯ, ದಾವಣಗೆರೆ: ಇವ್ರೂ ದಿನಪೂರ್ತಿ ಬಿಸಿ ನೀರು ಬಿಟ್ಟು ಬೇರೇನೂ ಕುಡಿಯೋದಿಲ್ಲ, ದಿನ ಪೂರ್ತಿ ಉಪವಾಸ ಇರುತ್ತಾರೆ…ಸುಮಾರು 8 ವರ್ಷದಿಂದ 80 ವರ್ಷದ ತನಕ 4 ತಿಂಗಳುಗಳ ಕಾಲ ಈ ವೃತ ಆಚರಿಸಿದ್ದು, ಸಮಾಫ್ತಿಗೊಂಡಿತು.
ಹೌದು…ಸನಾತನ ಧರ್ಮದಲ್ಲಿ ಚಾತುರ್ಮಾಸಕ್ಕೆ ವಿಶೇಷ ಮಹತ್ವವಿದ್ದು, ದಾವಣಗೆರೆಯ 300 ಕ್ಕೂ ಹೆಚ್ಚು ಜೈನ ಧರ್ಮಿಯರು ಕಠಿಣ ವೃತ ಆಚರಿಸಿ ಸರ್ವರಿಗೂ ಒಳ್ಳೆಯದಾಗಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ಮಹಾವೀರರನ್ನು ಪೂಜಿಸುವ ಜೈನ ಸಮಾಜ ಚಾತುರ್ಮಾಸದಲ್ಲಿ ಈ ಕಠಿಣ ವ್ರತಗೊಳ್ಳುತ್ತಾರೆ.
ಚಾತುರ್ಮಾಸದಲ್ಲಿ ಸಂತರು ಸಂಚಾರ ಕೈಗೊಳ್ಳುವುದಿಲ್ಲ:
ಸನಾತನ ಧರ್ಮದಲ್ಲಿ, ಚಾತುರ್ಮಾಸವನ್ನು ಪೂಜಾ ಕೈಂಕರ್ಯಗಳಿಗೆ ತುಂಬಾ ಮುಖ್ಯವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಈ ಸಮಯದಲ್ಲಿ ಹಿಂದೂ, ಜೈನ, ಬೌದ್ಧ ಇತ್ಯಾದಿ ಧರ್ಮಗಳ ಸಂತರು ಸಾಮಾನ್ಯವಾಗಿ ಒಂದೇ ಸ್ಥಳದಲ್ಲಿ ನೆಲೆಸಿ ದೇವರನ್ನು ಪೂಜಿಸುತ್ತಾರೆ. ಚಾತುರ್ಮಾಸ ಸಮಯದಲ್ಲಿ,
ಸಾಮಾನ್ಯವಾಗಿ ಭಕ್ತಾದಿಗಳು ಅನೇಕ ಕಠಿಣ ನಿಯಮಗಳನ್ನು ಅನುಸರಿಸುತ್ತಾರೆ ಮತ್ತು ಪೂಜೆ ಪುನಸ್ಕಾರಗಳಲ್ಲಿ ತಮ್ಮ ಗರಿಷ್ಠ ಸಮಯವನ್ನು ಕಳೆಯುತ್ತಾರೆ. ಈ ಸಮಯದಲ್ಲಿ ಶುಭ ಅಥವಾ ಮಂಗಳ ಕಾರ್ಯಗಳನ್ನು ನೆರವೇರಿಸಲಾಗುವುದಿಲ್ಲ.
ಮಳೆಗಾಲದಲ್ಲಿ ಜೀವೋತ್ಪತ್ತಿ (ಅಂದರೆ ಸುತ್ತಮುತ್ತಲಿನ ಜೀವಿಗಳ ಸಂಖ್ಯೆ ಹೆಚ್ಚಾಗುತ್ತದೆ) ಎಂದು ನಂಬಲಾದ ಮಳೆಗಾಲದ ಅತ್ಯಂತ ಪ್ರಮುಖವಾದ ಚೌಮಾಸ. ಈ ಮಾಸದಲ್ಲಿ ಜೈನರು ತಮ್ಮ ಪಟ್ಟಣವನ್ನು ತೊರೆಯುವುದಿಲ್ಲ.
ಈ ಮಳೆಗಾಲದಲ್ಲಿ ಜೀವಿಗಳು ಸಾಕಷ್ಟು ಹೊರ ಬರಲಿದ್ದು, ಓಡಾಡಿದರೆ ಅನೇಕ ಜೀವಿಗಳ ಸಾವಿಗೆ ಕಾರಣವಾಗುತ್ತದೆ ಎಂದು ಜೈನ ಸಮಾಜದವರು ಎಲ್ಲೂ ಹೋಗೋದಿಲ್ಲ. ಇದಲ್ಲದೆ, ಈ ಅವಧಿಯಲ್ಲಿ ಜನರು ಹೆಚ್ಚಾಗಿ ಉಪವಾಸ ಮಾಡುತ್ತಾರೆ. ಒಮ್ಮೆ ನೀರನ್ನು ಕುದಿಸಿ ಅದನ್ನು ಇಡೀ ದಿನ ಕುಡಿಯುತ್ತಾರೆ.
ಜೈನ ಧರ್ಮದ ಮುಖಂಡ ಉತ್ತಮ್‍ಚಂದ್ ಮಾತನಾಡಿ, 323 ತಪಸ್ವಿಗಳು 43 ದಿವಸಗಳ ಕಾಲ ಉಪವಾಸ ಕೈಗೊಂಡಿದ್ದು, ಎಂಟು ಉಪವಾಸಗಳ ತನಕ ಸಿದ್ದಿತಪ್ ಎಂಬ ವೃತವನ್ನು ಮಾಡಿದ್ದರು. ಇದರಿಂದ ಮೋಕ್ಷ ಪ್ರಾಪ್ತಿ ಸುಗಮವಾಗುತ್ತದೆ ಎಂಬ ನಂಬಿಕೆ ಇದೆ. ಧಾರ್ಮಿಕ ಉಪವಾಸದಲ್ಲಿ 2 ಟೈಮ್ ಜಪ, ಪ್ರವಚನ ಮಾಡುತ್ತಾರೆ. ಧ್ಯಾನ ಮಗ್ನರಾಗಿ ವಿಶ್ವಕ್ಕೆ ಮಂಗಳವಾಗಲಿ ಎಂದು ಆಶಿಸುತ್ತಾರೆ. ಎಲ್ಲ ಜೀವಿಗಳಿಗೆ ಸುಖ ಸಿಗಲಿ ಎಂದು ಉಪವಾಸ ಕೈಗೊಳ್ಳುತ್ತಾರೆ ಎಂದು ಹೇಳಿದರು.