ಸುದ್ದಿವಿಜಯ,ದಾವಣಗೆರೆ: ಭಾರತದ ಸಿರಿಧಾನ್ಯ ಬೆಳೆಗೆ ಪ್ರಸ್ತುತ ದಿನಮಾನದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಸೃಷ್ಟಿಯಾಗಿದೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಎಂದರೆ ರಾಗಿ ಬೆಳೆ. ಸಿರಿಧಾನಗಳ ಸಮ್ಮೇಳವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದು ಸಿರಿಧಾನ್ಯಗಳನ್ನು ಬೆಳೆಯುವ ವಿಧಾನಗಳ ವೈಜ್ಞಾನಿಕ ವಿಧಾನಗಳನ್ನು ರೈತರು ಅರಿತುಕೊಳ್ಳಬೇಕು ಎಂದು ಕೆವಿಕೆ ಬೇಸಾಯ ತಜ್ಞ ಬಿ.ಓ.ಮಲ್ಲಿಕಾರ್ಜುನ ಹೇಳಿದರು.
ಅಂತರಾಷ್ಟ್ರೀಯ ಸಿರಿಧಾನ್ಯ ಸಮ್ಮೇಳನವನ್ನು ಪ್ರಧಾನ ಮಂತ್ರಿ ಸನ್ಮಾನ್ಯ ನರೇಂದ್ರ ಮೋದಿಯವರು ನವದೆಹಲಿಯಲ್ಲಿ ಉದ್ಘಾಟಿಸಿದರು ಈ ಕಾರ್ಯಕ್ರಮದ ನೇರ ಪ್ರಸಾರವನ್ನು ದಾವಣಗೆರೆಯ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ನಂತರ ರೈತರನ್ನುದೇಶಿ ಮಾತನಾಡಿದರು.
ಸಿರಿಧಾನ್ಯಗಳನ್ನು ಎಲ್ಲಾ ತರದ ಮಣ್ಣು ಮತ್ತು ವಾತಾವರಣದಲ್ಲಿ ಬೆಳೆಯಬಹುದು. ಅಧಿಕ ಇಳುವರಿ ಕೊಡುವ ತಳಿಗಳನ್ನು ಬಳಸಿ ನೈಸರ್ಗಿಕ ಕೃಷಿಯ ತಂತ್ರಜ್ಞಾನದ ಮೂಲಕ ಸಿರಿಧಾನ್ಯಗಳನ್ನು ಬೆಳೆಯಬೇಕು. ಪ್ರಮುಖ ತಂತ್ರಜ್ಞಾನಗಳಾದ ಜೈವಿಕ ಗೊಬ್ಬರಗಳ ಬೀಜೋಪಚಾರ, ಸಾವಯುವ ಗೊಬ್ಬರ ಮತ್ತು ಹೊದಿಕೆ ಬೆಳೆಗಳನ್ನು ಬೆಳೆಯಬೇಕು ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕೇಂದ್ರದ ಮುಖ್ಯಸ್ಥ ಡಾ. ಟಿ.ಎನ್.ದೇವರಾಜ್ ಮಾತನಾಡಿ, ಸಿರಿಧಾನ್ಯಗಳನ್ನು ತಿನ್ನುವ ಅಭ್ಯಾಸವನ್ನು ಮಾಡಿಕೊಂಡರೆ ಆರೋಗ್ಯದಿಂದಿರಬಹುದು. ನವಣೆ, ಸಜ್ಜೆ, ಆರಕ, ರಾಗಿ ಪದಾರ್ಥಗಳನ್ನು ಹೆಚ್ಚು ಸೇವಿಸುವುದರಿಂದ ರೋಗಳು ದೇಹಕ್ಕೆ ತಾಗುವ ಪ್ರಮಾಣ ಕಡಿಮೆ. ಹೀಗಾಗಿ ಸಿರಿಧಾನ್ಯಗಳ ಬಳಕೆ ಮಾಡಿ ಎಂದು ರೈತರಿಗೆ ಸಲಹೆ ನೀಡಿದರು.
ಉದ್ಯಮಶೀಲ ಪ್ರಗತಿಪರ ರೈತ ರಘು ಕೂಲಂಬಿ ಮಾತನಾಡಿ, ರೈತರು ತಾವು ಬೆಳೆದ ಸಿರಿಧಾನ್ಯಗಳನ್ನು ನೇರವಾಗಿ ಮಾರುಕಟ್ಟೆ ಮಾಡಿದರೆ ಲಾಭ ಕಡಿಮೆ. ಹೀಗಾಗಿ ತಮ್ಮ ಬೆಳೆಗಳನ್ನು ಮೌಲ್ಯವರ್ಧನೆಗೆ ಹೆಚ್ಚು ಆದ್ಯತೆ ಕೊಡಬೇಕು ಹಾಗೂ ಸಿರಿ ಧಾನ್ಯಗಳಿಂದ ಮೌಲ್ಯವರ್ಧನೆ ಮಾಡಿರುವ ಪದಾರ್ಥಗಳಾದ ಬಿಸ್ಕೆಟ್, ಶಾವಿಗೆ, ಚಕ್ಕುಲಿ ಮತ್ತು ಎನರ್ಜಿ ಮಿಕ್ಸ್ ಮಾಡಿ ಮಾರಾಟ ಮಾಡಿದರೆ ಹೆಚ್ಚು ಆದಾಯವನ್ನು ಗಳಿಸಬಹುದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ನಿಟ್ಟೂರು ಶಿವಣ್ಣ, ದಾವಣಗೆರೆ ಪಟ್ಟಣದ ನಾಗರಿಕರು, ಪ್ರಗತಿಪರ ರೈತರು, ರೈತ ಉತ್ಪಾದಕ ಕಂಪನಿಯ ನಿರ್ದೇಶಕರು ಹಾಗೂ ಕೃಷಿ ವಿಜ್ಞಾನ ಕೇಂ