ರೈತರು ಬಿತ್ತನೆಗೂ ಮುನ್ನ ಕೃಷಿ ವಿಜ್ಞಾನಿಗಳ ಸಲಹೆ ಪಡೆಯಿರಿ:ಕೃಷಿ ವಿಜ್ಞಾನಿ ಡಾ.ಟಿ.ಎನ್.ದೇವರಾಜ

Suddivijaya
Suddivijaya May 18, 2023
Updated 2023/05/18 at 1:49 PM

ಸುದ್ದಿವಿಜಯ, ದಾವಣಗೆರೆ: ಜೂನ್ ಎರಡನೇವಾರದಲ್ಲಿ ಮಳೆಬರುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಬಿತ್ತನೆಗೂ ಮುನ್ನ ಕೃಷಿ ವಿಜ್ಞಾನಿಗಳ ಸಲಹೆ ಪಡೆದು ಬಿತ್ತನೆ ಕಾರ್ಯ ಮಾಡಿದರೆ ರೈತರಿಗೆ ಲಾಭ ಜಾಸ್ತಿ ಎಂದು ತರಳಬಾಳು ಕೃಷಿ ವಿಜ್ಞಾನ ಕೇಂದ್ರ (ಟಿಕೆವಿಕೆ) ಮುಖ್ಯಸ್ಥ ಹಾಗೂ ಹಿರಿಯ ಕೃಷಿ ವಿಜ್ಞಾನಿ ಡಾ.ಟಿ.ಎನ್.ದೇವರಾಜ ಸಲಹೆ ನೀಡಿದರು.

ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ದಾವಣಗೆರೆ ಇವರು ಮುಂಗಾರು ಹಂಗಾಮಿನ ಪೂರ್ವಸಿದ್ಧತೆ ಕಾರ್ಯಾಗಾರದಲ್ಲಿ ಪ್ರಾಸ್ತಾವಿಕ ಮಾತನಾಡಿದರು. ರೈತ ಬಾಂಧವರು ಸೂಕ್ತ ತಂತ್ರಜ್ಞಾನಗಳನ್ನು ಸರಿಯಾದ ಸಮಯಕ್ಕೆ ಬಳಸುವುದರಿಂದ ಇಳುವರಿಯನ್ನು ಹೆಚ್ಚಿಸಿಕೊಳ್ಳಬಹುದು ಎಂದರು.

ರೈತರಿಗೆ ಬಿತ್ತನೆಗೆ ಬೇಕಾಗುವ ರಸಗೊಬ್ಬರ, ಬೀಗಳನ್ನು ರೈತ ಉತ್ಪಾದಕ ಕಂಪನಿಯಲ್ಲಿ ಖರೀದಿಸಿದರೆ ರೈತರಿಗೆ ಲಾಭ ಆಗುತ್ತದೆ. ಜೊತೆಗೆ ಬೆಲೆಯೂ ನಿಗದಿಯಾಗಿರುತ್ತದೆ. ವೈಜ್ಞಾನಿಕವಾಗಿ ಬಿತ್ತನೆ ಮಾಡಬೇಕಾದರೆ ಅದಕ್ಕೆ ವಿಜ್ಞಾನಿಗಳ ಸಲಹೆ ಅಗತ್ಯ ಎಂದರು.

ಬೇಸಾಯ ತಜ್ಞ,ಮಲ್ಲಿಕಾರ್ಜುನ ಬಿ ಓ, ರೈತರು ಮುಂಗಾರಿನ ಪೂರ್ವ ಸಿದ್ಧತೆ ಕಾರ್ಯಕ್ರಮಗಳನ್ನು ಮಾಡಿಕೊಳ್ಳುವುದು ಸೂಕ್ತ. ಬಿತ್ತನೆಗೂ ಮುನ್ನ ಮೊದಲಿಗೆ ಮಣ್ಣಿನ ಪರೀಕ್ಷೆ ಆಧಾರದ ಮೇಲೆ ರಸಗೊಬ್ಬರದ ಬಳಕೆ, ಜೈವಿಕ ಗೊಬ್ಬರಗಳಿಂದ ಬೀಜೋಪಚಾರ, ಕೃಷಿ ಹೊಂಡ, ಕಂದಕ ಬದುಗಳು ಹಾಗೂ ಬದುಗಳನ್ನು ಮಳೆ ಬರುವ ಮುಂಚೆ ಸ್ವಚ್ಛ ಮಾಡುವುದರಿಂದ ನೀರು ಮತ್ತು ಮಣ್ಣಿನ ಸಂರಕ್ಷಣೆಯನ್ನು ಮಾಡಬಹುದು ಎಂದರು.

ಅಧಿಕ ಇಳುವರಿ ಕೊಡುವ ತಳಿ ಮತ್ತು ಹೈಬ್ರಿಡ್ ಗಳನ್ನು ಅಧಿಕೃತ ಮಾರಾಟಗಾರರಿಂದ ಕೊಳ್ಳುವುದು ಬಹಳ ಸೂಕ್ತ.ಏಕ ಬೆಳೆ ಪದ್ಧತಿ ಮೆಕ್ಕೆಜೋಳವನ್ನು ಬೆಳೆಯುವ ಬದಲು ಅಕಡಿ ಬೆಳೆಯಾಗಿ ತೊಗರಿಯನ್ನು ಬೆಳೆಯುವುದು ಸೂಕ್ತ. ತೊಗರಿಯ ತಳಿಗಳಾದ ಬಿಆರ್‍ಜಿ-5, ಟಿಎಸ್3ಆರ್ 2 ಕೆ.ಜಿ ಪ್ರತಿ ಎಕರೆಗೆ ಬೆಳೆಸಿ ಬಿತ್ತನೆ ಮಾಡುವುದು ಸೂಕ್ತ ಎಂದರು.
ಕಾರ್ಯಕ್ರಮದಲ್ಲಿ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ತಜ್ಞ ಎಂ.ಜಿ.ಬಸವನಗೌಡ, ರಘುರಾಜನ್, ಸಣ್ಣಗೌಡರ್ ಸೇದಂತೆ ಹಾವೇರಿ, ಚಿತ್ರದುರ್ಗ, ದಾವಣಗೆರೆ ವ್ಯಾಪ್ತಿಗೆ ಬರುವ 18 ರೈತ ಉತ್ಪಾದಕ ಕಂಪನಿಗಳ ಅಧ್ಯಕ್ಷರು, ಉಪಾಧ್ಯಕ್ಷರಗು, ನಿರ್ದೇಶಕರು, ಸಿಇಒ ಸೇರಿದಂತೆ ಅನೇಕ ಪ್ರಗತಿಪರ ರೈತರು ಭಾಗವಹಿಸಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!