suddivijyaya/kannada news/26/04/2023
ಸುದ್ದಿವಿಜಯ, ದಾವಣಗೆರೆ: ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಚೆಕಪೋಸ್ಟ್ ವ್ಯವಸ್ಥೆ ಮಾಡಲಾಗಿದೆ. ಏಪ್ರಿಲ್ 25 ರಂದು ರೂ.39991 ಮೌಲ್ಯದ 95.775 ಲೀ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ವಿವಿಧ ಚೆಕ್ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗುತ್ತಿದ್ದು, ಇದುವರೆಗೆ ರೂ.9474057 ನಗದು, ರೂ.24201806.99 ಮೌಲ್ಯದ 22956.195 ಲೀ ಮದ್ಯ, 3.853 ಕೆ.ಜಿ ಮಾದಕ ವಸ್ತು ಅಂದಾಜು ಮೌಲ್ಯ ರೂ.71610, ರೂ.8498048 ಮೌಲ್ಯದ ಕುಕ್ಕರ್ ಸೇರಿದಂತೆ ಇತರೆ ವಸ್ತುಗಳು ಒಟ್ಟು ರೂ.4.22 ಕೋಟಿಯಷ್ಟು ನಗದು ಮತ್ತು ಇತರೆ ವಸ್ತುಗಳನ್ನು ನೀತಿ ಸಂಹಿತೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ವಶಪಡಿಸಿಕೊಳ್ಳಲಾಗಿದೆ.
ಏ.25 ರಂದು ವಶಪಡಿಸಿಕೊಂಡ 95.775 ಲೀ ಮದ್ಯವನ್ನು ಅಬಕಾರಿ ಇಲಾಖೆಯಿಂದ ಕಾರ್ಯಾಚರಣೆ ಮಾಡಲಾಗಿದೆ.
ಹರಿಹರ ತಾಲ್ಲೂಕು ಭಾನುವಳ್ಳಿ ಗ್ರಾಮದ ಮೇಲಿನ ಸರ್ಕಲ್ ರಸ್ತೆಯಲ್ಲಿ ರಸ್ತೆಗಾವಲು ನಡೆಸುತ್ತಿದ್ದಾಗ ವ್ಯಕ್ತಿಯೊರ್ವ ಒಂದು ದ್ವಿಚಕ್ರ ವಾಹನದಲ್ಲಿ 90 ಮಿಲಿಯ Haywards whisky ಯ 242 ಟೆಟ್ರಾಪ್ಯಾಕೇಟುಗಳು 21.780 ಲೀ ಅಕ್ರಮ ಮದ್ಯವನ್ನು ಮಾರಾಟ ಮಾಡುವ ಸಲುವಾಗಿ ಸಾಗಾಟ ಮಾಡುವುದು ಪತ್ತೆ ಯಾಗಿದ್ದು, ದೊರೆತ ಮದ್ಯ ಮತ್ತು ದ್ವಿಚಕ್ರವಾಹನ KA 17 EZ 9025 ಇಲಾಖಾ ವಶಕ್ಕೆಪಡೆದು ಆರೋಪಿ ಪ್ರಭು ಬಿನ್ ನಾಗಪ್ಪ ವಿರುದ್ಧ ಘೋರ ಪ್ರಕರಣ ದಾಖಲಿಸಿದ್ದು,
ಜಫ್ತಿ ಪಡಿಸಿದ ಮದ್ಯದ ಒಟ್ಟು ಮೌಲ್ಯ- 10520/-ರೂ, ದ್ವಿಚಕ್ರ ವಾಹನದ ಒಟ್ಟು ಮೌಲ್ಯ 40,000 ರೂ, ಒಟ್ಟು ಮೌಲ್ಯ – 50520/- ರೂಗಳು ಎಂದು ಮಾಹಿತಿ ತಿಳಿದು ಬಂದಿದೆ.