ದಾವಣಗೆರೆ: ಇವರು ಹಸುಗಳಿಂದಲೇ ಬದುಕು ಕಟ್ಟಿಕೊಂಡ ಮಹಾನ್ ಕಾಯಕ ಯೋಗಿ

Suddivijaya
Suddivijaya September 6, 2023
Updated 2023/09/06 at 2:19 AM

ಸುದ್ದಿವಿಜಯ,ದಾವಣಗೆರೆ: ಇವರು ಗೋ ಪಾಲಕ. ಹಸುಗಳಿಂದಲೇ ಬದುಕು ಕಟ್ಟಿಕೊಂಡಿರುವ ಈ ಹೈನೋದ್ಯಮಿಗೆ ಕ್ಷೀರ ಪಿತಾಮಹ ವರ್ಗಿಸ್ ಕುರಿಯನ್ ಗುರುವಾಗಿದ್ದು, ಅವರ ತತ್ವದಡಿ ಗೋವುಗಳ ಲಾಲನೆ ಪಾಲನೆ ಮಾಡುತ್ತಿದ್ದಾರೆ.

ಹೌದು..ಚನ್ನಗಿರಿ ತಾಲೂಕಿನ ಮಾಯಕೊಂಡ ವಿಧಾನಸಭಾಕ್ಷೇತ್ರದ ಕಂಚುಗಾರನಹಳ್ಳಿಯ ಎಚ್.ಕೆ.ಬಸಪ್ಪರವರಿಗೆ ಗುಜರಾತ್‍ನ ವರ್ಗಿಸ್ ಕುರಿಯನ್ ಮಹಾ ಗುರುವಾಗಿದ್ದು, ಈಗಲೂ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಿದ್ದು, ಹೈನೋದ್ಯಮದಲ್ಲಿನ ಸಹಕಾರದ ಬಗ್ಗೆ ಒಂದಿಷ್ಟು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಾನು 2012ರಲ್ಲಿ ಕಂಚುಗಾರನಹಳ್ಳಿಯ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿದ್ದು, 2014ರಲ್ಲಿ ಶಿಮುಲ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದೆ. ಬಳಿಕ, 2019ರಲ್ಲಿ ಶಿಮುಲ್ ನಿರ್ದೇಶಕನಾಗಿ ಉಪಾಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದೆ. ನಾನು ಆಯ್ಕೆಯಾದ ಸಂದರ್ಭದ 2014ರಲ್ಲಿ ಚನ್ನಗಿರಿ ತಾಲೂಕಿನಲ್ಲಿ 28 ಹಾಲಿನ ಸೊಸೈಟಿಗಳಿದ್ದು, 2023ರಲ್ಲಿ ಅವುಗಳ ಸಂಖ್ಯೆ 78 ಸೊಸೈಟಿಗಳಿಗೆ ಏರಿ ಉತ್ತೇಜನ ಕೊಟ್ಟಿದ್ದೇನೆ.

ಈ ಮೂಲಕ ಹೈನು ಕ್ಷೇತ್ರದಲ್ಲಿ ನನ್ನದೇ ಆದ ಕಮಾಲ್‍ಮಾಡಿದ್ದೇನೆ ಎನ್ನುತ್ತಾರೆ ಹೈನೋದ್ಯಮಿ ಬಸಪ್ಪ. ರೈತರ ಕೈಗೆ ಸಿಗುವ ಇವರು ಯಾರು ಏನೇ ಕಷ್ಟ ಬಂದರೂ ಅವರ ಸಮಸ್ಯೆ ಬಗೆಹರಿಸಲು ಮುಂದಾಗುವರು. ಶಿಮುಲ್‍ನಿಂದ ಬರ ಬೇಕಾದ ಎಲ್ಲ ಸೌಲಭ್ಯಗಳನ್ನು ತಲುಪಿಸುವಲ್ಲಿ ರೈತರ ಮನ ಗೆದ್ದಿದ್ದಾರೆ ಎಂದು ಅವರ ಆಪ್ತವಲಯದವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಒಟ್ಟಾರೆ ಮೃದು, ಶಾಂತ ಸ್ವಭಾವರಾದ ಬಸಪ್ಪರವರಿಗೆ ಹಸುಗಳೇ ದೇವರು, ರೈತರೇ ಬಂಧುಗಳು ಎಂಬ ಭಾವನೆಯಲ್ಲಿ ಕೆಲಸ ಮಾಡುತ್ತಾ ಸಹಕಾರಿ ತತ್ವದಡಿ ಕೆಲಸ ಮಾಡುತ್ತಿದ್ದಾರೆ. ಇನ್ನು ಭಾರತದ ಹಾಲಿನ ಮನುಷ್ಯ ಎಂದೇ ಪ್ರಖ್ಯಾತರಾಗಿರುವವರು ಕ್ಷೀರಪಿತಾಮಹ ವರ್ಗಿಸ್ ಕುರಿಯನ್ ‘ಶ್ವೇತ ಕ್ರಾಂತಿ, ಕ್ಷೀರ ಕ್ರಾಂತಿ ಮಾಡಿದರೆ ಬಸಪ್ಪ ಚನ್ನಗಿರಿ-ಹೊನ್ನಾಳಿ ತಾಲೂಕಿನಲ್ಲಿ ಹೈನೋದ್ಯಮಿಗಳ ಬೆಂಬಲಕ್ಕೆ ನಿಂತಿದ್ದು, ಈ ಭಾಗದ ಜನರ ಹಿಂದಿರುವ ತಾರೆಯಾಗಿದ್ದಾರೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!