ಎಲ್ಲಾ ಮುಂದೆ ಬನ್ನಿ… ಎಂದು ಶೀಟಿ ಊದಿ ಕಂಡಕ್ಟರ್ ಆದ ಶಾಸಕ ಯಾರು ಗೊತ್ತಾ?

Suddivijaya
Suddivijaya June 13, 2023
Updated 2023/06/13 at 5:03 AM

ಸುದ್ದಿವಿಜಯ,ದಾವಣಗೆರೆ : ತಲೆಗೊಂದು ಖಾಕಿ ಟೋಪಿ, ಬಾಯಲ್ಲೊಂದು ವಿಶಲ್, ಸರಕಾರದಿಂದ ಮಹಿಳೆಯರಿಗೆ ಬಸ್ ಫ್ರೀ…ಬನ್ರಿ…ಬನ್ರಿ..

ಸವಳಂಗ, ನ್ಯಾಮತಿ ಎಲ್ಲಿ ಹೋದ್ರೂ ಉಚಿತ…ಹೀಗಂತ ಕಂಡಕ್ಟರ್ ಹೇಳೋದು ಕಾಮನ್….ಆದರೆ ಶಾಸಕರು ಹೇಳಿದ್ರೆ ಹೇಗೆ…

ಹೌದು…ದಾವಣಗೆರೆ ಜಿಲ್ಲೆಯ ಹೊನ್ನಾಳಿ ಶಾಸಕ ಶಾಂತನಗೌಡ ಕಂಡಕ್ಟರ್ ಧಿರಿಸು ಹಾಕಿ ಸರಕಾರಿ ಬಸ್ ನಲ್ಲಿ ಕೆಲ ಕಾಲ ಕಂಡಕ್ಟರ್ ಆದರು…ಡೋರ್ ಇಲ್ಲದ ಬಸ್ ನಲ್ಲಿ ಹತ್ತಿದ ಅವರು ನಗರ ಪ್ರದಕ್ಷಿಣೆ ಹಾಕಿ ಮಹಿಳೆಯರಿಗೆ ಬಸ್ ಉಚಿತ, ಎಲ್ಲಿ ಹೋದ್ರೂ ಫ್ರೀ ಅಂತ ಕೂಗುತ್ತಿದ್ದರು..ಅಲ್ಲದೇ ಅವರೇ ಟಿಕೆಟ್ ನೀಡಿ, ಕಾಂಗ್ರೆಸ್ ನ ಸಾಧನೆ ತಿಳಿಸುತ್ತಿದ್ದರು.

ಯಾರ್ರೀ ಹೊನ್ನಾಳಿ,ನ್ಯಾಮತಿ, ಹರಿಹರ ದಾವಣಗೆರೆ ; ಬನ್ನಿ ಬನ್ನಿ ಹೊನ್ನಾಳಿ,ನ್ಯಾಮತಿ,ಮಲ್ಲೆಬೆನ್ನೂರು ಹರಿಹರ ದಾವಣಗೆರೆ ಬರ್ರಿ ಬರ್ರಿ ಎಂದು ನಿರ್ವಾಹಕನ ಸಮವಸ್ತ್ರವನ್ನು ಧರಿಸಿಕೊಂಡು ಸೀಟಿ ಹೊಡೆದು ಮಹಿಳೆಯರಿಗೆ ಉಚಿತ ಟಿಕೆಟ್ ನೀಡಿ ಉಚಿತ ಪ್ರಯಾಣಕ್ಕೆ ಚಾಲನೆ ನೀಡಿದ ವೇಳೆ, ಪುರುಷರಿಗೆ ವಿಶ್ ಮಾಡಿದರು.

ಸದಾ ಕಾರಿನಲ್ಲಿ ಬಿಳಿ ಬಟ್ಟೆ ಹಾಕಿಕೊಂಡು ಓಡಾಡುತ್ತಿದ್ದ ಶಾಸಕ ಶಾಂತನಗೌಡ, ಥೇಟ್ ನಿರ್ವಾಹಕರಾಗಿ ಕೆಲಸ ಮಾಡಿದರು..ಅಲ್ಲದೇ ಅಲ್ಲಲ್ಲಿ ಸ್ಟಾಪ್ ಕೊಟ್ಟು ಮಹಿಳೆಯರನ್ನು ಹತ್ತಿಸಿಕೊಂಡು ರೈಟ್ ರೈಟ್ ಅಂತ ಹೇಳಿದ್ರು..

ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಶಾಂತನಗೌಡ ಮಹಿಳೆಯರ ಋಣವನ್ನು ತೀರಿಸುವ ಮೊದಲ ಕೆಲಸವನ್ನು ನಮ್ಮ ಕಾಂಗ್ರೈಸ್ ಸರಕಾರ ಮಾಡುತ್ತಿದೆ .

ಚುನಾವಣೆಗೂ ಮುಂಚೆ ಮಹಿಳೆಯರಿಗಾಗಿ ಹಲವು ಯೋಜನೆಗಳ ಭರವಸೆಯನ್ನು ನಮ್ಮ ಕಾಂಗ್ರೆಸ್ ಸರಕಾರ ನೀಡಿತ್ತು ಅದರಂತೆ ಮೊದಲನೆಯದಾಗಿ ಶಕ್ತಿ ಯೋಜನೆ ಮುಖಾಂತರ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯನ್ನು ಇಂದು ನಾವು ಜಾರಿಗೆ ತಂದು ಅವರ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟಿದ್ದೇವೆ ಎಂದು ತಿಳಿಸಿದರು.

 

ವಿಪಕ್ಷ ಹಾಗೂ ರಾಜ್ಯದ ಜನತೆಗೆ ಇವರು ನೀಡಿರುವ ಭರವಸೆ ಇಡೇರಿಸುತ್ತಾರಾ ಎಂಬ ಅನುಮಾನ ಇತ್ತು, ಆದರೆ ಇಂದು ನಮ್ಮ ಸರಕಾರ ಟೀಕಾಕಾರರ ಬಾಯಿ ಮುಚ್ಚಿಸಿದೆ ಎಂದರು.ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ನೀಡಿದ್ದ ಎಲ್ಲಾ ಭರವಸೆಗಳನ್ನು ಇಡೇರಿಸಿದ ಮೊದಲ ಸರಕಾರ ಹಾಗೂ ಇಡೀ ದೇಶದಲ್ಲಿ ನಮ್ಮ ರಾಜ್ಯ ಹೆಗ್ಗಳಿಕೆ ನಮ್ಮದು ಎಂದು ತಮ್ಮ ಸರಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಮ್ಮ ಸರಕಾರ ನೀಡಿರುವ ಎಲ್ಲಾ ಐದು ಗ್ಯಾರಂಟಿ ಯೋಜನೆಗಳನ್ನು ಹಂತಹಂತವಾಗಿ ಜಾರಿಗೆ ತರುತ್ತದೆ ಈ ಬಗ್ಗೆ ಯಾರಿಗೂ ಅನುಮಾಣ ಬೇಡ ಎಂದರು.

ಗೃಹಲಕ್ಷ್ಮಿ ಯೋಜನೆಯಲ್ಲಿ ಮನೆ ಯಜಮಾನಿಗೆ ಈ ಯೋಜನೆ ಸಿಗಲಿದೆ, ಯಾರೂ ಸಹ ಆತಂಕ ಪಡುವ ಅಗತ್ಯ ಇಲ್ಲ, ಅತ್ತೆಗೆ ಈ ಯೋಜನೆ ಸಿಕ್ಕರೆ ಸೊಸೆಯಂದಿರುವ ಬೇಜಾರು ಮಾಡಿಕೊಳ್ಳಬೇಡಿಇದರಿಂದ ನಮ್ಮ ಪಕ್ಷದ ಮೇಲೆ ಕೋಪ ಮಾಡಿಕೊಂಡು ನಮ್ಮಗೆ ಮತ ಹಾಕದೆ ಇರಬೇಡಿ ಎಂದ ಅವರು ಏನೇ ಆದರು ಸರಕಾರದ ಈ ಯೋಜನೆ ನಿಮ್ಮ ಮನೆಗೆ ಸಿಗಲಿದೆ ಎಂದರು.

ಜುಲೈ ಒಂದರಿಂದ ಬರುವ ವಿದ್ಯುತ್ ಬಿಲ್ಲನ್ನು ಯಾರೂ ಕಟ್ಟಬೇಡಿ, ಬೆಸ್ಕಾಂ ಸಿಬ್ಬಂಧಿಗಳು ಬಿಲ್ ಕೇಳಿದರೆ ಯಾರೂ ಸಹ ಕಟ್ಟಬೇಡಿ,ಅದಕ್ಕೆ ನಾನೇ ಹೊಣೆ,ನನ್ನ ಬಳಿ ಬನ್ನಿ ಎಂದು ಶಾಸಕರು ಹೇಳಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!