ಗಂಡನನ್ನೆ ಕೊಲೆ ಮಾಡಿದ ಹೆಂಡತಿ, ಆಕೆಯ ಪ್ರಿಯಕರ ಅರೆಸ್ಟ್!

Suddivijaya
Suddivijaya March 29, 2023
Updated 2023/03/29 at 11:54 AM

ಸುದ್ದಿವಿಜಯ, ದಾವಣಗೆರೆ: ಇತ್ತೀಚೆಗೆ ಗಂಡನನ್ನೆ ಕೊಲೆ ಮಾಡಿದ ಹೆಂಡತಿ ಮತ್ತು ಆಕೆಯ ಪ್ರಿಯಕರನನ್ನು ವಿದ್ಯಾನಗರ ಪೊಲೀಸರು ಬಂದಿಸಿದ್ದಾರೆ. ಹಗೆದಿಬ್ಬ ವೃತ್ತದ ಬಳಿಯ ಬುದ್ಧ ಬಸವ ನಗರದ ಶ್ವೇತಾ (28) ಹಾಗೂ ಅವಳ ಪ್ರಿಯಕರ ಚಂದ್ರಶೇಖರ್ (29) ಬಂಧಿತರು.

ಎಸ್.ಎಸ್. ಲೇಔಟ್ ಎ ಬ್ಲಾಕ್‍ನ ರಿಂಗ್ ರಸ್ತೆಯ ಖಾಲಿ ನಿವೇಶನದಲ್ಲಿ ಸುಮಾರು 35 ವರ್ಷದ ವ್ಯಕ್ತಿಯ ಮೇಲೆ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಹೋಗಿದ್ದರು. ಹೊಯ್ಸಳ ವಾಹನದ ಸಿಬ್ಬಂದಿಗಳು ಈ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದ

ಈ ಕುರಿತು ದೂರ ದಾಖಲಿಸಿಕೊಂಡಿದ್ದ ವಿದ್ಯಾನಗರ ಪೊಲೀಸರು ತನಿಖೆ ನಡೆಸಿ, ಮೃತ ವ್ಯಕ್ತಿಯ ಬೆರಳು ಮುದ್ರೆಯ ಸಹಾಯದಿಂದ ಮೃತ ವ್ಯಕ್ತಿಯು ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕು ಬ ಚವಳ್ಳಿಯ ಮಹಾಂತೇಶ್ (36) ಎಂದು ಪತ್ತೆ ಮಾಡಿದ್ದರು.

ತನಿಖೆ ಮುಂದುವರೆಸಿದಪೊಲೀಸರ ತಂಡವು ಇದೀಗ ಪತ್ನಿ ಹಾಗೂ ಪ್ರಿಯಕರನನ್ನು ಬಂದಿಸಿದ್ದಾರೆ. ಅವರಿಂದ ಕೊಲೆ ಮಾಡಲು ಬಳಸಿದ ಒಂದು ಲಕ್ಷ ರೂ. ಬೆಲೆ ಬಾಳುವ 2 ದ್ವಿಚಕ್ರ ವಾಹನಗಳು, 2 ಮೊಬೈಲ್ ಪೊನ್‍ಗಳು, 1 ಚಾಕು, ಬಿಯರ್ ಬಾಟಲ್‍ಗಳು, ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ವಿದ್ಯಾನಗರ ಠಾಣೆ ಪೊಲೀಸ್ ಇನ್‍ಸ್ಪೆಕ್ಟರ್ ಶ್ರೀಮತಿ ಪ್ರಭಾವತಿ ಸಿ ಶೇತಸನದಿ, ಪಿಎಸ್‍ಐ ರೇಣುಕಾ ಜಿ.ಎಂ., ಎಂ.ಎಸ್. ದೊಡ್ಡಮನಿ, ಮಂಜುನಾಥ ಕಲ್ಲದೇವರು ಸಿಬ್ಬಂದಿಗಳಾದ ಆಂಜನೇಯ, ಮಜೀದ್, ಸುರೇಶ್, ರಾಘವೇಂದ್ರ, ಮಾರುತಿ, ರಮೇಶ್ ನಾಯ್ಕ ನಟರಾಜ್, ಅಶೋಕ್, ಮಲ್ಲಿಕಾರ್ಜುನ, ಬಾಲಾಜಿ, ಹಾಗೂ ವಿದ್ಯಾನಗರದ ಎ.ಎಸ್.ಐ ನಾಗರಾಜ್, ರಾಜಪ್ಪ ಮಡಿವಾಳ,

ಗೋಪಿನಾಥ ನಾಯ್ಕ ಯೋಗೀಶ್ ನಾಯ್ಕ ಮಂಜುನಾಥ ಬಿ.ವಿ, ಗುಡ್ಡಪ್ಪ ಬಸವರಾಜ್, ಕನ್ನಪ್ಪ ನಾಗರಾಜ ಕೂಲೇರ, ರೋಜಾ, ಸರಸ್ವತಿ ಮತ್ತು ಎಫ್.ಪಿ.ಬಿ ಘಟಕದ ಸಿಬ್ಬಂದಿಗಳಾದ ಅಕ್ತರ್, ನಾಗರಾಜ ಕುಂಬಾರ, ಮಾರುತಿ, ವಿರೇಶ್, ಚಾಲಕರಾದ ರಾಮಚಂದ್ರಪ್ಪ ಹಾಗೂ ಜಿಲ್ಲಾ ಪೆÇಲೀಸ್ ಕಛೇರಿಯ ಸಿಬ್ಬಂದಿಯಾದ ರಾಘವೇಂದ್ರ, ಶಾಂತರಾಜ್ ರವರನ್ನು ಎಸ್ಪಿ ಸಿ.ಬಿ. ರಿಷ್ಯಂತ್, ಎಎಸ್‍ಪಿ ಆರ್.ಬಿ. ಬಸರಗಿ ಶ್ಲಾಘಿಸಿದ್ದಾರೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!