ದಾವಣಗೆರೆ ಹೊಸ ಜಿಲ್ಲಾಧಿಕಾರಿ ನೇಮಿಸಿದ ಸರಕಾರ

Suddivijaya
Suddivijaya July 25, 2023
Updated 2023/07/25 at 5:00 PM

ಸುದ್ದಿವಿಜಯ, ದಾವಣಗೆರೆ: ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ. ಎಂ.ವಿ. ವೆಂಕಟೇಶ್ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಜಿಲ್ಲಾಧಿಕಾರಿಯಾಗಿದ್ದ ಶಿವಾನಂದ ಕಾಪಶಿ ಅವರನ್ನು ವರ್ಗಾವಣೆ ಮಾಡಿರುವ ಸರಕಾರ, ಅವರ ಸ್ಥಾನಕ್ಕೆ  ಡಾ. ಎಂ.ವಿ. ವೆಂಕಟೇಶ್ ಅವರನ್ನು ನೇಮಿಸಿದೆ.

2009ನೇ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿರುವ ಡಾ. ವೆಂಕಟೇಶ್, ಈ ಮೊದಲು ಪಶು ಸಂಗೋಪನೆ ಇಲಾಖೆ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಅದಕ್ಕೂ ಮುನ್ನ ಜಲನಯನ ಅಭಿವೃದ್ಧಿ ಇಲಾಖೆ ಆಯುಕ್ತರಾಗಿ ಹಾಗೂ ಮಂಡ್ಯ ಜಿಲ್ಲೆ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!