ಸುದ್ದಿವಿಜಯ, ದಾವಣಗೆರೆ: ಜಿಲ್ಲಾ ಸಹಕಾರ ಸಂಘ ಗಳಿಂದ ನೂತನವಾಗಿ ಆಯ್ಕೆಯಾದ ಸಚಿವರು ಮತ್ತು ಶಾಸಕರುಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಆಗಸ್ಟ್ 13ರಂದು ಶಾಮನೂರು ರಸ್ತೆಯ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಡಾ.ಜಿ.ಆರ್.ಷಣ್ಮುಖಪ್ಪ ಹೇಳಿದರು.
ಶುಕ್ರವಾರ ಜಿಲ್ಲಾ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 13 ಭಾನುವಾರದಂದು ಬೆಳಿಗ್ಗೆ 11:30 ಕ್ಕೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದು, ತಮ್ಮ ಅಧ್ಯಕ್ಷತೆಯಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಶಾಮನೂರು ಶಿವಶಂಕರಪ್ಪ,
ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಶಾಸಕರಾದ ಹೊನ್ನಾಳಿ ಡಿ.ಜೆ.ಶಾಂತನಗೌಡ,
ಹರಿಹರ ಬಿ.ಪಿ.ಹರೀಶ್, ಚನ್ನಗಿರಿ ಬಸವರಾಜ್ ವಿ ಶಿವಗಂಗಾ ಜಗಳೂರು ಬಿ.ದೇವೇಂದ್ರಪ್ಪ ಹಾಗೂ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು.
ಮುಖ್ಯ ಅತಿಥಿಗಳಾಗಿ ಎನ್.ಜಿ.ಪುಟ್ಟಸ್ವಾಮಿ, ಸಿರಿಗೆರೆ ರಾಜಣ್ಣ, ಜಗದೀಶಪ್ಪ ಬಣಕಾರ್, ಜೆ ಎಸ್ ವೇಣುಗೋಪಾಲ ರೆಡ್ಡಿ, ಬೆಳ್ಳೊಡಿ ರಾಮಚಂದ್ರಪ್ಪ, ಬಿ.ಹಾಲೇಶಪ್ಪ, ಎಚ್ .ಕೆ.ಬಸಪ್ಪ, ಆರ್ ಎಂ. ರವಿ, ಬಿ. ಶೇಖರಪ್ಪ, ಜಿ.ಡಿ.ಗುರುಸ್ವಾಮಿ ಸೇರಿದಂತೆ ಇತರ ಗಣ್ಯ ವ್ಯಕ್ತಿಗಳು ಆಗಮಿಸುವರು ಎಂದರು.
ಪ್ರತಿ ಗ್ರಾಮದಲ್ಲೂ ಸಹಕಾರ ಸಂಘ ಸ್ಥಾಪಿಸುವುದು, ಶಿವಮೊಗ್ಗದ ಹಾಲು ಒಕ್ಕೂಟದಿಂದ ಬೇರ್ಪಡಿಸಿ ಜಿಲ್ಲೆಯಲ್ಲಿ ಹಾಲು ಒಕ್ಕೂಟ ಸ್ಥಾಪನೆ ಮಾಡುವುದು, ಸಹಕಾರಿ ಒಕ್ಕೂಟಗಳಿಗೆ ಸರ್ಕಾರದಿಂದ ಜಾಗ ಕೊಡಿಸಿ ಸ್ವಂತ ಕಟ್ಟಡ ಕಟ್ಟಿಸಿಕೊಡುವುದು.
ಹೊಸದಾದ ಸಿಸಿಎ ಕಾಯ್ದೆಯಲ್ಲಿ ಸೇವಾ ಭದ್ರತೆ ಒದಗಿಸುವುದು, ಕುಮಾರಸ್ವಾಮಿ ಆಡಳಿತದಲ್ಲಿ ಸಾಲ ಮನ್ನಾ ಯೋಜನೆಯಲ್ಲಿ ಸುಮಾರು 8 ಕೋಟಿ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡುವುದು, ಹಾಗೂ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ಸಚಿವರ ಗಮನಕ್ಕೆ ತರಲಾಗುವುದು ಎಂದರು.
ಗೋಷ್ಠಿಯಲ್ಲಿ ಎನ್.ಜಿ ಪುಟ್ಟಸ್ವಾಮಿ, ಪಿ. ಹಾಲೇಶಪ್ಪ, ಸಿರಿಗೆರೆ ರಾಜಣ್ಣ, ಜಿ.ಡಿ. ಗುರುಸ್ವಾಮಿ, ಬಿ.ಶೇಖರಪ್ಪ ಬೇತೂರು ಟಿ. ರಾಜಣ್ಣ, ಆರ್ ಜಿ ಶ್ರೀನಿವಾಸ್, ಕೆ.ಜಿ. ಷಣ್ಮುಖಪ್ಪ, ಮುರುಗೇಂದ್ರ, ಎಚ್.ಆರ್. ಲಿಂಗರಾಜು, ಕೆ.ಜಿ.ಸುರೇಶ್, ಕೆ.ಚಂದ್ರಣ್ಣ, ಕೆ. ಭುಮೇಶ್ವರಪ್ಪ, ಉಮೇಶ್, ವೈ,ಲೋಕೇಶ್ ಇತರರು ಉಪಸ್ಥಿತರಿದ್ದರು.