ಸುದ್ದಿವಿಜಯ,ದಾವಣಗೆರೆ : ಈಗ ಎಲ್ಲೆಡೆ ವಿಘ್ನ ನಿವಾರಕನ ಪ್ರತಿಷ್ಠಾಪನೆಯಾಗಿದೆ..ಆದರೆ ಅವನನ್ನು ಕಳಿಸುವ ತನಕ ಪೊಲೀಸರಿಗೆ ತುಸು ಕೆಲಸ ಹೆಚ್ಚಳವೇ ಸರಿ…
ಅದರಲ್ಲೂ ಅತಿ ಸೂಕ್ಷ್ಮ ಪ್ರದೇಶದಲ್ಲಿ ಇರುವ ಗಣಪತಿ ವಿಸರ್ಜನೆ ಸಮಯದಲ್ಲಿ ಖಾಕಿ ಪಡೆ ಪುಲ್ ಅಲರ್ಟ್ ಆಗಿರಲೇ ಬೇಕು…ಎಂತಹದ್ದೇ ಸನ್ನಿವೇಶ ಬರಲಿ ಅದನ್ನು ನಿಭಾಯಿಸುವ ಶಕ್ತಿ ಹೊಂದಿರಬೇಕು..ಅದಕ್ಕೆ ಸಮರ್ಥ ನಾಯಕನೂ ಬೇಕು…
ಹೌದು…ನಾವು ಹೇಳೋದಕ್ಕೆ ಹೊರಟಿರುವುದು ಯಾವುದೋ ಸಿನಿಮಾ ಕಥೆಯಲ್ಲ..ಬದಲಾಗಿ ದಾವಣಗೆರೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಎಲೆ ಮರೆ ಕಾಯಿಯಂತೆ ಕೆಲಸ ಮಾಡುವ ಡಿವೈಎಸ್ಪಿ ಪ್ರಕಾಶ್ರವರ ಕಥೆ… ಇವರು ಮೂಲತಃ ಹರಿಹರ ತಾಲೂಕಿನ ಇಂಡಸ್ಘಟ್ಟ ಗ್ರಾಮದವರು…
ಹರಿಹರ ಭಾಗದ ಹಳೆಕೊಳೆನಹಳ್ಳಿಯಲ್ಲಿ ಸತತ ಏಳುವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಂತರ ಪೊಲೀಸ್ ಇಲಾಖೆಗೆ ಬಂದವರು.
ಶಿಕ್ಷಕರಾಗಿ ಪಳಗಿರುವ ಕಾರಣ ಯಾವ ಸಮಯದಲ್ಲಿ ಏನು ಮಾಡಬೇಕೆಂದು ತಿಳಿದಿದ್ದಾರೆ..ಶಿವಮೊಗ್ಗ-ಭದ್ರಾವತಿ ಡಿಆರ್ನಲ್ಲಿ ಸುಮಾರು 4 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಗಣಪತಿ ವಿಸರ್ಜನೆ ವೇಳೆ ಬಂದೋಬಸ್ತ್ಗೆ ಅವರದ್ದೇ ಆದ ಪಾತ್ರವಹಿಸಿದ್ದಾರೆ.
ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಇದ್ದು, ಅದರಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ಪ್ರಮುಖ ಘಟಕಗಳಲ್ಲಿ ಒಂದಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆ, ನಗರದ ಪ್ರಮುಖ ಸ್ಥಾಪನೆಗಳು ಮತ್ತು ವಿಐಪಿಗಳಿಗೆ ಭದ್ರತೆ ಒದಗಿಸುವುದು, ಕೈದಿಗಳಿಗೆ ಬೆಂಗಾವಲು ವ್ಯವಸ್ಥೆ, ನಗದು ಮತ್ತು ಪ್ರಮುಖ ದಾಖಲೆಗಳಲ್ಲಿ ಸಿವಿಲ್ ಪೊಲೀಸರಿಗೆ ಸಹಾಯ ಮಾಡಲು ಜಿಲ್ಲಾ ಪೊಲೀಸ್ ಸಶಸ ವಿಭಾಗವಾಗಿದ್ದು, ಪ್ರಧಾನಿ ಮೋದಿ, ಸಿಎಂ ಬಂದೋಬಸ್ತ್, ಹಬ್ಬ ಹರಿದಿನಗಳಲ್ಲಿ ಕೈಗೊಳ್ಳುವ ಬಂದೋಬಸ್ತ್ನಲ್ಲಿ ಇವರು ಪ್ರಮುಖ ಪಾತ್ರವಹಿಸಿದ್ದಾರೆ.
ಕೈದಿಗಳಿಗೆ ಬೆಂಗಾವಲು, ವಿವಿಐಪಿಗಳು ಮತ್ತು ವಿಐಪಿಗಳಿಗೆ ಕಾವಲುಗಾರರು (ರಾಜ್ಯಪಾಲರು, ಮುಖ್ಯಮಂತ್ರಿಗಳು, ಮಂತ್ರಿಗಳು), ರಾಜ್ಯ ಅಥವಾ ಜಿಲ್ಲೆಗೆ ಭೇಟಿ ನೀಡುವ ವಿದೇಶಿ ಗಣ್ಯರಿಗೆ ಕಾವಲುಗಾರರು ಮತ್ತು ಬೆಂಗಾವಲು, ಗೌರವಾನ್ವಿತ ನ್ಯಾಯಾಲಯಗಳ ನ್ಯಾಯಾಧೀಶರಿಗೆ ಭದ್ರತೆ, ಶಸಾಸ ಮತ್ತು ಮದ್ದುಗುಂಡುಗಳಿಗೆ ಬೆಂಗಾವಲು, ಅಪರಾಧ ಮತ್ತು ಬಾಂಬ್ ಪತ್ತೆಗಾಗಿ ಶ್ವಾನದಳದ ಬಳಕೆ, ರಾಷ್ಟ್ರೀಯ ಹಬ್ಬ, ರಾಜ್ಯೋತ್ಸವ, ಜಿಲ್ಲಾ ಪೊಲೀಸ್ ಪರೇಡ್ ಮುಂತಾದ ಸಂದರ್ಭಗಳಲ್ಲಿ ಭದ್ರತೆಯ ಮೇಲ್ವಿಚಾರಣೆ.
ಜಿಲ್ಲೆಯ ಎಲ್ಲಾ ಪೊಲೀಸ್ ವಾಹನಗಳು ಇವರು ನಿಯಂತ್ರಣದಲ್ಲಿದ್ದು, ಅಷ್ಟೂ ಕೆಲಸಗಳನ್ನು ಅವರ ಸಿಬ್ಬಂದಿಗಳ ನೇತೃತ್ವದಲ್ಲಿ ಒತ್ತಡದ ನಡುವೆಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ದಾವಣಗೆರೆಯ ಕೊಂಡಜ್ಜಿ ಪೊಲೀಸ್ ಪಬ್ಲಿಕ್ ಶಾಲೆ ನಿರ್ಮಾಣದಲ್ಲಿ ಇವರ ಪಾತ್ರವೂ ಪ್ರಮುಖವಾಗಿದ್ದು, ಅದರ ಸಂಪೂರ್ಣ ನಿರ್ವಹಣೆ ಮಾಡುತ್ತಿದ್ದಾರೆ.
ಸದ್ಯ ಪಬ್ಲಿಕ್ ಶಾಲೆಯಲ್ಲಿ 1 ರಿಂದ 7ನೇತರಗತಿವರೆಗೂ ಶಾಲೆ ನಡೆಯುತ್ತಿದ್ದು, ಸಿಬಿಎಸ್ ಸಿಲಿಬಸ್ ಹೊಂದಿದೆ..ಎಸ್ಪಿ ರಿಷ್ಯಂತ್, ಚೇತನ್, ಅರುಣ್ ನೇತೃತ್ವದಲ್ಲಿ ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡಲಾಗಿದ್ದು, ಗುಣಮಟ್ಟದ ಶಿಕ್ಷಣ ಸಿಗುತ್ತಿರುವುದರಲ್ಲಿ ಡಿಎಸ್ಪಿ ಪ್ರಕಾಶ್ ಪಾತ್ರವೂ ಪ್ರಮುಖ ಕಾರಣವಾಗಿದೆ..ಇನ್ನು ಶಿವಮೊಗ್ಗದಲ್ಲಿ ಕೆಲಸ ಮಾಡುತ್ತಿರುವ ವೇಳೆ ಪ್ರವಾಹ ಬಂದಾಗ ಅಜ್ಜಿ-ಮೊಮ್ಮಗಳನ್ನು ಕಾಪಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಒಟ್ಟಾರೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ನಲ್ಲಿ ಮೇಲಧಿಕಾರಿಗಳ ಸೂಚನೆಯಂತೆ ಇವರು ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ಸಿಬ್ಬಂದಿಗಳಿಗೆ ಪ್ರೀತಿಪಾತ್ರರಾಗಿದ್ದಾರಲ್ಲದೇ ಸಿಟಿಯಲ್ಲಿ ಬಂದೋಬಸ್ತ್ ವೇಳೆ ಇವರ ಕೆಲಸ ಅನನ್ಯ.
*ಶಿವಮೊಗ್ಗ-ಭದ್ರಾವತಿ, ದಾವಣಗೆರೆ, ಹಾವೇರಿಯಲ್ಲಿ ಕೆಲಸ
*ಪ್ರವಾಹದ ಸಂದರ್ಭದಲ್ಲಿ ಅಜ್ಜಿ-ಮೊಮ್ಮಗಳನ್ನು ಕಾಪಾಡಿದ ಕೀರ್ತಿ
*ಶಿವಮೊಗ್ಗ-ಭದ್ರಾವತಿಯಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಗಣಪತಿ ವಿಸರ್ಜನೆ ಸಮಯದಲ್ಲಿ ಬಿಗಿ ಬಂದೋಬಸ್ತ್
*ಹಾವೇರಿ ಚುನಾವಣೆ ಸಮಯದಲ್ಲಿ ಕೆಲಸ
*ದಾವಣಗೆರೆ ಪೊಲೀಸ್ ಪಬ್ಲಿಕ್ ಶಾಲೆ ನಿರ್ಮಾಣದಲ್ಲಿ ಅಳಿಲು ಸೇವೆ
*ದಾವಣಗೆರೆಗೆ ಗಣ್ಯರು ಬಂದ ವೇಳೆ, ಎಲ್ಲ ಕಡೆ ಹದ್ದಿನ ಕಣ್ಣು
*ಕ್ರೈಂ ಡಾಗ್ ತುಂಗಾಳಿಗೆ ರಾಷ್ಟ್ರೀಯ ಮನ್ನಣೆ, ಶ್ವಾನ ಮೃತ ನಂತರ ಅದಕ್ಕೆ ಸಮಾಧಿ ಕಟ್ಟಿಸಿದ ಕೀರ್ತಿ