ಸುದ್ದಿವಿಜಯ, ದಾವಣಗೆರೆ:ಸಾಂಸ್ಕೃತಿಕ ನಗರಿ ಮೈಸೂರಿನಿಂದ ದಾವಣಗೆರೆಗೆ ಬಂದ ಎಸ್ಪಿ ರಿಷ್ಯಂತ್ ಬರುವಾಗಲೇ ಸದ್ದು ಮಾಡಿದ್ದ ಖಡಕ್ ಆಫೀಸರ್.
ಅಕ್ರಮ ಮರಳು, ಬೆಟ್ಟಿಂಗ್, ಕೊಲೆ ಹೀಗೆ ಹತ್ತಾರು ಪ್ರಕರಣಗಳನ್ನು ಕೆಲವೇ ದಿನಗಳಲ್ಲಿ ಬೇದಿಸಿದ ಇವರು ಅಂದ್ರೆ ಸಾಕು ಖಾಕಿ ಪಡೆಗೆ ಅಚ್ಚುಮೆಚ್ಚು.
ರಾಜಕಾರಣಿಗಳಿಗೆ ನಿದ್ದೆ ಬಾರದಂತೆ ಕೆಲಸ ಮಾಡಿದವರ ಹೆಸರಲ್ಲಿ ಇವರ ಹೆಸರೇ ಪ್ರಮುಖ.
ಇನ್ನು ಸಾರ್ವಜನಿಕರೊಂದಿಗೆ ಒಡನಾಟ ಇದ್ದ ಎಸ್ಪಿ ರಿಷ್ಯಂತ್ ಬೆಣ್ಣೆ ನಗರಿಯಿಂದ ಈಗ ಕಡಲ ಕಿನಾರೆಗೆ ಹೊರಟಿದ್ದಾರೆ.
ಹಾಗಾದ್ರೆ ಅವರು ಮಾಡಿದ ಕೆಲಸಗಳೇನು. ಅವರಿಗಿದ್ದ ಸವಾಲುಗಳೇನು ಎಂಬುದರ ಬಗ್ಗೆ ಸಂಪೂರ್ಣ ಡೀಟೇಲ್ಸ್ ಇಲ್ಲಿದೆ.
ಇವ್ರು ಐಪಿಎಸ್ ಅಧಿಕಾರಿ, ಆದ್ರೆ ಕಾಮನ್ ಮ್ಯಾನ್.ತನ್ನ ಸಿಬ್ಬಂದಿಗಳು ಕಷ್ಟ ಅಂತ ಹೋದ್ರೆ ಎಂದಿಗೂ ಕೈ ಬಿಡದ ಅಧಿಕಾರಿ.
ನನ್ನ ಜತೆ ನನ್ನ ಸಿಬ್ಬಂದಿಗಳೂ ಸಹ ಚೆನ್ನಾಗಿರಬೇಕೆಂಬ ಮನೋಭಾವ. ಆದ್ರೆ ತಪ್ಪು ಮಾಡಿದ್ರೆ ಅವ್ರ ಎಷ್ಟೇ ಆಪ್ತರಾದರೂ ಪರಪ್ಪನ ಅಗ್ರಹಾರಕ್ಕೆ ಹೋಗಲೇಬೇಕು.
ಖಡಕ್ ಆಫೀಸರ್ಸ್ ಅಂತಲೇ ಹೆಸರುವಾಸಿಯಾದ ಇವರು ರೌಡಿಗಳಿಗೆ ಸಿಂಹಸ್ವಪ್ನ, ರೈತರ ಪಾಲಿಗೆ ದೇವರು, ಕೆಲವರಿಗೆ ನಿದ್ದೆ ಬಾರದಂತೆ ಮಾಡುವ ಅಧಿಕಾರಿ , ಸದ್ಯ ಬೆಣ್ಣೆ ನಗರಿಗೆ ನೋವಿನ ವಿದಾಯ ಹೇಳಿರುವ 2013ರ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿ ಸಿ.ಬಿ.ರಿಷ್ಯಂತ ಕುರಿತು ಸಣ್ಣ ಇಂಟ್ರಡಕ್ಷನ್.ಇದರಲ್ಲಿ ಅತಿಶಯೋಕ್ತಿ ಇಲ್ಲ.ಅವರು ಇದ್ದದ್ದೆ ಹಾಗೆ.
ಬೆಂಗಳೂರಿನಲ್ಲಿ ಎಂಕಾಂ ಓದಿ, ದೆಹಲಿಯಲ್ಲಿ ಚಾರ್ಟೆಡ್ ಅಕೌಂಟ್ ವೃತ್ತಿ ಮಾಡಿದ ರಿಷ್ಯಂತ್, ಗೆಳೆಯರೊಬ್ಬರನ್ನು ನೋಡಿ ನಾನು ಕೂಡ ಉನ್ನತ ಹುದ್ದೆಗೆ ಏರುವ ಕನಸು ಕಂಡು ರಾತ್ರಿ-ಹಗಲನ್ನೆದೇ ಓದಿ ಉನ್ನತ ಶ್ರೇಣಿಗೆ ಹೋದವರು.
ಇವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಚಿಕ್ಕನಾಯಕನಹಳ್ಳಿಯಲ್ಲಿ ಪ್ರೋಬೇಷನರ್ ಆಗಿ ಸೇವೆ ಸಲ್ಲಿಸಿದ ಅವರು ಮಂಗಳೂರಿನಲ್ಲಿ ಎಎಸ್ಪಿಯಾಗಿ ಚೊಚ್ಚಲ ಪೋಸ್ಟಿಂಗ್ ಪಡೆದರು.
ಮೈಸೂರಿಗೆ ವರ್ಗಾವಣೆಯಾಗುವ ಮುನ್ನ ಬಾಗಲಕೋಟೆಯಲ್ಲಿ ಎಸ್ಪಿಯಾಗಿ ಕೆಲಸ ಮಾಡುತ್ತಿದ್ದರು. ಬಳಿಕ ದಾವಣಗೆರೆ ಬಂದ ಎಸ್ಪಿ ಪ್ರಸ್ತುತ ಕಡಲಕಿನಾರೆ ಮಂಗಳೂರಿಗೆ ಹೋಗಿದ್ದಾರೆ.
ದಕ್ಷಿಣ ಕನ್ನಡ, ಮೈಸೂರು, ಬಾಗಲಕೋಟೆ ಮತ್ತು ದಾವಣಗೆರೆಯಲ್ಲಿ ತನ್ನದೇ ಸ್ಟೇಲ್‌ನಲ್ಲಿ ಸಮಾಜಘಾತುಕರನ್ನು ಎಡೆಮುರಿಕಟ್ಟಿದವರ ಸಾಲಿಗೆ ಎಸ್ಪಿ ರಿಷ್ಯಂತ್ ಸೇರುತ್ತಾರೆ.
ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ತನ್ನ ಮಾವ ಮುನಿರತ್ನ ಚುನಾವಣೆಗೆ ನಿಂತ ಕಾರಣ ರಿಷ್ಯಂತ್ ಅವರನ್ನು ದಾವಣಗೆರೆಯಿಂದ ಸ್ಥಳ ನಿಯುಕ್ತಿಗೊಳಿಸದೇ ವರ್ಗಾವಣೆ ಮಾಡಲಾಗಿತ್ತು.
ನಂತರ ಮಂಗಳೂರಿನಲ್ಲಿ ಈ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ವಿಕ್ರಮ್ ಅಮತೆ ಅವರು ವೈದ್ಯಕೀಯ ರಜೆಯಲ್ಲಿ ತೆರಳಿದ ಹಿನ್ನಲೆಯಲ್ಲಿ ಸಿ.ಬಿ ರಿಷ್ಯಂತ್ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾರ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿದ್ದರು. ಬಳಿಕ ಮಂಗಳೂರು ಎಸ್ಪಿಯಾಗಿ ಅಧಿಕೃತ ಸ್ಥಳ ನಿಯೋಜನೆ ಮಾಡಲಾಗಿದೆ.
ನಾನು ಮಂಗಳೂರಿನಲ್ಲಿ ಎಎಸ್ಪಿಯಾಗಿ ಕೆಲಸ ಮಾಡಿದ್ದೇನೆ, ಎರಡೂವರೆ ವರ್ಷಕ್ಕೂ ಹೆಚ್ಚು ಕಾಲ ಬಾಗಲಕೋಟೆಯಲ್ಲಿ ಎಸ್ಪಿಯಾಗಿ ಕೆಲಸ ಮಾಡಿದ್ದೇನೆ.
ಪ್ರತಿಯೊಂದು ಜಿಲ್ಲೆ ವಿಶಿಷ್ಟವಾಗಿದೆ. ಎಲ್ಲಿಯೇ ಆಗಲಿ ಕಾನೂನು ಸುವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡುವುದು ನನ್ನ ಮೊದಲ ಆದ್ಯತೆ ಎಂಬುವುದು ಅವರ ಮಾತು.
ಕರ್ನಾಟಕದಲ್ಲಿ ಉತ್ತಮ ಅಧಿಕಾರಿಯೆಂದೇ ಖ್ಯಾತ ನಾಮ ಪಡೆದಿರುವ ಎಸ್ಪಿ ಸಿ.ಬಿ.ರಿಷ್ಯಂತ್ ಸರ್ಕಾರಿ ಸೇವೆ ನಿಮಿತ್ತ ಸುಮಾರು 12 ವರ್ಷಗಳ ಕಾಲ ಕುಟುಂಬ ಬಿಟ್ಟು ಹೊರಗೇ ಇರುತ್ತಾರೆ.
ಅವರಿಗೆ ಅಮ್ಮ ಪತ್ನಿ ಜತೆ ಇಲ್ಲದೇ ಇರುವ ಒಂಟಿತನ ಆಗಾಗ ಕಾಡುತ್ತಿರುತ್ತದೆ. ತಾಯಿ ಸಿ.ಭಾನುಮತಿ ಎಸ್ಪಿ ರಿಷ್ಯಂತ್‌ಗೆ ಮೊದಲ ಗುರು. ತಂದೆ ಕೃಷ್ಣ ಚೇತನ್ಯ ಸಾಧನೆಗೆ ನೀರೆರದವರು.
ಪತ್ನಿ ಎನ್.ಭಾರತಿ ಬಿಬಿಎಂ ಓದಿದ್ದಾರೆ. ಈಗ ಎಲ್ಎಲ್ಎಲ್ಬಿ ಮಾಡುತ್ತಿದ್ದಾರೆ. ಮಗಳು ತ್ರಿಶತಿಗೆ ಅಪ್ಪ ಎಂದರೆ ಪಂಚಪ್ರಾಣ..ಐಪಿಎಸ್ ಅಥವಾ ಐಎಎಸ್ ಓದುವ ಆಸೆ ಹೊಂದಿದ್ದಾಳೆ… ಇದು ಎಸ್ಪಿ ರಿಷ್ಯಂತ್ ಕುಟುಂಬದ ಚಿತ್ರಣ.
ಸದಾಲವಲವಿಕೆಯಿಂದ ಇರುವ ಎಸ್ಪಿ ರಿಷ್ಯಂತ್ ಸಿಬ್ಬಂದಿಗಳಿಗೆ ಅಚ್ಚುಮೆಚ್ಚಿನ ಅಧಿಕಾರಿಯಾಗಿದ್ದರು, ಸಾರ್ವಜನಿಕರು ಎಂತಹದ್ದೇ ಕಷ್ಟ ಹೇಳಿದರೂ ಅದನ್ನು ಸಮಾಧಾನವಾಗಿ ಕೇಳಿ ಅದಕ್ಕೆ ಪರಿಹಾರ ನೀಡುವುದು ಅವರ ಹವ್ಯಾಸ.
ಇನ್ನು ಮಾನವೀಯತೆವುಳ್ಳ ಎಸ್ಪಿ ರಿಷ್ಯಂತ್ ತನ್ನ ಸಿಬ್ಬಂದಿ ಕಷ್ಟ ಎಂದು ಬಂದಾಗ ಆರ್ಥಿಕವಾಗಿ ಕೈ ಹಿಡಿಯುತ್ತಿದ್ದರು. ದಾವಣಗೆರೆಯಲ್ಲಿ ಕಮ್ಯೂನಿಯಲ್ ಘಟನೆ ನಡೆದಾಗ ಅವುಗಳಿಗೆ ಸೂಕ್ತಪರಿಹಾರ ನೀಡುತ್ತಿದ್ದರು.
ಬೆಳ್ಳಗ್ಗೆ 10 ಕ್ಕೆ ಕಚೇರಿ ಆಗಮಿಸುತ್ತಿದ್ದ ಎಸ್ಪಿ ಸಂಜೆ ಆರುಗಂಟೆ ತನಕ ಕೆಲಸ ಮಾಡುತ್ತಿದ್ದರು. ಬದ್ದತೆ ಪ್ರಾಮಾಣಿಕತೆ ಇವರು ಧ್ಯೇಯವಾಗಿದ್ದು, ಯಾರು ಏನೇ ಹೇಳಿದರೂ ಕರ್ತವ್ಯಕ್ಕೆ ಮೋಸ ಮಾಡುತ್ತಿರಲಿಲ್ಲ. ಕೆಲವೊಮ್ಮೆ ಮಾನವೀಯತೆ ದೃಷ್ಟಿಯಲ್ಲಿ ಕೆಲಸ ಮಾಡುತ್ತಿದ್ದರು.
ಸಮಯ ಬಂದಾಗ ಕೋಪಿಸಿಕೊಳ್ಳುತ್ತಿದ್ದರು. ನೋವಾದಾಗ ಮೌನವಹಿಸುತ್ತಿದ್ದರು. ಸಮಸ್ಯೆ ಹೇಳಿಕೊಂಡು ಎಷ್ಟೇ ಜನರೂ ಬಂದ್ರೂ ಅಷ್ಟೇ ತಾಳ್ಮೆಯಲ್ಲಿ ಕೆಲಸ ಮಾಡುತ್ತಿದ್ದರು.
ಇದಿಷ್ಟು ಎಸ್ಪಿ ಸಿ.ಬಿ.ರಿಷ್ಯಂತ್‌ರ ಒಂದಿಷ್ಟು ಕಥೆ-ವ್ಯಥೆ..ಇನ್ನು ಎಸ್ಪಿ ರಿಷ್ಯಂತ್ ಬೆಣ್ಣೆ ನಗರಿ ಬಿಟ್ಟು ಕಡಲನಾರೆಗೆ ಹೋಗಿದ್ದಾರೆ.
ಅಲ್ಲಿನ ಸಮಾಜಘಾತುಕ ಅಲೆಗಳ ರುದ್ರತನಕ್ಕೆ ಪುಲ್ ಸ್ಟಾಪ್ ಹಾಕುವ ಶಕ್ತಿ ಅವರಿಗೆ ಇದ್ದೇ ಇದೆ… ಜನ ನೋವಿನಿಂದ ದಾವಣಗೆರೆ ಎಸ್ಪಿ ಕಳುಹಿಸಿಕೊಡುತ್ತಿದ್ದಾರೆ….ಹೋಗಿ ಬನ್ನಿ ಸರ್…..ಕಾಯುತ್ತಿರುತ್ತೇವೆ.