ಸುದ್ದಿವಿಜಯ, ದಾವಣಗೆರೆ: ವಿಡಿಯೋ ಕಾಲ್ ಮೂಲಕ ಪತ್ನಿಯ ನಗ್ನ ದೇಹ ತೋರಿಸಿ ವಿಕೃತಿ ಮೆರೆಯುತ್ತಿದ್ದ, ಗಂಡನ ವಿರುದ್ಧ ಮಹಿಳೆಯೊಬ್ಬರು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ ಘಟನೆ ನಗರದಲ್ಲಿ ಇತ್ತೀಚೆಗೆ ನಡೆದಿದೆ.
ಮೂಲತಃ ಜಗಳೂರು ತಾಲೂಕಿನ ದಿಬ್ಬದಳ್ಳಿ ಗ್ರಾಮದ ನಾಗವೇಣಿ, ಗಂಡನನ್ನು ಕಳೆದುಕೊಂಡಿದ್ದ ಕಾರಣ ಜೀವನಕ್ಕಾಗಿ ಅದೇ ಗ್ರಾಮದಲ್ಲಿ ಕಿರಾಣಿ ಅಂಗಡಿ ಹಾಕಿಕೊಂಡು ಜೀವನ ಸಾಗಿಸುತ್ತಿದ್ದಳು.
ಈಗಾಗಲೇ ಮೊದಲನೇ ಮದುವೆಯಾಗಿದ್ದ ದಾವಣಗೆರೆಯ ಭಾಷಾ ನಗರದ ಜೀಲಾನ್ ಖಾನ್ ಎಂಬಾತ, ನಾಗವೇಣಿಯನ್ನು ಉಜ್ಜಯಿನಿಯ ದರ್ಗಾಕ್ಕೆ ಕರೆದೊಯ್ದು ಇಸ್ಲಾಂ ಧರ್ಮದ ಪದ್ಧತಿಯಂತೆ ಮದುವೆಯಾಗಿ ಗುಲ್ಜಾರ್ ಭಾನು ಎಂಬುದಾಗಿ ಹೆಸರು ಸಹ ಬದಲಿಸಿದ್ದ.
ಹೀಗೆ ಮದುವೆಯಾಗಿದ್ದ ಪತ್ನಿಯ ನಗ್ನ ಚಿತ್ರವನ್ನು ವೀಡಿಯೊ ಕಾಲ್ ಮೂಲಕ ಇತರರಿಗೆ ತೋರಿಸಿ ವಿಕೃತಿ ಮೆರೆಯುತ್ತಿದ್ದ. ಇದರಿಂದ ಮನನೊಂದ ಮಹಿಳೆ ದಾವಣಗೆರೆ ಕೆಟಿಜೆ ನಗರ ಪೆÇಲೀಸ್ ಠಾಣೆಯಲ್ಲಿ ನ್ಯಾಯ ಕೊಡಿಸುವಂತೆ ಕೋರಿ ದೂರು ನೀಡಿದ್ದಾರೆ. ಆರೋಪಿ ಜಿಲಾನ್‍ಖಾನ್‍ನನ್ನು ಬಂಧಿಸಿರುವ ಪೆÇಲೀಸರು, ತನಿಖೆ ನಡೆಸುತ್ತಿದ್ದಾರೆ.