ಸುದ್ದಿವಿಜಯ,ದಾವಣಗೆರೆ : ಬುಲೆಟ್ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ..ಅದರಲ್ಲಿ ಹೋಗೋ ಗತ್ತೇ ಬೇರೆ…ಅದರಲ್ಲೂ ಅಚ್ಚು ಮೆಚ್ಚಿನ ಯುವತಿ ಮುಂದೆ ಬಂದ್ರೆ ಸಾಕು ಆ್ಯಕ್ಸೆಲೇಟರ್ ರೈಸ್ ಮಾಡಿ ಒಂದು ಲುಕ್ ಕೊಟ್ಟರೆ ಸಾಕು..ಹುಡುಗಿ ನೋಡೋದೆ ಇರೋದಕ್ಕೆ ಸಾಧ್ಯವೇ ಇಲ್ಲ.
ಆದರೆ ಇಷ್ಟೊಂದು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬುಲೆಟ್ ಬೈಕ್ ಈಗ ಕಳ್ಳರ ಪಾಲಾಗಿದೆ.
ಹೌದು…ಲಕ್ಷಕ್ಕಿಂತಲೂ ಹೆಚ್ಚು ಹಣ ಕೊಟ್ಟು ಬೆಲೆಬಾಳುವ ಬೈಕ್ ಕಳೆದುಕೊಂಡವರ ಕಥೆ-ವ್ಯಥೆ.
ಇನ್ನು ಲಕ್ಷಾಂತರ ರೂಪಾಯಿ ಕೊಟ್ಟು ಸಾಲ ಮಾಡಿ ಬುಲೆಟ್ ತೆಗೆದುಕೊಂಡ ಯುವ ಪಡೆಗೆ ಆರೋಪಿ ಚೆಳ್ಳೆ ಹಣ್ಣು ತಿನ್ನಿಸುತ್ತಿದ್ದು, ಈಗ ಆಜಾದ್ ನಗರ ಪೊಲೀಸರ ಅತಿಥಿಯಾಗಿದ್ದಾನೆ.
ನಗರದ ಸೂಫಿಯಾನ್ (20), ಖಾದ್ರಿ ಚೌದರಿ ಅಲಿಯಾಸ್ ಜಾವಿದ್ (24) ಬಂಧಿತ ಆರೋಪಿ. ಈ ಬೈಕ್ ಕಳ್ಳ ನಗರದಲ್ಲಿನ ಬುಲೆಟ್‌ನ್ನು ಎಗರಿಸಿ ಸವಣೂರಿನಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ.
ವಿಲಾಸಿ ಜೀವನಕ್ಕಾಗಿ ಸೂಫಿಯಾನ್ ಎಂಬಾತ ಬುಲೆಟ್ ಹಾಗೂ ಸ್ಪೇಂಡ್ಲರ್ ಬೈಕ್‌ನ್ನು ಕದಿಯುತ್ತಿದ್ದ. ಈತ ಕೇವಲ ಮೂರೇ ನಿಮಿಷದಲ್ಲಿ ಬುಲೆಟ್ ಕಳ್ಳತನ ಮಾಡುತ್ತಿದ್ದುಘಿ, ನೋಡುಗರನ್ನು ಅಚ್ಚರಿ ಮೂಡಿಸುತ್ತಿದ್ದ.
ಅದಕ್ಕಾಗಿ ಡೂಪ್ಲಿಕೇಟ್ ಕೀಗಳನ್ನು ತಯಾರು ಮಾಡಿಕೊಳ್ಳುತ್ತಿದ್ದ. ಅಲ್ಲದೇ ಡೂಪ್ಲೀಕೇಟ್ ಕೀ ಬಳಸಿ ಬೈಕ್ ಕದಿಯುವುದಲ್ಲದೇ ಹ್ಯಾಂಡ್ ಲಾಕ್‌ನ್ನು ನೇರವಾಗಿ ತೆಗೆಯುವುದರಲ್ಲಿ ನಿಸ್ಸೀಮನಾಗಿದ್ದ.
ಕಣ್ಣುಮುಚ್ಚಿ, ಕಣ್ಣು ತೆರೆಯುವುದರಲ್ಲಿ ಬುಲೆಟ್ ಬೈಕ್‌ನ್ನು ಎಗರಿಸುತ್ತಿದ್ದ. ನಂತರ ಇದೇ ಬೈಕ್‌ನ್ನು ಓಡಿಸಿಕೊಂಡು ಹೋಗಿ ಹಾವೇರಿ ಜಿಲ್ಲೆಯ ಸವಣೂರಿನಲ್ಲಿನ ಏಜೆಂಟ್‌ಗೊಬ್ಬನಿಗೆ ಕೇವಲ ಐದರಿಂದ ಹತ್ತು ಸಾವಿರಕ್ಕೆ ಕೊಡುತ್ತಿದ್ದ.
ಆ ಏಜೆಂಟ್ ಲಕ್ಷ ರೂ.ಬೆಲೆ ಬಾಳುವ ಬೈಕ್‌ನ್ನು 35 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ.
ಇವರಿಬ್ಬರು ಅಂತರ್ ಜಿಲ್ಲಾ ಕಳ್ಳರಾಗಿದ್ದು, ಹಾವೇರಿ ಹಾಗೂ ದಾವಣಗೆರೆ ಪೊಲೀಸರಿಗೆ ಬೇಕಾಗಿದ್ದರು. ಈ ಇಬ್ಬರು ಬೈಕ್ ಕಳ್ಳರನ್ನು ಬಂಧಿಸಿರುವ ಅಜಾದ್ ನಗರ ಠಾಣಾ ಪೊಲೀಸರು 7 ಬುಲೆಟ್ ಸೇರಿದಂತೆ 18 ಲಕ್ಷ ರೂ ಬೆಲೆಯ 12 ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರಿುಲ್ಲಾ ಎಂಬಾತ ತನ್ನ ಕೆಎ 17 ಇಟಿ 4660 ನಂಬರಿನ ಹಿರೋ ಸ್ಪೆಂಡರ್ ಬೈಕನ್ನು ಮಿಲ್ಲತ್ ಕಾಲೇಜು ಹತ್ತಿರ 07ನೇ ಕ್ರಾಸ್ ಬಿಡಿ ಲೇಔಟ್ ಮುಂಭಾಗ ನಿಲ್ಲಿಸಿದ್ದನ್ನು ಯಾರೋ ಕಳ್ಳರು ಕಳೆದ ಫ್ರೆಬ್ರವರಿ 12 ರಂದು ಕಳವು ಮಾಡಿಕೊಂಡು ಹೋಗಿದ್ದರು ಎಂದು ಆಜಾದ್ ನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು.
ಈ ದೂರು ಆಧರಿಸಿ ಹೆಚ್ಚುವರಿ ಪೊಲೀಸ್ ಅಧಿಕ್ಷಕ ರಾಮಗೊಂಡ ಬಿ. ಬಸರಗಿ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಅವರ ಮಾರ್ಗದರ್ಶದನದಲ್ಲಿ ಆಜಾದ್ ನಗರ ಪೊಲೀಸ್ ನಿರೀಕ್ಷಕ ಇಮ್ರಾನ್ ಬೇಗ್, ಉಪ ನಿರೀಕ್ಷಕ ಕಾಂತರಾಜ್.ಎಸ್ ಮತ್ತು ಶೃತಿ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ಎಸ್ ಎಸ್ ಎಮ್ ನಗರದ ಈದ್ಗಾ ಮೈದಾನದ ಮುಂಭಾಗದ ಬಳಿ ಆರೋಪಿಗಳಾದ ಸೂಫಿಯಾನ್ ಮತ್ತು ಖಾದ್ರಿ ಚೌಧರಿ ಅವರನ್ನು ಬಂಧಿಸಿದೆ.
ದಾವಣಗೆರೆ ಜಿಲ್ಲೆ ಹಾಗೂ ಹೊರ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ 12 ಕ್ಕೂ ಅಧಿಕ ಬೈಕ್ ಕಳ್ಳತನ ಮಾಡಿರುವುದು ವಿಚಾರಣೆ ವೇಳೆ ಬಂಧಿತರು ಒಪ್ಪಿಕೊಂಡಿದ್ದಾರೆ. ಆರೋಪಿತರಿಂದ ವಿವಿಧ ಠಾಣೆಗೆ ಸಂಬಂಧಪಟ್ಟ 07 ರಾಯಲ್ ಎನ್ಪೀಫಿಲ್ಡ್ ಸೇರಿದಂತೆ 18 ಲಕ್ಷ ರೂ ಮೌಲ್ಯದ ಒಟ್ಟು 12 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.