ಸುದ್ದಿವಿಜಯ, ಮಾಯಕೊಂಡ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ 2023-24ನೇ ಸಾಲಿನ ಬಜೆಟ್‍ನಲ್ಲಿ ಸರಕಾರಿ ಶಾಲಾ ಕಾಲೇಜುಗಳಲ್ಲಿ ಉತ್ತಮ ಸೌಲಭ್ಯಗಳನ್ನು ನೀಡಲು ಶಾಲಾ ಕೊಠಡಿಗಳಿಗೆ 310 ಕೋಟಿ ರೂ., ಪದವಿ ಪೂರ್ವ ಕಾಲೇಜು ಕೊಠಡಿಗಳಿಗೆ 240 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ವಾಣಿಜ್ಯ ಶಾಸ ಪ್ರಾಧ್ಯಾಪಕರ ವೇದಿಕೆ ಕಾರ್ಯದರ್ಶಿ ಎಸ್.ವೆಂಕಟೇಶ್ ಬಾಬು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಒಟ್ಟು 550 ಕೋಟಿ ರೂ.ಗಳ ವೆಚ್ಚದಲ್ಲಿ 8,311 ಕೊಠಡಿಗಳ ನಿರ್ಮಾಣ. ಗ್ಯಾರಂಟಿಗಳ ಜಾರಿಗಾಗಿ ಮತ್ತು ಯೋಜನಾ ವೆಚ್ಚಗಳಿಗೆ ಸಂಪನ್ಮೂಲ ಕ್ರೋಢೀಕರಣ, ರಾಜ್ಯ ತೆರಿಗೆ ಆದಾಯದಿಂದ – 54% ಸಾಲದಿಂದ – 26%, ಕೇಂದ್ರದ ತೆರಿಗೆ ಪಾಲಿನಿಂದ 12% ಕೇಂದ್ರ ಸರ್ಕಾರದ ಸಹಾಯ ಧನದಿಂದ 4%ರಾಜ್ಯ ತೆರಿಗೆಯೇತರ ರಾಜಸ್ವ 4,.ಅಪ್ಪು ಸ್ಮರಣಾರ್ಥಕ ಆಸ್ಪತ್ರೆ ಸ್ವಾಗತ ಎಂದು ಅವರು ಹೇಳಿದ್ದಾರೆ.