ಅಂಜದ ಗಂಡು ಎಸ್ಪಿ ಸಿ.ಬಿ.ರಿಷ್ಯಂತ್ ಎದುರಿಸಿದ್ದ ಸವಾಲು?

Suddivijaya
Suddivijaya June 26, 2023
Updated 2023/06/26 at 1:55 PM

ಸುದ್ದಿವಿಜಯ, ದಾವಣಗೆರೆ: ಯಾರಿಗೂ ಅಂಜದ ಗಂಡು ಎಂದರೆ ದಾವಣಗೆರೆ ಹಿಂದಿನ ಎಸ್‍ಪಿಯಾಗಿದ್ದ ಸಿ.ಬಿ.ರಿಷ್ಯಂತ್. ಯಾರೇ ಎಷ್ಟೇ ಪ್ರಭಾವಿತರಾದರೂ ಡೋಂಟ್ ಕೇರ್. ಅದರಲ್ಲಿ ಗಣ್ಯರನ್ನು ಬಿಡದೇ ಕಾನೂನು ಕ್ರಮ ಜರುಗಿಸಿದವರು ಎಂದರೆ ಎಸ್.ಪಿ.ರಿಷ್ಯಂತ್.

ಗಣ್ಯರ ಮೇಲೆ ಕೇಸ್
*ಬೆಟ್ಟಿಂಗ್ ಪ್ರಕರಣದಲ್ಲಿ ಹಾಲಿ ಚಿತ್ರದುರ್ಗ ಶಾಸಕ ವೀರೆಂದ್ರ ಪಪ್ಪಿ ಮೇಲೆ ಕೇಸ್

*ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಶಾಸಕ ಶಾಮನೂರು ಶಿವಶಂಕರಪ್ಪ ಮೇಲೆ ಚುನಾವಣಾ ಪೂರ್ವದಲ್ಲಿ ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆಂದು ಕೇಸ್

*ಅಕ್ರಮ ಮರಳು ದಂಧೆ ಆರೋಪ ಮಾಜಿ ಶಾಸಕ ರೇಣುಕಾಚಾರ್ಯ ವಿರುದ್ಧ ಕೇಸ್

*13 ರೌಡಿಗಳ ಗಡಿಪಾರು, ರೌಡಿ ಶೀಟರ್‍ಗಳಾದ ಮೊಟ್ಬೇಳ್ ಸೀನಾ, ಕಣುಮಗೆ ಚಳಿಬಿಡಿಸಿದ್ದ ಎಸ್ಪಿ

*ಸಿದ್ದರಾಮೋತ್ಸವದ ವೇಳೆ ಬೈಪಾಸ್‍ನಲ್ಲಿ ಐದು ಕಿ.ಲೋ.ಮೀಟರ್‍ನಷ್ಟು ಟ್ರಾಫಿಕ್ ಜಾಮ್, ನಡೆದುಕೊಂಡು ಬಂದ ಗಣ್ಯರು, ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂಬ ಆರೋಪ

*ಪ್ರಧಾನಿ ನರೇಂದ್ರಮೋದಿ ದಾವಣಗೆರೆಗೆ ಬಂದ ವೇಳೆ ಎಲ್ಲಿಯೂ ತೊಂದರೆಯಾಗದಂತೆ ಭದ್ರತೆ, ಆದರೂ ಪ್ರಧಾನಿ ಬರುವ ವೇಳೆ ಭದ್ರತಾ ಲೋಪವಾಗಿದೆಯೆಂಬ ಆರೋಪ

*ಶಿವಮೊಗ್ಗದಲ್ಲಿ ಪ್ರಧಾನಿ ಬಂದ ವೇಳೆ ಪತ್ರಕರ್ತರೊಬ್ಬರ ವಶ, ರಾಜ್ಯಾದ್ಯಂತ ಎಸ್ಪಿ ರಿಷ್ಯಂತ್ ವಿರುದ್ಧ ಪತ್ರಕರ್ತರ ಪ್ರತಿಭಟನೆ

*ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಗೋವಿನಕೋವಿ ಗ್ರಾಮದ ಬಳಿ ವಿಜಯಪುರ ಜೈಲಿನಿಂದ ಬಿಡುಗಡೆಯಾಗಿದ್ದ ಹಂದಿ ಅಣ್ಣಿ ಕೊಲೆಯ ಆರೋಪಿಗಳಾದ ಮಧು ಮತ್ತು ಆಂಜನೇಯ ಬೈಕ್ ನಲ್ಲಿ ಸಂಚರಿಸುತ್ತಿದ್ದ ವೇಳೆ ಸ್ಕಾರ್ಪಿಯೋದಲ್ಲಿ ಬಂದ ದುಷ್ಕರ್ಮಿಗಳ ತಂಡ ಮಾರಣಾಂತಿಕ ಆಯುಧಗಳಿಂದ ಹಲ್ಲೆ ನಡೆಸಿ ಪರಾರಿಯಾಗಿತ್ತು. ಈ ಸಂದರ್ಭದಲ್ಲಿ ಹುಬ್ಬಳ್ಳಿ ಪತ್ರರ್ತನೊಬ್ಬನ ಬಂಧನ, ಪತ್ರಕರ್ತರ ಆಕ್ರೋಶ.

*ಆಟೋಗೆ ಮೀಟರ್ ಅಳವಡಿಕೆ, ಭಾರೀ ವಾಹನ ಬರೋದನ್ನು ತಡೆಯೋದಕ್ಕೆ ಸಾಧ್ಯವಾಗದೇ ಇದ್ದದ್ದು.

*ಗಣ್ಯರನ್ನು ಅರೆಸ್ಟ್ ಮಾಡಿದ ವೇಳೆ ಪದೇ, ಪದೇ ರಾಜಕಾರಣಿಗಳ ಒತ್ತಡ

*ಡಿಆರ್ ಕಚೇರಿಯಲ್ಲಿ ಆಕಸ್ಮಿಕ ಗುಂಡಿನ ದಾಳಿಗೆ ಪೆÇಲೀಸ್ ಪೇದೆ ಮೃತ

Share this Article
Leave a comment

Leave a Reply

Your email address will not be published. Required fields are marked *

error: Content is protected !!